ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ಕರ್ನಾಟಕದ ಅವಧೂತ ಪರಂಪರೆ: ಸಾಂಸ್ಕೃತಿಕ ಶೋಧದ ನೆಲಮೂಲ ನೆಲೆ

ಡಾ. ಗೀತಾ ವಸಂತ
ಸಹಾಯಕ ಪ್ರಾದ್ಯಾಪಕರು, ಕನ್ನಡ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Published 2022-09-29

Keywords

  • ಪ್ರಮುಖ ಪದಗಳು : ಸಂಸ್ಕೃತಿ, ಮೀಮಾಂಸೆ, ಅವಧೂತ, ಸಿದ್ಧಪರಂಪರೆ, ಅರಿವು

How to Cite

ವಸಂತ ಡ. ಗ. . (2022). ಕರ್ನಾಟಕದ ಅವಧೂತ ಪರಂಪರೆ: ಸಾಂಸ್ಕೃತಿಕ ಶೋಧದ ನೆಲಮೂಲ ನೆಲೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 11–22. https://doi.org/10.59176/kjksp.v1i2.2211

Abstract

ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಬಹು ಜನರು ಅಭ್ಯಸಿಸಿದ ಮುಖ್ಯಧಾರೆಯನ್ನೇ ಮತ್ತೆ ಮತ್ತೆ ಹಿಂಬಾಲಿಸಿ ಸಿದ್ಧಮಾದರಿಯ ಫಲಿತಗಳಿಗೆ ಬಂದು ತಲುಪುವುದು ಒಂದು ಬಗೆಯಾದರೆ, ಯಾರೂ ತುಳಿಯದ ದಾರಿಯಲ್ಲಿ ನಡೆದು ಕಿರುಧಾರೆಗಳನ್ನು ಗುರುತಿಸುತ್ತ ಹೊಸ ದರ್ಶನವನ್ನೇ ಕಟ್ಟಿಕೊಡುತ್ತ ನಡೆಯುವುದು ಇನ್ನೊಂದು ಬಗೆ. ಸಂಸ್ಕೃತಿಯ ಏಕರೂಪಿ ಮಾದರಿಯಿಂದ ಹೊರಬಂದು ನೆಲಮೂಲ ಸಂಸ್ಕೃತಿಯ ವೈವಿಧ್ಯತೆಯನ್ನು ಶೋಧಿಸುವುದು ಕನ್ನಡ ಸಂಸ್ಕೃತಿ ಶೋಧದ ಮುಂದಿರುವ ಸವಾಲು. ಸಂಸ್ಕೃತಿಯು ಬದುಕಿನ ಹೊರವಲಯವಾದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಮನುಷ್ಯನ ಒಳವಲಯದಿಂದ ಹೊರಟ ಭಾಷೆ, ಕಲೆ, ಸಾಹಿತ್ಯ, ಮೀಮಾಂಸೆ ಮುಂತಾದವುಗಳಿಗೂ ಸಂಬAಧಿಸಿದುದಾಗಿದೆ. ಅಷ್ಟೇ ಅಲ್ಲ ಮನುಷ್ಯನ ಪ್ರಜ್ಞೆಯನ್ನೂ ಪ್ರಭಾವಿಸಿ ಆಂತರ್ಯವನ್ನೂ ಅದು ಪ್ರತಿನಿಧಿಸುತ್ತದೆ. ಆದರೆ, ಕರ್ನಾಟಕ ಸಂಸ್ಕೃತಿಯ ಬಗೆಗೆ ಹೇಳುವಾಗ ಸ್ಥೂಲವಾಗಿ ಇಲ್ಲಿ ಆಳಿಹೋದ ರಾಜಮನೆತನಗಳು, ಅವರು ಸ್ಥಾಪಿಸಿದ ಸಾಮ್ರಾಜ್ಯಗಳು, ಇಲ್ಲಿನ ಮತಸ್ಥಾಪಕರು, ಸಾಂಸ್ಥಿಕ ಧರ್ಮಗಳು ಹಾಗೂ ಅವುಗಳ ತಾತ್ವಿಕತೆ.. ಹೀಗೆ ಪ್ರಧಾನವಾಗಿ ಪ್ರಭುತ್ವ ಹಾಗೂ ಧರ್ಮದ ವಿಚಾರಗಳನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಕೃಷಿ-ವಾಣಿಜ್ಯ, ಕಲೆ-ಸಾಹಿತ್ಯ ಮುಂತಾದ ವಿವರಗಳು ವಿರಳವಾಗಿ ಗಣನೆಗೆ ಬಂದಿರುತ್ತವೆ. ಇವೆಲ್ಲವುಗಳ ಮಧ್ಯೆ ಎಷ್ಟೋ ಸಂಗತಿಗಳು ಲುಪ್ತವಾಗಿರುತ್ತವೆ. ಹೊರಪದರದಲ್ಲಿ ಗೋಚರವಾಗದೇ ಸುಪ್ತವಾಗಿರುತ್ತವೆ. ಹೀಗೆ ಅಲಕ್ಷ್ಯಕ್ಕೊಳಗಾದಂತೆ ತೋರಿದರೂ ಜನಮಾನಸವನ್ನು ಪ್ರಬಲವಾಗಿ ಪ್ರಭಾವಿಸುವ ಹಲವು ಸಂಗತಿಗಳಿವೆ. ಅದನ್ನೇ ಕಿರುಪರಂಪರೆಗಳೆಂದು ಗುರುತಿಸುತ್ತೇವೆ. ಅವಧೂತ ಮತ್ತು ಸಿಧ್ದ ಪರಂಪರೆಗಳು ಕೂಡ ಈ ಕಿರುಧಾರೆಗಳಲ್ಲಿ ಪ್ರಮುಖವಾದವುಗಳಾಗಿವೆ.

Downloads

Download data is not yet available.

References

  1. ಕಡವ ಶಂಭುಶರ್ಮ- ನಾಥಪಂಥದ ಅನುವಾದಿತ ಕೃತಿಗಳು, ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ, ಪುತ್ತೂರು, ೨೦೦೫
  2. ಕೃಷ್ಣಮೂರ್ತಿ.ಮ.ಸು.- ಸಿದ್ಧಸಾಹಿತ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦
  3. ಗೀತಾ ವಸಂತ- ಬೇಂದ್ರೆಕಾವ್ಯ: ಅವಧೂತಪ್ರಜ್ಞೆ, ದ.ರಾ.ಬೇಂದ್ರೆ ರಾಷ್ಟಿçÃಯ ಟ್ರಸ್ಟ್, ಧಾರವಾಡ, ೨೦೧೦
  4. ಗೋಡೀಹಾಳ ಕಾಂತೇಶರೆಡ್ಡಿ. ಆರ್- ಧರ್ಮಕಲ್ಯಾಣ: ಸಾಂಸ್ಕೃತಿಕ ಅಧ್ಯಯನ, ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ, ಸೊಂಡೂರು, ೨೦೧೧
  5. ಢೇರೆ ರಾಮಚಂದ್ರ ಚಿಂತಾಮಣ- (ಅನು) ಚಂದ್ರಕಾಂತ ಪೋಕಳೆ, ನಾಥಸಂಪ್ರದಾಯದ ಇತಿಹಾಸ, ಸಿದ್ಧ ಸಂಸ್ಥಾನ ಮಠ ಚಿಂಚಣಿ, ೨೦೦೪
  6. ಢೇರೆ ರಾಮಚಂದ್ರ ಚಿಂತಾಮಣ- (ಅನು) ಚಂದ್ರಕಾಂತ ಪೋಕಳೆ, ದತ್ತಸಂಪ್ರದಾಯದ ಇತಿಹಾಸ, ಸಿದ್ಧ ಸಂಸ್ಥಾನ ಮಠ ಚಿಂಚಣಿ, ೨೦೦೯
  7. ನಾಗರಾಜ ಡಿ.ಆರ್.- ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಅಕ್ಷರ ಪ್ರಕಾಶನ ಹೆಗ್ಗೋಡು, ೨೦೦೬
  8. ಮಲ್ಲೇಪುರಂ.ಜಿ.ವೆಂಕಟೇಶ- ಅರಿವಿನ ಕಥನ, ಸಿವಿಜಿ ಪ್ರಕಾಶನ, ಬೆಂಗಳೂರು, ೨೦೦೨
  9. ರಹಮತ್ ತರೀಕೆರೆ- ಕರ್ನಾಟಕದ ನಾಥಪಂಥ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬
  10. ಸತ್ಯಕಾಮ- ತಂತ್ರಯೋನಿ, ಮನೋಹರ ಗ್ರಂಥಮಾಲಾ, ಧಾರವಾಡ, ೨೦೦೫
  11. ಸೊಪ್ಪಿಮಠ ಬಸವಲಿಂಗ (ಸಂ)- ಕೊಡೇಕಲ್ ವಚನವಾಕ್ಯ ಸಂಪುಟ, ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೮