ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

ಮಿರ್ಜಾನ್ ಕೋಟೆ

ಡಾ. ಎಚ್. ಎಸ್. ಅನುಪಮಾ
ವೈದ್ಯರು ಮತ್ತು ಸಾಹಿತಿಗಳು ಕವಲಕ್ಕಿ, ಹೊನ್ನಾವರ, ಉತ್ತರ ಕನ್ನಡ, ಕರ್ನಾಟಕ

Published 2023-03-31

Keywords

  • ಸ್ಮಾರಕ, ಸ್ಥಾವರ, ಕೋಟೆ, ಅವಶೇಷ

How to Cite

ಅನುಪಮಾ ಡ. ಎ. ಎ. (2023). ಮಿರ್ಜಾನ್ ಕೋಟೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 12–17. https://doi.org/10.59176/kjksp.v2i1.2285

Abstract

ಕರಾವಳೀ ಭಾಗಕ್ಕೆ ಸಮುದ್ರವು ಒಂದು ಗಡಿ ಹಾಗೂ ಕೋಟೆಯ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾಲುಸಾಲು ಹಬ್ಬಿರುವ ಸಹ್ಯಾದ್ರಿ ಪರ್ವತಶ್ರೇಣಿ ಹಾಗೂ ಅದರ ದಟ್ಟಡವಿಯು ಕಾವಲು ಕೆಲಸ ಮಾಡುವಂತಿವೆ. ಹೀಗಾಗಿ ಕೋಟೆಕೊತ್ತಲಗಳು ಈ ಭಾಗದಲ್ಲಿ ಬಹಳವಾಗಿಲ್ಲ. ಅಲ್ಲದೇ ಕೋಟೆಯೆಂದ ಕೂಡಲೇ ಕಣ್ಣಿಗೆ ಕಟ್ಟುವ ಗಟ್ಟಿಶಿಲೆಯ ದುರ್ಗಮ ಕೋಟೆಗಳೂ ಇಲ್ಲಿಲ್ಲ. ಇದಕ್ಕೆ ಚಾರಿತ್ರಿಕ ಕಾರಣಗಳು ಬೇರೆಯೇ ಇರಬಹುದು. ಕರಾವಳಿಯ ಕೋಟೆಗಳಲ್ಲಿ ಮಂಗಳೂರು ಬಳಿಯ ಬೇಕಲ ಕೋಟೆ ಪ್ರಸಿದ್ಧವಾಗಿದ್ದು ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಮಿರ್ಜಾನ್ ಕೋಟೆಯೂ ಐತಿಹಾಸಿಕ ಸ್ಮಾರಕವಾಗಿ ಹೆಸರು ಗಳಿಸಿಕೊಳ್ಳುತ್ತಿದೆ. ಕೋಟೆಕೊತ್ತಲಗಳು ಒಂದುಕಾಲದಲ್ಲಿ ರಾಜನ ಹಿರಿಮೆ ಸಾರುವ ಸ್ಥಾವರ ಸಂಕೇತಗಳಾಗಿದ್ದರೆ, ಇಂದು ಅವು ನಿನ್ನೆಯ ಕಡೆಗೊಮ್ಮೆ ಗಮನ ಹರಿಸುವಂತೆ ನಮ್ಮನ್ನು ಪ್ರಚೋದಿಸುವ ತಾಣಗಳಾಗಿವೆ.

Downloads

Download data is not yet available.