ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ಹಿಮ್ಮುಖವಾಗಿ ನಡೆಯುವುದಿಲ್ಲ ಬದುಕು...

ಡಾ. ಸೈಯದ್ ಮುಯಿನ್
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2022-09-30

Keywords

  • ಪ್ರಮುಖ ಪದಗಳು : ಸಂಸ್ಕೃತಿ, ವಿಚಾರಧಾರೆ, ಸ್ವಾವಲಂಬನೆ, ಸ್ವತಂತ್ರ

How to Cite

ಮುಯಿನ್ ಡ. ಸ. . (2022). ಹಿಮ್ಮುಖವಾಗಿ ನಡೆಯುವುದಿಲ್ಲ ಬದುಕು. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 41–56. https://doi.org/10.59176/kjksp.v1i2.2214

Abstract

ಭಾರತೀಯ ಸಂಸ್ಕೃತಿಯಲ್ಲಿ ಸಂತಾನವನ್ನು ಪಡೆಯುವುದು, ಅದರ ಲಾಲನೆ-ಪಾಲನೆ, ಪೋಷಣೆಯು ಹೆತ್ತವರ ಜವಾಬ್ದಾರಿಯಾಗಿರುವಂತೆ, ತನ್ನ ಜನಕರ, ಪೋಷಕರ ಜವಾಬ್ದಾರಿಯನ್ನು ಹೊತ್ತು, ಅವರು ವೃದ್ಧರಾದಾಗ ಅವರ ಪೋಷಣೆಯ ಹೊಣೆಗಾರಿಕೆಯು ಮಕ್ಕಳದ್ದಾಗಿರುತ್ತದೆ. ಇಂತಹ ಸಂಸ್ಕೃತಿ, ವಿಚಾರಧಾರೆ, ಆಶೋತ್ತರಗಳನ್ನು ಹೊಂದಿದ್ದ ಪರಿಸ್ಥಿತಿಯು ಇಂದು ವಿಮುಖಗೊಳ್ಳುತ್ತಿದೆ, ನವ ಮನಸುಗಳ ಯುವ ಜನತೆಯ ಆಲೋಚನಾಕ್ರಮ ಭಿನ್ನ ರೀತಿಯಲ್ಲಿ ಹರಿಯತೊಡಗಿದೆ. ‘ಪುತ್ರ(ಸಂತಾನ) ಶೋಕಂ ನಿರಂತರಂ’ ಎಂಬ ಮಾತಿನಂತೆ ಮಕ್ಕಳೊಂದಿಗೆ ಸದಾ ಇರುವಿಕೆಯನ್ನು ಬಯಸುವ ಹೆತ್ತವರ ಹಂಬಲವನ್ನು ಕಾಣತ್ತೇವೆ. ಆದರೆ ಪ್ರತಿಯೊಬ್ಬ ಮಾನವನಲ್ಲಿ ಸ್ವತಂತ್ರ ಪ್ರವೃತ್ತಿಯೂ ಅಂತರ್ಗತವಾಗಿರುತ್ತದೆ, ಆತ ತನ್ನ ಹೆತ್ತವರನ್ನು ಬಿಟ್ಟು ಸ್ವತಂತ್ರ ಬದುಕನ್ನು ಬಯಸುವುದು ಸಹಜವೇ ಆಗಿದೆ. ಇದನ್ನು ಅರ್ಥೈಸಿಕೊಂಡು ಮಕ್ಕಳ ಮೇಲೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಅವಲಂಬಿತವಾಗದೆ ಸ್ವಾವಲಂಬನೆ, ಸ್ವತಂತ್ರ ಭಾವವನ್ನು ಆಹ್ವಾನಿಸಿಕೊಳ್ಳುವುದು ಹೆತ್ತವರಿಗೆ ಇಂದು ಅನಿವಾರ್ಯವಾಗಿದೆ.

Downloads

Download data is not yet available.

References

  1. ಪ್ರವಾದಿ., ಮೂಲ: ಖಲೀಲ್ ಗಿಬ್ರಾನ್, ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ್, ಪುಟ ಸಂಖ್ಯೆ.,೬೫, ಅಭಿನವ ಪ್ರಕಾಶನ, ಬೆಂಗಳೂರು, ೧೯೯೯
  2. ಅರುಣಗೀತೆ., ಮಗನಿಗೊಂದು ಪತ್ರ: ಡಾ. ಎಚ್.ಎನ್. ಲಕ್ಷ್ಮೀನಾರಾಯಣಭಟ್ಟ, ಬೆಂಗಳೂರು, ೧೯೮೯