ಸಂಪುಟ 2, ಸಂಚಿಕೆ 1, ಮಾರ್ಚ್ 2023
Articles

ಪತ್ತುಪಾಟ್ಟು : ಕನ್ನಡ ಗ್ರಹಿಕೆಗಳು

ಡಾ. ರವಿಶಂಕರ್ ಎ.ಕೆ.
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2023-03-31

Keywords

  • ಎಟ್ಟುತೊಗೈ, ಪತ್ತುಪಾಟ್ಟು, ತಮಿಳು ಸಂಸ್ಕೃತಿ, ಖಂಡಕಾವ್ಯ, ಸಂಗಂ ಸಾಹಿತ್ಯ, ಯಾಳ್, ಆಸಿರಿಯಪ್ಪಾ, ವಾಡೈ, ಕುರಿಂಜಿ, ಮುಲ್ಲೈ, ಮರುದಂ, ನೆಯ್ದಲ್

How to Cite

ಎ.ಕೆ. ಡ. ರ. (2023). ಪತ್ತುಪಾಟ್ಟು : ಕನ್ನಡ ಗ್ರಹಿಕೆಗಳು. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(1), 41–52. https://doi.org/10.59176/kjksp.v2i1.2289

Abstract

ತಮಿಳಿನ ಸಾಹಿತ್ಯ ಚರಿತ್ರೆಯನ್ನು ಅರ್ಥಪೂರ್ಣವಾಗಿ ನಿರ್ಮಿಸುವ ಸಂಗಂ ಸಾಹಿತ್ಯವು ಜನಪದ ಮೂಲದ ಉಲ್ಲೇಖಗಳು. ಹಾಡುಗಳ ರೂಪದಲ್ಲಿರುವ ಈ ಶಾಸ್ತ್ರೀಯ ಪಠ್ಯಗಳು ಜನರ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಹಾಡುಗಳಾಗಿ ಛಂದೋಕ್ರಮದಲ್ಲಿ ನಿರ್ಮಿತವಾಗಿವೆ. ತಮಿಳು ಸಾಹಿತ್ಯವು ಶಾಸ್ತ್ರೀಯ ಸ್ಥಾನ ಪಡೆದ ನಂತರ ಅದರ ಪಠ್ಯಗಳು ಎಲ್ಲಾ ಭಾಷೆಗೂ ಲಭ್ಯವಾಗುತ್ತಾ ಹೊಸ ಸಂಶೋಧನೆಗಳು ಸೃಷ್ಟಿಗೊಳ್ಳುತ್ತಿವೆ. ಸಂಗಂ ಸಾಹಿತ್ಯದ ಪ್ರಮುಖ ಪಠ್ಯಗಳಾದ ಎಟ್ಟುತೊಗೈ ಮತ್ತು ಪತ್ತುಪಾಟ್ಟುಗಳು ಹಾಡುಗಳ ರೂಪದಲ್ಲಿ ರಚಿತವಾಗಿರುವ ಬಿಡಿ ಪದ್ಯ ಹಾಗೂ ಖಂಡಕಾವ್ಯಗಳು. ಇವುಗಳು ಕನ್ನಡ ಸಾಹಿತ್ಯಕ್ಕೆ ಅನುವಾದಗೊಂಡು ಕನ್ನಡ ಸತ್ವದ ಹಿನ್ನಲೆಯಲ್ಲಿ ಸಂಶೋಧನೆಗೊಳ್ಳುತ್ತಿವೆ. ಕನ್ನಡ ಸಾಹಿತ್ಯದ ಬಲವರ್ಧನೆಗೂ, ದ್ರಾವಿಡ ಭಾಷಾ ಸ್ವರೂಪಕ್ಕೂ ಈ ಕಾರ್ಯವು ಅತ್ಯುತ್ತಮ ಅಧ್ಯಯನ ಸ್ವರೂಪವಾಗಿದೆ. ಈ ಹಿನ್ನಲೆಯಲ್ಲಿ ಪತ್ತುಪಾಟ್ಟು ಕುರಿತ ಕನ್ನಡ ಗ್ರಹಿಕೆಗಳನ್ನು ಈ ಲೇಖನದಲ್ಲಿ ಸಂಶೋಧಿಸಲಾಗಿದೆ. ಪತ್ತುಪಾಟ್ಟು ಹಾಡುಗಳು ಮೂಲತಃ ಮಾರ್ಗದರ್ಶನ ಹಾಗೂ ವರ್ಣನೆಯ ದೃಷ್ಟಿಕೋನದಲ್ಲಿ ರಾಜನ ಕುರಿತು ಉಲ್ಲೇಖಿಸುತ್ತವೆ. ರಾಜನು ತನ್ನ ರಾಜ್ಯದ ವಿಶೇಷತೆಯನ್ನು ಪ್ರಕೃತಿ, ಜನರ ಬದುಕು, ಸಂಸ್ಕೃತಿ ಹಾಗೂ ಸಾಹಸಗಳ ಮೂಲಕ ನಿರ್ದೇಶಿಸುತ್ತಿದ್ದನು. ಅದನ್ನು ತಿಳಿದವರಿಗೆ ದಾನಗಳನ್ನು ನೀಡಿ, ಮತ್ತೊಬ್ಬರಿಗೂ ಈ ದಾನವನ್ನು ಪಡೆಯಲು ಅನುಕೂಲಮಾಡುವಲ್ಲಿ ರಾಜ್ಯದ ಹಿರಿಮೆಯೇ ಅಡಗಿತ್ತು. ತಮಿಳು ಸಾಹಿತ್ಯವು ಈ ದೃಷ್ಟಿಯಿಂದ ದೇಸಿಯ ಬೇರುಗಳನ್ನು ಬಲಪಡಿಸಿಕೊಂಡು ಸಮೃದ್ಧಿಗೊಂಡ ಸಾಹಿತ್ಯವಾಗಿ ಕಂಡುಬರುತ್ತದೆ.

Downloads

Download data is not yet available.

References

೧. ಪತ್ತುಪಾಟ್ಟು., ಆರ್. ಶ್ರೀನಿವಾಸನ್(ಸಂ)., ೨೦೨೧., ಶಾಸ್ತ್ರೀಯ ತಮಿಳು ಭಾಷಾ ಕೇಂದ್ರೀಯ ಸಂಸ್ಥೆ, ಚೆನೈ, ತಮಿಳುನಾಡು.

೨. ಹಳಗನ್ನಡ-ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ., ಎನ್. ಶಂಕರಪ್ಪ ತೋರಣಗಲ್ಲು., ೨೦೨೧., ಕಾವ್ಯಕಲಾ ಪ್ರಕಾಶನ, ಬೆಂಗಳೂರು.

೩. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ., ಷ. ಶೆಟ್ಟರ್., ೨೦೦೭., ೨೦೧೭., ಅಭಿನವ, ಬೆಂಗಳೂರು.