ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ಜೈನ ಜನಪದ ಪದ್ಯ ಸಾಹಿತ್ಯ

ಡಾ. ರವಿಶಂಕರ ಎ. ಕೆ.
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2022-09-30

Keywords

  • ಪ್ರಮುಖ ಪದಗಳು : ಜಾನಪದ, ಪರಿಕರ, ಪಠ್ಯರಚನೆ

How to Cite

ಎ. ಕೆ. ಡ. ರ. . (2022). ಜೈನ ಜನಪದ ಪದ್ಯ ಸಾಹಿತ್ಯ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 31–40. https://doi.org/10.59176/kjksp.v1i2.2213

Abstract

ಜನವಾಣಿ ಬೇರು; ಕವಿವಾಣಿ ಹೂ’ ಎಂಬ ಬಿ. ಎಂ. ಶ್ರೀಕಂಠಯ್ಯ ಅವರ ನುಡಿಯಂತೆ ಜಾನಪದ ಸಾಹಿತ್ಯವು ಪಠ್ಯಲೋಕದ ಪಾಂಡಿತ್ಯಕ್ಕೆ ತಳಹದಿಯನ್ನು ಸೃಷ್ಠಿಸಿದ ಸಾಹಿತ್ಯವೆಂದು ಕರೆಯಬಹುದು. ಎರಡು ಸಾವಿರದ ಮೇಲೆ ಎರಡು ದಶಕಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಾವುದೇ ಸಾಹಿತ್ಯ ಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಆ ಪಠ್ಯವು ಆಯಾ ಪರಿಸರದ ಮೂಲ ಜನಪದರ ಕೂಸಿನಂತೆ ಗೋಚರಿಸುತ್ತದೆ. ಜಾನಪದ ಸಾಹಿತ್ಯವು ವಿಶ್ವಸಾಹಿತ್ಯವಾಗಿದೆ. ಎಲ್ಲಾ ದೇಶಗಳಲ್ಲೂ, ಎಲ್ಲಾ ಧರ್ಮಗಳಲ್ಲೂ ತಾವು ಬದುಕುವ ಪರಿಸರ ಹಾಗೂ ಜೀವನ ವಿಧಾನದ ಕೈಗನ್ನಡಿಯಾಗಿ ರೂಪಿಸಿಕೊಂಡು ಬಂದಿದ್ದಾರೆ. ಮನುಷ್ಯನ ಅನುಭವಗಳೇ ಅನುಭಾವ ಸಾಹಿತ್ಯವಾದ ಪರಿಯು ಜಾನಪದವೆಂಬ ವಿಶಾಲಕ್ಷೇತ್ರವನ್ನು ಆವರಿಸಿದೆ.

Downloads

Download data is not yet available.

References

  1. ಮಲ್ಲಿಗೆ ದಂಡೆ., ೧೯೩೫., ಕಾಪಾಸೆ ರೇವಪ್ಪ(ಸಂ)., ಮುನ್ನುಡಿ., ಮಧುರಚೆನ್ನ., ಜಯಕರ್ನಾಟಕ, ಕಾರ್ಯಾಲಯ, ಧಾರವಾಡ
  2. ಜಾನಪದ ಗೀತೆಗಳು., ಮುನ್ನುಡಿ., ಎಂ. ಜೀವನ., ಸಿಟಿ ಬುಕ್ ಸ್ಟಾಲ್, ಹುಬ್ಬಳಿ
  3. ಗರತಿಯ ಹಾಡು., ೧೯೯೦., ಹಲಸಂಗಿಯ ಚೆನ್ನಪ್ಪ, ಲಿಂಗಪ್ಪ, ರೇವಪ್ಪ., ಪರಿಚಯ ನುಡಿ, ದ.ರಾ ಬೇಂದ್ರೆ., ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು
  4. ಜೈನಧರ್ಮಪರಿಭಾಷೆ., ೧೯೩೦., ಮಹಾದೇವ ಪ್ರಭಾಕರ ಪೂಜಾರ., ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
  5. ಜೈನ ಜನಪದ ಗೀತೆಗಳು., ೨೦೧೪., ಪದ್ಮಪ್ರಸಾದ್ ಎಸ್.ಪಿ., ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು
  6. ಜಿನಧರ್ಮ ದರ್ಪಣ ಪ್ರಶ್ನೋತ್ತರ ಮಾಲಾ., ೨೦೦೦., ರಾಮಚಂದ್ರ ಸ್ಯಾದ್ವಾದಿ ಸಿ., ಶ್ರೀ ಪಚ್ಚೆಪಾರ್ಶ್ವನಾಥಸ್ವಾಮಿ ಧರ್ಮಗ್ರಂಥ ಪ್ರಕಾಶನಾ ಸಮಿತಿ, ತುಮಕೂರು
  7. ಜೈನ ಸ್ತೋತ್ರಸಾರ ಸಮುಚ್ಚಯ., ೧೯೫೩., ಶ್ರೀ ೧೦೫ ಅತಿಬಲ ಗ್ರಂಥಮಾಲೆ, ಬೆಳಂಗಾವಿ
  8. ಹಾಡಾನ ಬನ್ನಿ ದನಿಯೆತ್ತಿ., ೧೯೮೧., ನಾಗೇಗೌಡ ಎಚ್.ಎಲ್., ಕರ್ನಾಟಕ ಜಾನಪದ ಟ್ರಸ್ಟ್, ಬೆಂಗಳೂರು