ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ಸಂಶೋಧನೆ – ಓದಿನ ಮೀಮಾಂಸೆ

ಡಾ. ಎಸ್. ನಟರಾಜ ಬೂದಾಳು
ಲೇಖಕರು, ನಿವೃತ್ತ ಪ್ರಾಧ್ಯಾಪಕರು ಕಾಲೇಜು ಶಿಕ್ಷಣ ಇಲಾಖೆ ಕರ್ನಾಟಕ

Published 2022-03-30

Keywords

  • ಪ್ರಮುಖ ಪದಗಳು : ಸಂಶೋಧನೆ, ಓದುಪಠ್ಯ, ಸಾಂಸ್ಕೃತಿಕ ಪಠ್ಯ, ಓದುವಿನ ನಿಯತ್ರಣ

How to Cite

ಬೂದಾಳು ಡ. ಎ. ನ. (2022). ಸಂಶೋಧನೆ – ಓದಿನ ಮೀಮಾಂಸೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 01–16. https://doi.org/10.59176/kjksp.v1i1.2173

Abstract

ಸಂಶೋಧನೆಗೆ ವಿಷಯದ ಆಯ್ಕೆಗೆ ನಾವೆಲ್ಲ ತುಂಬಾ ಎಚ್ಚರದಿಂದಿರುತ್ತೇವೆ. ಆದರೆ ಯಾವ ಓದನ್ನು ಬಳಸಿ ಈ ಸಂಶೋಧನೆಯನ್ನು ನಡೆಸುತ್ತೇನೆ ಎಂಬುದರ ಬಗೆಗೆ ನಮಗೆ ಸ್ಪಷ್ಟತೆ ಇರುತ್ತದೆಯೆ? ಏನನ್ನು ನೋಡುತ್ತೇವೆ ಎನ್ನುವುದಷ್ಟೆ ಮುಖ್ಯವೆಂದುಕೊಳ್ಳುತ್ತೇವೆ. ಯಾವ, ಯಾರ ಕಣ್ಣಿನ ಮೂಲಕ ನೋಡುತ್ತೇವೆ ಎನ್ನುವುದನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಕಾರಣವನ್ನಷ್ಟೆ ಗಮನಿಸಿ, ಪರಿಣಾಮ ನಿರೀಕ್ಷಿಸುತ್ತೇವೆ. ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಫಲ ಅಥವಾ ಪರಿಣಾಮಕ್ಕೆ ಕಾರಣ ಎಷ್ಟು ಮುಖ್ಯವೋ ಸನ್ನಿವೇಶವೂ ಅಷ್ಟೇ ಮುಖ್ಯ. ನಾವು ಆಯ್ಕೆ ಮಾಡಿಕೊಳ್ಳುವ ವಸ್ತುವಿನಿನಷ್ಟೆ ಮುಖ್ಯವಾದುದು ನಾವು ಒದಗಿಸಿಕೊಳ್ಳುವ ಓದು. ಅದು ಲೋಕವನ್ನು ನೋಡುವ ಕಣ್ಣು, ನಮ್ಮ ಸಂಶೋಧನಾ ವಿಷಯವನ್ನು ಕಟ್ಟಲು ಬಳಸುವ ಕಣ್ಣು. ಬಹು ದೀರ್ಘಕಾಲದಿಂದ ಅಕ್ಷರ, ಪಠ್ಯ ಮತ್ತು ಓದುಗಳು ನಿಯಂತ್ರಣಕ್ಕೆ ಒಳಗಾಗಿವೆ. ಇವೆಲ್ಲ ಸಾಂಸ್ಕøತಿಕ ವಸಾಹತುವಿನ ನಿಯಂತ್ರಣದ ಭಾಗವೇ ಆಗಿವೆ. ಈಗ ಅಕ್ಷರ ಮುಕ್ತವಾಗಿವೆ. ಪಠ್ಯ ಮತ್ತು ಓದುಗಳಿನ್ನೂ ನಿಯಂತ್ರಣದಲ್ಲಿಯೇ ಇವೆ. ಹಾಗಾಗಿ ಈ ಓದಿನ ಮೀಮಾಂಸೆಯನ್ನು ನಾವೀಗ ಗಂಭೀರವಾಗಿ ಇದಿರಾಗಬೇಕಿದೆ.

ನಮ್ಮ ಓದನ್ನು ನಿಯಂತ್ರಿಸುವ ಅನೇಕ ನಿಯಂತ್ರಕಗಳಿವೆ. ಅವುಗಳ ಒಂದು ಪಟ್ಟಿ ಮಾಡಿ ನೋಡಬಹುದು:

Downloads

Download data is not yet available.

References

  1. ೧. ರಹಮತ್ ತರೀಕೆರೆ., ಕನ್ನಡ ಸಂಶೋಧನೆ: ತಾತ್ವಿಕ ವಿಚಾರ., ೨೦೧೮., ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  2. ೨. ಎಂ. ಚಂದ್ರ ಪೂಜಾರಿ., ಸಂಶೋಧನೆ ಏನು? ಏಕೆ? ಹೇಗೆ? ೨೦೧೮., ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  3. ೩. ಡಿ. ಎನ್ ಶಂಕರ್ ಭಟ್., ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ್ಥವ್ಯವಸ್ಥೆ., ೧೯೭೮., ೨೦೧೯., ಭಾಷಾ ಪ್ರಕಾಶನ, ಸಾಗರ.
  4. ೪. ಡಿ. ಎನ್ ಶಂಕರ್ ಭಟ್., ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ., ೨೦೦೬., ಭಾಷಾ ಪ್ರಕಾಶನ, ಸಾಗರ.
  5. ೫. ಕೆ.ವಿ. ನಾರಾಯಣ., ಶೈಲಿಶಾಸ್ತç., ೧೯೯೦., ಕರ್ನಾಟಕ ಸಾಹಿತ್ಯ ಅಕಾಡೆಮಿ., ಬೆಂಗಳೂರು.