ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಎಚ್. ಎಸ್. ಶಿವಪ್ರಕಾಶ್ ಅವರ ಆಯ್ದ ಕವಿತೆಗಳಲ್ಲಿನ ಐತಿಹಾಸಿಕ ಪ್ರಜ್ಞೆ

ಡಾ. ಪ್ರೇಮ್‌ ಕುಮಾರ ಕೆ.
ಕನ್ನಡ ಸಹಾಯಕ ಪ್ರಾಧ್ಯಾಪಕ ಕ್ರಿಸ್ತು ಜಯಂತಿ ಕಾಲೇಜು, ಸ್ವಾಯತ್ತ, ಕೆ.ನಾರಾಯಣಪುರ, ಕೊತ್ತನೂರು ಅಂಬೆ, ಬೆಂಗಳೂರು-೫೬೦೦೭೭

Published 2023-09-30

Keywords

  • ಐತಿಹಾಸಿಕ ಪ್ರಜ್ಞೆ, ಜಂಗಮರು, ವಾಸವದತ್ತೆ, ಬುದ್ಧ, ವಿಜಯನಗರ ಸಾಮ್ರಾಜ್ಯ

How to Cite

ಕೆ. ಡ. ಪ. ಕ. (2023). ಎಚ್. ಎಸ್. ಶಿವಪ್ರಕಾಶ್ ಅವರ ಆಯ್ದ ಕವಿತೆಗಳಲ್ಲಿನ ಐತಿಹಾಸಿಕ ಪ್ರಜ್ಞೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 22–33. https://doi.org/10.59176/kjksp.v2i2.2299

Abstract

ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮ ನಾಟಕ ಮತ್ತು ಕವಿತೆಗಳ ಮೂಲಕ ಪ್ರಸಿದ್ಧಿ ಪಡೆದಿರುವವರು ಎಚ್.ಎಸ್.ಶಿವಪ್ರಕಾಶರು. ಇವರ ಸಾಹಿತ್ಯದ ಹೆಚ್ಚಿನ ಭಾಗ ಪೌರಾಣಿಕ ಹಾಗು ಐತಿಹಾಸಿಕ ಸಂಗತಿಗಳಿಗೆ ತೆರೆದುಕೊಂಡಿವೆ. ಯಾವುದೇ ಕವಿಯೊಬ್ಬ ತನ್ನ ಹಿಂದಣ ಚರಿತ್ರೆಯನ್ನು ಅರಿಯದೆ ಇಂದಿನ ವರ್ತಮಾನದಲ್ಲಿ ನಿಂತು ಮುಂದಣ ಭವಿಷ್ಯಕ್ಕೆ ಯಾವುದೇ ಕೊಡುಗೆಯನ್ನು ನೀಡಲಾರ. ಸಾಹಿತಿಯೊಬ್ಬನಿಗೆ ಐತಿಹಾಸಿಕ ಪ್ರಜ್ಞೆಯೆನ್ನುವುದು ಬಹುಮುಖ್ಯವಾದ ಅಂಶವಾಗಿರುತ್ತದೆ. ಶಿವಪ್ರಕಾಶರ ಕವಿತೆಗಳನ್ನು ನೋಡುವುದಾದರೆ ಅವರು ಚರಿತ್ರೆಯ ಒಂದೊAದು ಸಣ್ಣ ಘಟನೆಗಳನ್ನು ಸಹ ತಮ್ಮ ಕವಿತೆಯಲ್ಲಿ ಸೆರೆಹಿಡಿದು ಅದ್ಭುತ ಚಿತ್ರಣವನ್ನಾಗಿಸುತ್ತಾರೆ. ಜೊತೆಗೆ ಅಂದಿನ ಇತಿಹಾಸದಲ್ಲಿ ಮರೆಮಾಚಲ್ಪಟ್ಟಿರುವ ಹಲವು ವಿಚಾರಗಳನ್ನು ಇಂದಿನ ವರ್ತಮಾನದ ಬದುಕಿಗೆ ಪೂರಕಗೊಳಿಸಿಕೊಳ್ಳುತ್ತಾರೆ. ಸಾಹಿತಿಯಾದವನಿಗೆ ಕೇವಲ ತನ್ನ ದೇಶದ ಐತಿಹಾಸಿಕ ಘಟನೆಗಳ ವಿಚಾರಗಳಷ್ಟೇ ಅಲ್ಲದೇ ಪ್ರಪಂಚದ ಇತಿಹಾಸದ ಪರಿಕಲ್ಪನೆಯಿದ್ದರೆ ಅವು ಸಾಹಿತಿಯ ಬರವಣಿಗೆಯನ್ನು ಎಷ್ಟು ಗಟ್ಟಿಗೊಳಿಸಬಹುದು ಎನ್ನುವುದಕ್ಕೂ ಸಹ ಎಚ್.ಎಸ್.ಶಿವಪ್ರಕಾಶರ ಕವಿತೆಗಳು ಉದಾಹರಣೆಯಾಗುತ್ತದೆ. ಒಟ್ಟಾರೆ ಶಿವಪ್ರಕಾಶರು ಚರಿತ್ರೆಯ ಧೀಮಂತ ವ್ಯಕ್ತಿಗಳ ಚರಿತ್ರೆಯೊಂದಿಗೆ ಬೆಸೆದುಕೊಂಡಿರುವ ಇತರೆ ವ್ಯಕ್ತಿತ್ವಗಳನ್ನು ಅಂದಿನ ಇತಿಹಾಸಕ್ಕೆ ಚ್ಯುತಿ ಬಾರದಂತೆ ತಮ್ಮ ಕವಿತೆಯೊಳಗೆ ವರ್ತಮಾನದ ಸನ್ನಿವೇಶಗಳೊಂದಿಗೆ ಅಭಿವ್ಯಕ್ತಿಸುತ್ತಾರೆ.

Downloads

Download data is not yet available.

References

೧. ಕವಿತೆ : ಇಂದಿನ ತನಕ – ಎಚ್.ಎಸ್.ಶಿವಪ್ರಕಾಶ್, ೨೦೧೧, ವಿಸ್ಮಯ ಪ್ರಕಾಶನ, ಮೈಸೂರು.
೨. ಶಿವಪ್ರಕಾಶರ ಕವಿತೆಗಳು – ಎಚ್.ಎಸ್.ಶಿವಪ್ರಕಾಶ್, ೨೦೦೦, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
೩. ಎಚ್.ಎಸ್.ಶಿವಪ್ರಕಾಶ ಅವರ ಸಾಹಿತ್ಯದ ಸಾಂಸ್ಕೃತಿಕ ನೆಲೆ, ಶರಣಪ್ಪ ಬಸವಂತ್, ೨೦೨೧, ಗುಲ್ಬರ್ಗಾ ವಿಶ್ವವಿದ್ಯಾನಿಲಯ. ಗುಲ್ಬರ್ಗಾ
೪. ಅನಿಕೇತನ ಸಂಚಿಕೆ ೧೧೬, ಬಿ.ವಿ.ವಸಂತಕುಮಾರ್, ೨೦೨೦ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು