ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

ಬೇಂದ್ರೆ ವಿರಚಿತ ರಾಮಾಯಣೋಪಾಖ್ಯಾನ

ಡಾ. ಸೈಯದ್ ಮುಯಿನ್
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2023-03-31

Keywords

  • ಪುರಾಣ, ಧರ್ಮ, ಮಹಾಕಾವ್ಯ, ಬೇಂದ್ರೆ ಕಾವ್ಯ, ರಾಮಾಯಣೋಪಾಖ್ಯಾನ

How to Cite

ಮುಯಿನ್ ಡ. ಸ. (2023). ಬೇಂದ್ರೆ ವಿರಚಿತ ರಾಮಾಯಣೋಪಾಖ್ಯಾನ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 26–32. https://doi.org/10.59176/kjksp.v2i1.2287

Abstract

ರಾಮಾಯಣ ಮಹಾಕಾವ್ಯವು ಎಲ್ಲಾ ಕಾಲಘಟ್ಟದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ಸಾಹಿತಿ, ಚಿಂತಕನಿಗೆ ಕಾಡಿದ ವಿಷಯಗಳನ್ನು ಹೊಂದಿರುವ ಬೃಹದ್ ಗ್ರಂಥವಾಗಿದೆ. ಕೆಲವರಿಗೆ ರಾವಣ ನಾಯಕನಾಗಿ ಕಂಡು ಆತನ ಉದಾತ್ತತೆಯನ್ನು ಚಿತ್ರಿಸಿದರೆ, ಮತ್ತೆ ಕೆಲವರು ಸೀತೆಯ ದೃಷ್ಟಿಯಲ್ಲಿ ರಾಮಾಯಣವನ್ನು ಕಟ್ಟಿಕೊಟ್ಟರು, ಮಂದುವರೆದು ಹನುಮನ ದೃಷ್ಟಿಯಲ್ಲಿ ರಾಮಾಯಣದ ಕಥಾಹಂದರವನ್ನು ಬಿತ್ತಿದರು, ರಾಮನ ಆದರ್ಶಗಳು, ಪಿತೃವಾಕ್ಯ ಪರಿಪಾಲನೆ, ಏಕಪತ್ನಿವ್ರತ ಧರ್ಮ, ರಾಜನ ಕರ್ತವ್ಯಗಳು, ಪ್ರಜಾಹಿತಾಸಕ್ತಿ ಇತ್ಯಾದಿಗಳು ಸದಾ ಕಾಲ ಭಾರತೀಯ ಸಂಸ್ಕೃತಿಗಳಿಗೆ ಪೂರಕವಾಗಿ ರೂಪುಗೊಂಡವು. ವಿಭಿನ್ನ ಕಥಾಶೈಲಿಯನ್ನು ಹೊಂದಿರುವ ನೂರಾರು ಜನಪದ ರಾಮಾಯಣದ ಕಥನಗಳು ನಮ್ಮ ಮುಂದಿವೆ. ಇಲ್ಲೆಲ್ಲ ರಾಮ, ಸೀತೆ, ಲಕ್ಷ್ಮಣ, ಹನುಮ, ರಾವಣ, ವಿಭೀಷಣ, ಧಶರಥ, ವಾಲಿ, ಸುಗ್ರೀವ, ಭಿನ್ನ ಭಿನ್ನ ಪಾತ್ರ ಪಾತಳಿಯಲ್ಲಿ ಭಿನ್ನ ಅಭಿವ್ಯಕ್ತಿ ಕ್ರಮಗಳಾಗಿ ಕಂಡರೆಆಧುನಿಕ ಭಾರತೀಯ ಸಾಹಿತ್ಯದಲ್ಲಿ ಕೈಕೆ, ಮಂಥರೆ, ಊರ್ಮಿಳೆಯ ದೃಷ್ಟಿಯಲ್ಲಿ ರಾಮಾಯಣ ರಚಿಸಿ, ಈ ಸಣ್ಣ ಪಾತ್ರಗಳನ್ನು ಸೀತೆಯಷ್ಟೇ ಸಮಾನ ಸ್ಥಾನಮಾನವನ್ನು ನೀಡಿ, ಇವರುಗಳ ಹೆಸರಿನಲ್ಲೇ ಅಧ್ಯಾಯಗಳು ಸೃಷ್ಟಿಕೊಂಡವು, ಈ ಸಾಲಿನಲ್ಲಿ ನಾಗಚಂದ್ರನ ರಾಮಾಯಣ, ಮೈಥಿಲಿ ಶರಣಗುಪ್ತ ಅವರ ಸಾಕೇತ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಅಂತಹ ಬೃಹತ್ ಮಹಾಕಾವ್ಯಗಳು ನಿಂತರೆ, ಬೇಂದ್ರೆ ಅವರೂ ಸಹ ತಾವು ರಾಮಾಯಣವನ್ನು ಕಂಡಂತೆ ಸಣ್ಣ ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದರ ವಿಮರ್ಶಾತ್ಮಕ ಪರಿಚಯ ಇಲ್ಲಿ ನೀಡಲಾಗಿದೆ.

Downloads

Download data is not yet available.

References

1. ಔದುಂಬರಗಾಥೆ : ಬೇಂದ್ರೆ ಸಮಗ್ರ ಕಾವ್ಯ ನಮನ, ಸಂಪುಟ-೧, ಸಂಪಾದಕರು- ವಾಮನ ಬೇಂದ್ರೆ, ಡಾ.ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳ್ಳಿ, ೨೦೦೩

2. ದಾಸ ಸಾಹಿತ್ಯದಲ್ಲಿ ರಾಮಾಯಣ ಪ್ರಸಂಗಗಳು- ಒಂದು ಸಮೀಕ್ಷೆ: ಸೈಯದ್ ಮುಯಿನ್, ಓದು ಬರಹ ಬಳಗ, ಬೆಂಗಳೂರು, ೨೦೧೧.

3. ಕುವೆಂಪು ಹನುಮದ್ದರ್ಶನ : ಡಾ.ಜಿ.ಕೃಷ್ಣಪ್ಪ, ಉದಯಭಾನು ಕಲಾಸಂಘ, ಬೆಂಗಳೂರು, ೨೦೨೦