ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

ಕಾಮದಹನವೆಂಬೋ ಜಾನಪದೀಯ ಜೀವನ-ಕಥನ ಅನುಸಂಧಾನ

ಚಂದ್ರಶೇಖರ್ ಎನ್.
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ , ಬೆಂಗಳೂರು 560077

Published 2023-03-31

Keywords

  • ಕಾಮದಹನ, ತಮಟೆ, ಹಟ್ಟಿ, ಪಬ್ತಿ, ಕಾಮನ ಹಬ್ಬ, ಹೋಳಿಯ ದಿನ, ಚಾವಡಿ, ಶಿವ-ಪಾರ್ವತಿ, ಸಾಕ್ಷರತೆನೆ, ರಾಷ್ಟ್ರೀಯ ಹಬ್ಬ, ಚಪಲಚನ್ನಿಗರು, ಪೋಟೇಸು, ಆಂಗಿಕ ಭಾಷೆ, ಪ್ರದರ್ಶನ, ತಲೆಮಾರು, ಪೂರ್ವಸೂರಿ

How to Cite

ಎನ್. ಚ. (2023). ಕಾಮದಹನವೆಂಬೋ ಜಾನಪದೀಯ ಜೀವನ-ಕಥನ ಅನುಸಂಧಾನ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 18–25. https://doi.org/10.59176/kjksp.v2i1.2286

Abstract

ಭಾರತೀಯ ನೆಲದಲ್ಲಿ (ದೈವಿಕ ಅಥವಾ ಕ್ಷÄದ್ರ) ನಂಬಿಕೆಗಳೇ ಇಂದಿಗೂ ಈ ನರನನ್ನು ನಡೆಸುವ ಕಾರಕಶಕ್ತಿಗಳಾಗಿದ್ದು, ಅವುಗಳ ಕಾಲ ಮತ್ತು ಸನ್ನಿವೇಶಗಳು ನಿಸರ್ಗದೊಂದಿಗೆ ತಳುಕು ಹಾಕಿರುವ ರೀತಿ ವಿಶಿಷ್ಠವಾದುದು. ಲೋಕ ನಿಯಮಕ್ಕೆ ವಿರುದ್ಧವಾದ ಮಾನವ ತನ್ನ ಒಳಗೂ ಮತ್ತು ಹೊರಗೂ ತನ್ನೊಂದಿಗೆ ತಾನೇ ಹೋರಾಟಕ್ಕೆ ಇಳಿದುಬಿಡುತ್ತಾನೆಂಬುದನ್ನು ಮಾರ್ಮಿಕವಾಗಿ ನುಡಿಯುವವರು ನಮ್ಮ ಜನಪದರು. ಈ ಬಗೆಯ ವೈರುಧ್ಯಗಳಿಂದಾಚೆಗೂ ಬದುಕಿದೆ, ಬಣ್ಣಗಳಿವೆ ಎಂಬುದನ್ನು ಜಗತ್ತಿಗೆ ಸಾರಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರೆದೆಯಲ್ಲಿ ಸ್ವಚ್ಚಂದ ಭಾವವಿದೆ, ಅದರೊಂದಿಗೆ ಸೃಷ್ಟಿಯ, ಸಮಷ್ಟಿಯ ಗೆಲುವಿದೆ. ಕಾಮದಹನದಂತಹ ಜಾನಪದೀಯ ಆಚರಣೆಗಳನ್ನು ನೆಪವಾಗಿಸಿಕೊಂಡು, ಅವುಗಳನ್ನು ಕೇವಲ ಮನರಂಜನೆಗಾಗಿ ಮಾತ್ರವೇ ಅಭಿವ್ಯಕ್ತಿಸದೆ, ಶ್ರಮಿಕ ಜಗತ್ತಿನ ಸೊಲ್ಲುಸೊಲ್ಲಿಗೆ ಸೋಲಿಲ್ಲದಂತೆ ಬದುಕಿದವರು, ಭವಿಷ್ಯಕ್ಕೆ ಉತ್ತಮ ನಾಳೆಗಳನ್ನು ನೀಡಿದವರು. ನಮ್ಮ ನೆಲದ ಇಂತಹ ಜಾನಪದ ಲೋಕವಿವೇಕವು ಜಗತ್ತಿನಾದ್ಯಂತ ವೈವಿಧ್ಯಮಯವಾಗಿ ಕಂಡುಬರುವುದು ಜಾನಪದ ಜೀವಂತಿಕೆಗೆ ಸಾಕ್ಷಿ.

Downloads

Download data is not yet available.

References

೧.ಸುವರ್ಣ ಜಾನಪದ ಲೇಖನಗಳು- ಡಾ. ವೀರಣ್ಣ ದಂಡೆ, ಡಾ. ಶ್ರೀಪಾದ ಶೆಟ್ಟಿ. ಪ್ರಕಾಶನ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

೨. ಕಾಮನ ಹುಣ್ಣಿಮೆ (ಕಾದಂಬರಿ)- ಡಾ. ನಟರಾಜ ಹುಳಿಯಾರ್, ಪ್ರಕಾಶನ- ಪಲ್ಲವ ಪ್ರಕಾಶನ, ಬಳ್ಳಾರಿ.

೩. ವಕ್ತೃ: ಮುನಿಬ್ಯಾಟಪ್ಪ, ೮೧ ವರ್ಷ, ಹೊಲೆಯ (ತೋಟಿ), ಕಾಕಚೊಕ್ಕಂಡಹಳ್ಳಿ. ಶಿಡ್ಲಘಟ್ಟ ತಾಲ್ಲೂಕು.

೪. ವಕ್ತೃ: ನಾರಾಯಣಸ್ವಾಮಿ, ೬೬ ವರ್ಷ, ಒಕ್ಕಲಿಗ, ಕಾಮನ ಪೂಜಾರಿ, ಕಾಕಚೊಕ್ಕಂಡಹಳ್ಳಿ. ಶಿಡ್ಲಘಟ್ಟ ತಾಲ್ಲೂಕು.