ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

‘ಊರದ ಚೇಳಿನ ಏರದ ಬೇನೆಯಲ್ಲಿ...’ (ಚಾಮರಸನ ಪ್ರಭುಲಿಂಗ ಲೀಲೆ - ಕವಿ-ಕಾವ್ಯ ಅವಲೋಕನ)

ಪ್ರೊ. ಕೃಷ್ಣಮೂರ್ತಿ ಹನೂರು
ಸಂದರ್ಶಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಹಾಗೂ ಶ್ರೀ ಮಂಟೇಸ್ವಾಮಿ ಅಧ್ಯಯನಕೇಂದ್ರ, ಚಾಮರಾಜನಗರ ವಿಶ್ವವಿದ್ಯಾನಿಲಯ, ಚಾಮರಾಜನಗರ

Published 2023-03-31

Keywords

  • ಪ್ರಮುಖ ಪದಗಳು : ಅಲ್ಲಮ, ವಚನ, ಚಾಮರಸ, ಕಾವ್ಯವಸ್ತು, ಕಾವ್ಯ ಮಾರ್ಗ, ಕುಮಾರವ್ಯಾಸ, ಅನುಸಂಧಾನ, ಕಥಾಮಂಜರಿ, ಬನವಾಸಿ, ಕಾಮಲತೆ, ಪ್ರಭುಲಿಂಗಲೀಲೆ, ಲೋಕಾತೀತ, ಹರಿಹರ, ರಗಳೆ, ಬಸವಣ್ಣ, ಶೂನ್ಯಸಂಪಾದನೆ, ಮೌಖಿಕ ಕಥನ, ಗೋರಕ್ಷ, ಬಯಲು, ನಿರಾಕಾರ

How to Cite

ಹನೂರು ಪ. ಕ. (2023). ‘ಊರದ ಚೇಳಿನ ಏರದ ಬೇನೆಯಲ್ಲಿ.’ (ಚಾಮರಸನ ಪ್ರಭುಲಿಂಗ ಲೀಲೆ - ಕವಿ-ಕಾವ್ಯ ಅವಲೋಕನ). ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 1–11. https://doi.org/10.59176/kjksp.v2i1.2284

Abstract

ಮನುಷ್ಯ ನಾಗರಿಕತೆಯ ನಂತರ ಬೆಳೆದು ಬೇರುಬಿಟ್ಟಅಧಿಕಾರ ದಾಹದ ರಾಜಕಾರಣ ಅದರೊಂದಿಗೆ ಬೆಸೆದುಕೊಂಡ ಹಲವು ಧರ್ಮಗಳ ಸಂಗಾತದಿAದ ಹುಟ್ಟಿಕೊಂಡ ಕಲಹಗಳು; ಇದೆಲ್ಲದರ ಹಿನ್ನೆಲೆಯಲ್ಲಿ ಶತಶತಮಾನಗಳಲ್ಲಿ ಹಾಸಿಕೊಂಡು ಬಂದ ಮೌಢ್ಯ ಮತ್ತು ಅಜ್ಞಾನವನ್ನೇ ಕಚ್ಚದ ಚೇಳಿನ ಏರದ ಬೇನೆ ಎನ್ನುತ್ತ ಅಲ್ಲಮ ಮತ್ತೊಂದು ಪ್ರಸಿದ್ಧ ವಚನದಲ್ಲಿ ‘ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು ಹೊನ್ನು ಮಣ್ಣಿಂಗೆ ಸತ್ತುದು ಕೋಟಿ, ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ’ ಎಂದ. ಈಮಾತುಗಳ ಹಿನ್ನೆಲೆಯಲ್ಲಿ ಅಲ್ಲಮನನ್ನು ಕುರಿತಾದ ಪ್ರಸಿದ್ಧ ಓದುಗಬ್ಬ ಚಾಮರಸನ`ಪ್ರಭುಲಿಂಗ ಲೀಲೆ’ಯನ್ನು ಅವಲೋಕಿಸಬಹುದಾಗಿರುತ್ತದೆ.

ಸಾಹಿತ್ಯ ಚರಿತ್ರೆಕಾರರು ಅಲ್ಲಮಪ್ರಭುವಿನ ಕಾಲವನ್ನು ಹನ್ನೆರಡನೆಯ ಶತಮಾನದ ಮಧ್ಯಭಾಗವೆಂದೂ, ಚಾಮರಸನ ಕಾಲವನ್ನು ಹದಿನೈದನೆಯ ಶತಮಾನದ ಮಧ್ಯಭಾಗವೆಂದೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಶರಣ ಅಲ್ಲಮ ಮತ್ತು ಕವಿ ಚಾಮರಸನ ಸ್ವಂತ ಬದುಕಿನ ವಿವರಗಳು ಅಷ್ಟಾಗಿ ಸಿಗದಿದ್ದರೂ ಅವರ ನಂತರ ಬಂದ ಕವಿ ಕಾವ್ಯ ದಾಖಲೆಗಳು ಸಾಕುಬೇಕೆನಿಸುವಂತಿವೆ. ಆದರೆ ಅವು ಲೀಲೆಯ ಕಥೆಗಳು. ಇತಿಹಾಸದಲ್ಲಿ ಸಂದ ರಾಜ ಮಹಾರಾಜರ ಕಾವ್ಯ ಪುರಾಣ ಕಥೆಗಳು ಸಾಹಸಭರಿತ `ವಿಜಯ’ಗಳಾದರೆ, ಆಗಿಹೋದ ಸಂತರ ಕಥನಗಳು `ಲೀಲೆ’ ಎನಿಸಿಕೊಳ್ಳುತ್ತವೆ.

Downloads

Download data is not yet available.

References

  1. ೧. ಪ್ರಭುಲಿಂಗಲೀಲೆಯ ಸಂಗ್ರಹ; ಸಂ.ಎಂ.ಎಸ್.ಬಸವಲಿಂಗಯ್ಯ, ಎಂ.ಆರ್.ಶ್ರೀನಿವಾಸಮೂರ್ತಿ, ೧೯೫೭, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
  2. ೨. ಚಾಮರಸನ ಪ್ರಭುಲಿಂಗಲೀಲೆ, ಸಂ.ಬಿ.ವಿ.ಮಲ್ಲಾಪುರ, ೨೦೧೧ (ಪುನರ್ ಮುದ್ರಣ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
  3. ೩. ಚಾಮರಸನ ಪ್ರಭುಲಿಂಗಲೀಲೆ, ಗದ್ಯಾನುವಾದ-ಡಾ.ಎಸ್.ವಿದ್ಯಾಶಂಕರ್, ೨೦೧೦ (ಪುನರ್ ಮುದ್ರಣ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
  4. ೪. ಚಾಮರಸ-ವಿಚಾರ ಸಂಕಿರಣ, ಸಂ.ಹAಪ. ನಾಗರಾಜಯ್ಯ, ೧೯೮೩; ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
  5. ೫. ಚಾಮರಸ ಕವಿಯ ಪ್ರಭುಲಿಂಗಲೀಲೆ (ಸರಳ ನಿರೂಪಣೆ), ಕೆ.ಎಸ್.ಗೋಪಾಲ್, ಸಮಾಜ ಪುಸ್ತಕಾಲಯ, ಧಾರವಾಡ.