ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ಬಿ. ಆರ್. ಲಕ್ಷ್ಮಣರಾವ್ ಅವರ ಸಾಹಿತ್ಯಲೋಕ

ಡಾ. ಎಚ್. ಎಸ್. ಸತ್ಯನಾರಾಯಣ
ಲೇಖಕರು, ಉಪನ್ಯಾಸಕರು, ಕನ್ನಡ ವಿಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿಕ್ಕಮಗಳೂರು

Published 2022-03-30

Keywords

  • ಪ್ರಮುಖ ಪದಗಳು : ನವ್ಯೋತ್ತರ, ಕಾವ್ಯಗ್ರಹಿಕೆ, ಘರ್ಷಣೆ, ಪ್ರೇಮ ತುಳಿವ ಜಾಡು

How to Cite

ಸತ್ಯನಾರಾಯಣ ಡ. ಎ. ಎ. (2022). ಬಿ. ಆರ್. ಲಕ್ಷ್ಮಣರಾವ್ ಅವರ ಸಾಹಿತ್ಯಲೋಕ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 17–24. https://doi.org/10.59176/kjksp.v1i1.2174

Abstract

ನವ್ಯರಲ್ಲಿ ಮುಖ್ಯವಾಗಿ ತೇಜಸ್ವಿ, ಲಂಕೇಶ್, ಅನಂತಮೂರ್ತಿಯAತಹ ಲೇಖಕರು ಸಮಾಜವಾದಿ ವಿಚಾರಗಳ ಸೆಳವಿನಿಂದ ‘ನವ್ಯ’ ಸಾಹಿತ್ಯದಿಂದ ‘ನವ್ಯೋತ್ತರ’ದ ಕಡೆಗೆ ಹೊರಳುವ ಘಟ್ಟದಲ್ಲಿದ್ದರು. ಚಿತ್ತಾಲ, ಶಾಂತಿನಾಥ ದೇಸಾಯಿ, ಕಂಬಾರರAಥ ಅಗ್ರಗಣ್ಯರ ನಡೆ ಕೂಡ ಭಿನ್ನತೆಯ ಹುಡುಕಾಟದಲ್ಲಿತ್ತು. ಬಂಡಾಯ ಸಾಹಿತ್ಯ ಚಳುವಳಿಯು ಬರಹಗಾರರ ಒಕ್ಕೂಟದ ಮೂಲಕ ಮನ್ವಂತರ ಮೂಡಿಸುವ ಉತ್ಸಾಹದಲ್ಲಿತ್ತು. ಎಪ್ಪತ್ತರ ದಶಕದ ಆದಿಯಲ್ಲಿ ಮೂಡಿಬಂದ ಲಕ್ಷ್ಮಣರಾವರಂತಹ ಹೊಸ ಪೀಳಿಗೆಯ ಲೇಖಕರು ತಮ್ಮ ಜೀವನ ವಿಧಾನ, ಆಲೋಚನೆ ಮತ್ತು ಗ್ರಹಿಕೆಯ ಕ್ರಮ ಹಾಗೂ ಅಭಿವ್ಯಕ್ತಿಯ ವಿಧಾನಗಳಲ್ಲಿ ಪ್ರಜ್ಞಾಪೂರ್ವಕ ಸೋಪಜ್ಞತೆಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಿ.ಆರ್. ಲಕ್ಷ್ಮಣರಾವ್ ತುಂಬ ಸಹಜವಾಗಿಯೇ ತಮ್ಮದೇ ಆದ ಭಿನ್ನದಾರಿಯನ್ನು ಆಯ್ದುಕೊಂಡರೆAಬುದು ಗಮನಾರ್ಹ. ಸಾಂಸ್ಕೃತಿಕ ರಾಜಕೀಯ ಸೈದ್ಧಾಂತಿಕ ಘರ್ಷಣೆಯ ಏರುಗತಿಯ ಕಾಲಮಾನದಲ್ಲಿ ಸೃಜನಶೀಲ ಲೇಖಕನೊಬ್ಬ ದಿಟ್ಟತನದಿಂದ ತನ್ನ ಕಾವ್ಯ ಕಲೆಗಾರಿಕೆಯನ್ನು ನೆಲೆ ನಿಲ್ಲಿಸಿ ದೃಢ ಹೆಜ್ಜೆಯನ್ನೂರುವುದು, ಸ್ಥಿರತೆಯ ಪ್ರಕಾಶವನ್ನು ಬೆಳಗುವುದು ಸಾಮಾನ್ಯವಾದ ಸಂಗತಿಯೇನಲ್ಲ. ಈ ಕಾರಣಗಳಿಂದಲೇ ಬಿ. ಆರ್. ಲಕ್ಷ್ಮಣರಾವ್ ತುಳಿದ ಕಾವ್ಯ ‘ಪ್ರೇಮ ತುಳಿವ ಜಾಡು’ ನಮಗೆ ಮುಖ್ಯವೆನಿಸುವುದು.

Downloads

Download data is not yet available.

References

  1. ೧. ಬಿ.ಆರ್. ಲಕ್ಷ್ಮಣರಾವ್., ಬೆಸ್ಟ್ ಆಫ್ ಬಿಆರ್ ಎಲ್., ೨೦೨೧., ಸಪ್ನ ಬುಕ್ ಹೌಸ್, ಬೆಂಗಳೂರು
  2. ೨. ಬಿ. ಆರ್. ಲಕ್ಷ್ಮಣರಾವ್., ಗೋಪಿ ಮತ್ತು ಗಾಂಡಲೀನ ೫೦., ೧೯೭೧., ೨೦೨೧., ಅಂಕಿತ ಪುಸ್ತಕ, ಬೆಂಗಳೂರು
  3. ೩. ಬಿ. ಆರ್. ಲಕ್ಷ್ಮಣರಾವ್., ಎಚ್. ಎಸ್. ಸತ್ಯನಾರಾಯಣ., ಎನ್. ರಾಮನಾಥ್(ಸಂ)., ಗೆಳೆಯ ಲಕ್ಷ್ಮಣ., ೨೦೨೧., ತೇಜು ಪಬ್ಲಿಕೇಷನ್ಸ್., ಬೆಂಗಳೂರು.
  4. ೪. ಬಿ. ಆರ್. ಲಕ್ಷ್ಮಣರಾವ್., ಪಡಿಮಿಡಿತ., ೨೦೧೬., ಸಿ.ವಿ.ಜಿ ಪಬ್ಲಿಕೇಷನ್ಸ್., ಬೆಂಗಳೂರು.
  5. ೫. ಬಿ. ಆರ್. ಲಕ್ಷ್ಮಣರಾವ್., ಹಾಡಿನ ಜಾಡು., ೨೦೧೬., ಹಾಸನ ಪ್ರಕಾಶನ., ಹಾಸನ.