ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಮಹಿಳೆ-ಪುರಾಣ: ಸೃಜನಾತ್ಮಕತೆ-‘ಮಾಧವಿ’

ಡಾ. ಶೈಲಾ ಬಾಯ್. ಯು.
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ, ಮಂಗಳೂರು

Published 2023-09-30

Keywords

  • ಹೆಣ್ಣು, ಗಂಡು, ಸ್ವಸ್ಥಮನೋಭಾವ, ಶಕ್ತಿ, ಸಂಸ್ಕೃತಿ

How to Cite

ಬಾಯ್. ಯು. ಡ. ಶ. . (2023). ಮಹಿಳೆ-ಪುರಾಣ: ಸೃಜನಾತ್ಮಕತೆ-‘ಮಾಧವಿ’. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 9–21. https://doi.org/10.59176/kjksp.v2i2.2298

Abstract

ಮಹಾಭಾರತ, ರಾಮಾಯಣದಂಥ ಪುರಾಣಗಳಲ್ಲಿ ಬಂದಿರುವ ಸ್ತ್ರೀಪಾತ್ರಗಳೆಲ್ಲ ಪುರುಷಪ್ರಧಾನ ಚಿಂತನೆಯ ಹಿನ್ನೆಲೆಯಲ್ಲೇ ರೂಪುಗೊಂಡಿರುವಂಥವು. ಕಪ್ಪು ಕಿವಿಯ ಬಿಳಿಯ ಕುದುರೆಗಳು: ಮಹಿಳಾ ಶೋಷಣೆಯ ಹಲವು ಮುಖಗಳ ಅನಾವರಣ ಈ ಭಾಗದಲ್ಲಿ ಹಲವು ಸ್ತ್ರೀಪಾತ್ರಗಳು ಕಾದಂಬರಿಯಲ್ಲಿ ಚಿತ್ರಿತವಾದ ಬಗೆಯನ್ನು ಪರಂಪರಾಗತ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಚರ್ಚಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ದ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಕಾದಂಬರಿಯ ನಾಯಕಿ ‘ಮಾಧವಿ’ ಹಾಗೂ ಆಕೆಯ ಬಾಲ್ಯದ ಸಖ ‘ಆದಿಮ’ರ ಪಾತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ಕ್ಕೆ ಹೊಸಭಾಷ್ಯ ಎಂಬ ಭಾಗದಲ್ಲಿ ಅವರಿಬ್ಬರ ಸ್ನೇಹವನ್ನು ಸಮಾಜ ಸ್ವೀಕರಿಸಬೇಕಾದ ‘ಸ್ವಸ್ಥ ಮನೋಭಾವ’ದ ನಿರ್ಮಾಣದ ಅಗತ್ಯದ ಕುರಿತ ಚಿಂತನೆಯನ್ನು ಒಳಗೊಳಿಸಲಾಗಿದೆ. ದೈಹಿಕವಾದ ಕಾರಣಕ್ಕೆ ‘ಅಬಲೆ’ ಎಂದು ಸಮಾಜ ಗುರುತಿಸುವ ಹೆಣ್ಣು, ವಾಸ್ತವದಲ್ಲಿ ದೈಹಿಕವಾಗಿಯೂ ಮಾನಸಿಕವಾಗಿಯೂ ಎಂತಹ ಶಕ್ತಿವಂತೆ ಎಂಬುದನ್ನು; ಜಗತ್ತಿನಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿರುವುದರಲ್ಲಿ, ಆ ಮೂಲಕ ಸಂಸ್ಕೃತಿ ಉಳಿಯುವುದರಲ್ಲಿ ಹೆಣ್ಣಿನ ಪಾತ್ರ, ಕೊಡುಗೆ ಎಂತಹುದು ಎಂಬುದನ್ನು ಹೆಣ್ಣು: ಶಕ್ತಿ-ಸಂಸ್ಕೃತಿ-ಮಾನವೀಯ ನೆಲೆ ಹಾಗೂ ‘ಹೆಣ್ಣಾಗಿಸು’ವ ವಿವಿಧ ‘ಮಾನದಂಡ’ಗಳು ಎಂಬ ಉಪಶೀರ್ಷಿಕೆಗಳಲ್ಲಿ ಕಾದಂಬರಿಯ ಹಲವು ಸಂದರ್ಭ, ಸನ್ನಿವೇಶಗಳನ್ನು ವಿಮರ್ಶಿಸುವುದರೊಂದಿಗೆ ವಿವರಿಸಲಾಗಿದೆ. ಕೊನೆಯ, ಹೆಣ್ಣು: ವ್ಯವಸ್ಥೆ ಮತ್ತು ವಾಸ್ತವ ಎಂಬ ಭಾಗದಲ್ಲಿ ಹೆಣ್ಣನ್ನು ದಮನಿಸುವ ತೀವ್ರ ಸ್ಥಿತಿಯಲ್ಲೂ ಆಕೆಯಲ್ಲಿ ಅಡಗಿರುವ, ಫೀನಿಕ್ಸ್ ನಂತೆ ಪುಟಿದೇಳುವ ಜೀವಂತಿಕೆಯ ಶಕ್ತಿಯನ್ನು ಕಾದಂಬರಿ ಹೇಗೆ ಚಿತ್ರಿಸಿದೆ ಎಂಬುದನ್ನು ವಾಸ್ತವವಾದಿ ನೆಲೆಯಲ್ಲಿ ಗುರುತಿಸಲಾಗಿದೆ.

Downloads

Download data is not yet available.

References

1. ಕಪ್ಪುಕಿವಿಯ ಬಿಳಿಯ ಕುದುರೆಗಳು; ಎಂ. ಎಸ್. ವೇದಾ; ಸಂವಹನ, ಮೈಸೂರು, ೨೦೦೭
2. ಮಾಧವಿ; ಅನುಪಮಾ ನಿರಂಜನ; ಡಿ.ವಿ.ಕೆ. ಮೂರ್ತಿ, ಮೈಸೂರು, ೧೯೭೬