ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

ಲೋಕಧ್ಯಾನದಲ್ಲಿ ‘ಸಂಭೋಳಿ’ ಕಂಡ ಸತ್ಯ-ಮಿಥ್ಯಗಳ ಸಂ-ದರ್ಶನ

ಡಾ. ಎಂ. ಭೈರಪ್ಪ
ಕನ್ನಡ ಸಹಾಯಕ ಪ್ರಾಧ್ಯಾಪಕ ಮಾನವಿಕ ಮತ್ತು ಭಾಷಾ ನಿಕಾಯ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಕೆ.ನಾರಾಯಣಪುರ, ಬೆಂಗಳೂರು-೫೬೦೦೭೭

Published 2023-03-31

Keywords

  • ಪ್ರಜ್ಞಾಪರಂಪರೆ, ಸಾಹಿತ್ಯಯಾನ, ಸಬಾಲ್ಟ್ರಾನ್ ಸಂವೇದನೆ, ಹನಿಗವನ, ಧರ್ಮಶಾಹಿ, ಜಾತಿಶಾಹಿ, ಬಂಡವಾಳಶಾಹಿ, ಸಂಭೋಳಿ, ದೇಶಪ್ರೇಮ, ಅಸ್ಪೃಶ್ಯತೆ, ಜನವಿಭಜನೆ, ಅಂತರ್ಯುದ್ಧ, ಬಹುವಾಸ್ತವ, ಬೆಳಕಿನ ಮೌನ

How to Cite

ಭೈರಪ್ಪ ಡ. ಎ. (2023). ಲೋಕಧ್ಯಾನದಲ್ಲಿ ‘ಸಂಭೋಳಿ’ ಕಂಡ ಸತ್ಯ-ಮಿಥ್ಯಗಳ ಸಂ-ದರ್ಶನ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 33–40. https://doi.org/10.59176/kjksp.v2i1.2288

Abstract

ಲೋಕಸಂಸ್ಕೃತಿಯ ಪ್ರಜ್ಞಾಪರಂಪರೆಯಲ್ಲಿ ಜೀವನಧ್ಯಾನದಿಂದ ಮೂಡಿದ ಅರಿವು ಕಾಲಕಾಲಗಳನ್ನೂ ದಾಟಿಕೊಂಡು ಬಂದು ಈ ಹೊತ್ತಿಗೂ ಯಾವೊತ್ತಿಗೂ ದೀಪಧಾರಿಯಾಗಿ ಕಂಗೊಳಿಸುತ್ತಿದೆ. ಜೀವನಧ್ಯಾನಿಗಳು ತಮ್ಮೊಳಗೆ ಲೋಕವನ್ನೂ, ಲೋಕದೊಳಗೆ ತಮ್ಮನ್ನೂ ಕನ್ನಡಿಯಾಗಿಸಿಕೊಂಡು ನಿತ್ಯಬೆಳಗುವ ಸತ್ಯ-ಮಿಥ್ಯಗಳ ಸಂ-ದರ್ಶನ ಮಾಡುತ್ತಾರೆ. ಮೌನ-ಮಾತುಗಳ ನಡುವಿನ ಮಧ್ಯಮದೀವಿಗೆ ಹಿಡಿದು ಬೆಳಕಿನ ಬೀಜಗಳನ್ನು ಚೆಲ್ಲ್ಲುತ್ತಾ ನಡೆಯುತ್ತಾರೆ. ಇಂಥ ಧ್ಯಾನಿಗಳ ಸಾಲಿನಲ್ಲಿ ಅಪರಿಮಿತ ಸಂವೇದನಾಶೀಲರ ವಿಸ್ತರಣೆಯಂತೆ ಕಾಣುವ, ಅಭಿವ್ಯಕ್ತಿ ಪರಂಪರೆಯಲ್ಲಿ ಅನನ್ಯತೆ ಸಾಧಿಸಿಕೊಂಡಿರುವ ಸಾಹಿತ್ಯಚೇತನರೂ ಅಸಂಖ್ಯ. ಲೋಕವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನುಂಗಿನೊಣೆಯುತ್ತಿರುವ ಕಾರ್ಗತ್ತÀ್ತಲೊಳಗೆ ಕರಗಿಹೋಗದೆ, ಅಲ್ಲಮನು ಹೇಳುವಂತೆ ‘ಅಪರಿಮಿತದ ಕತ್ತಲೆಯೊಳಗೆ ವಿಪರೀತ ಬೆಳಕನಿತ್ತವ’ರಂತೆ ನಿರ್ಭಿಡೆಯಿಂದ ನಡೆದ ಸಕಾಲಿಕ ಸಾಕ್ಷೀಪ್ರಜ್ಞೆಗಳು ಕನ್ನಡ ಸಾಹಿತ್ಯಯಾನದೊಳಗೂ ಅನೇಕ ಇವೆ.

Downloads

Download data is not yet available.

References

  1. ೧. ಸಂಭೋಳಿ; ಬೊಮ್ಮೇಕಲ್ಲು ವೆಂಕಟೇಶ್; ಬಯಲು ಪುಸ್ತಕ, ಚಿಂತಾಮಣಿ; ೨೦೨೧
  2. ೨. ಹೊಸಗನ್ನಡ ಸಾಹಿತ್ಯ ಚರಿತ್ರೆ; ಎಲ್.ಎಸ್.ಶೇಷಗಿರಿರಾವ್; ಅಂಕಿತ ಪುಸ್ತಕ, ಬೆಂಗಳೂರು; ೨೦೦೯.
  3. ೩. ಕನ್ನಡ ಸಾಹಿತ್ಯ ಚರಿತ್ರೆ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಅಂಕಿತ ಪುಸ್ತಕ, ಬೆಂಗಳೂರು; ೨೦೧೪.
  4. ೪. ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಪರಿಕಲ್ಪನೆ; ವಿವಿಧ ಲೇಖಕರು; ಪ್ರ.ಸಂ.ಬರಗೂರು ರಾಮಚಂದ್ರಪ್ಪ; ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು; ಪರಿಷ್ಕೃತ ಮುದ್ರಣ-೨೦೨೧.
  5. ೫. ಆಧುನಿಕ ಕನ್ನಡ ಸಾಹಿತ್ಯ: ನಡೆದು ಬಂದ ದಾರಿ; ಎಲ್.ಎಸ್.ಶೇಷಗಿರಿರಾವ್; ಅಂಕಿತ ಪುಸ್ತಕ, ಬೆಂಗಳೂರು; ೨೦೨೨.