ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಚನ್ನಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಚಿತ್ರಣಗೊಂಡಿರುವ ಮಹಿಳೆಯರು

ಡಾ. ಎಂ. ಕೆ. ಮಂಜುನಾಥ
ಪ್ರಾಂಶುಪಾಲರು, ಶ್ರೀ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜು ಚನ್ನರಾಯಪಟ್ಟಣ-೫೭೩೧೧೬

Published 2023-09-30

Keywords

  • ಸಮಾಜ, ಪುರುಷ ಪ್ರಧಾನ, ಭೂಮಿ, ಜಲ, ಪ್ರಕೃತಿ, ಶಕ್ತಿ, ಮಹಿಳೆ, ಸ್ವಾತಂತ್ರ್ಯ

How to Cite

ಮಂಜುನಾಥ ಡ. ಎ. ಕ. . (2023). ಚನ್ನಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಚಿತ್ರಣಗೊಂಡಿರುವ ಮಹಿಳೆಯರು. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 34–41. https://doi.org/10.59176/kjksp.v2i2.2300

Abstract

ಭಾರತೀಯ ಸಮಾಜ ಪುರುಷ ಪ್ರಧಾನವಾಗಿದ್ದರೂ, ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೂ ಉನ್ನತ ಸ್ಥಾನ ನೀಡಿರುವುದನ್ನು ಕಾಣಬಹುದು. ಮಮತಾಮಹಿ, ದಯಾಮಯಿಯಾದ ತಾಯಿ ನಿಸ್ವಾರ್ಥಳಾಗಿ ಮನೆಯ ಏಳ್ಗೆಗಾಗಿ ದುಡಿದುದ್ದರಿಂದಲೇ ದೇವತೆ ಎನಿಸಿಕೊಂಡಿದ್ದಾಳೆ. ಈಕೆಯನ್ನು ಭೂಮಿ, ಜಲ, ಪ್ರಕೃತಿ, ಶಕ್ತಿ ಮುಂತಾದವುಗಳಿಗೆ ಹೋಲಿಸಿದ್ದಾರೆ. ನಮ್ಮ ಸಮಾಜವು ಮಹಿಳೆಯನ್ನು ‘ಮಾತೃದೇವೋಭವ’ ಎಂದು ಗೌರವಿಸುತ್ತದಲ್ಲದೆ, ‘ಯತ್ರ ನಾರ್ಯಸ್ತು ಪೂಜಂತೇ ರಮಂತೇ ತತ್ರ ದೇವತಾಃ’ ಎಂಬ ಪೂಜ್ಯಭಾವನೆ ಹೊಂದಿರುವುದನ್ನು ಕಾಣಬಹುದು. ಮಹಿಳೆಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರತಿಭೆ ಸಾಮರ್ಥ್ಯಗಳನ್ನು ತೋರಿಸಿದ್ದಾಳೆ.

ಪ್ರಾಚೀನ ಕಾಲದಿಂದ ಹಿಡಿದು ಇಲ್ಲಿಯ ತನಕ ಭಾರತೀಯ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಅನೇಕ ಏಳು-ಬೀಳುಗಳನ್ನು ಅನುಭವಿಸುತ್ತಾ ಬಂದಿದೆ. ಸಮಾಜದಲ್ಲಿ ಮಹಿಳೆಯು ಗೃಹಿಣಿಯಾಗಿ, ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಪೋಷಕಿಯಾಗಿ, ಮಗಳಾಗಿ, ಹೋರಾಟಗಾರ್ತಿಯಾಗಿ, ವ್ಯಾಪಾರಗಾರಳಾಗಿ, ಕವಯಿತ್ರಿಯಾಗಿ, ಆಡಳಿತಾಧಿಕಾರಿಯಾಗಿ, ಹೀಗೆ ಬಹುರೂಪಳಾಗಿ ತನ್ನ ಪ್ರೀತಿ-ವಾತ್ಸಲ್ಯಗಳ ಸೆಲೆಯನ್ನು ಉಕ್ಕಿಸಿ ಬಾಂಧವ್ಯದ ಬೆಸುಗೆಯಾಗಿದ್ದಾಳೆ. 

ಅಂದಿನ ಸಮಾಜದಲ್ಲಿ ಸ್ತಿçÃಯರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲದಿದ್ದರೂ, ತನಗಿರುವ ಅಲ್ಪ ಸ್ವಾತಂತ್ರ್ಯದಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ಸಮಾಜದ ಎಲ್ಲಾ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾಳೆ. ಜೀವನದ ವಿವಿಧ ಕ್ಷೇತ್ರಗಳನ್ನು ಸಂಪದ್ಭರಿತಗೊಳಿಸಿದ್ದಾಳೆ. ಕೇವಲ ರಾಜಮನೆತನದ ಅಥವಾ ಮೇಲ್ವರ್ಗದ ಸ್ತ್ರೀಯರು ಮಾತ್ರವಲ್ಲದೆ, ಸಾಮಾನ್ಯ ಮಹಿಳೆಯರೂ ಸಹ ಸಮಾಜದ ಎಲ್ಲಾ ರಂಗಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ದೇವಾಲಯಗಳನ್ನು ಕಟ್ಟಿಸಿ ದಾನದತ್ತಿ ನೀಡಿದ್ದಾರೆ. ರಾಜ್ಯವನ್ನಾಳಿದ್ದಾರೆ, ಶತ್ರುಗಳೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದಾರೆ. ಅಲ್ಲದೆ ಸತಿಧರ್ಮವನ್ನು ಪಾಲಿಸಿ ಅಮರರೂ ಆಗಿದ್ದಾರೆ. ಪ್ರಸ್ತುತ ಈ ಲೇಖನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಮಹಿಳೆಯರ ಸ್ಥಾನಮಾನವನ್ನು ಕುರಿತು ಚರ್ಚಿಸಲಾಗಿದೆ.

Downloads

Download data is not yet available.

References

೧. ಬಿ.ಎಲ್.ರೈಸ್ (ಸಂ) : ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-೧೦, ಕೋಲಾರ ಡಿಸ್ಟ್ರಿಕ್ಟಿನಲ್ಲಿರುವ ಶಾಸನಗಳು, ಬಾಸೆಲ್ ಮಿಷನ್ ಪ್ರೆಸ್, ಮಂಗಳೂರು, ೧೯೦೫.
೨. ಎಪಿಗ್ರಾಫಿಯಾ ಕರ್ನಾಟಿಕ-೯ ಅನುಬಂಧ ಸಂಪುಟ, ಮೈಸೂರು ಆರ್ಕಿಯಾಲಜಿಕಲ್ ಡಿಪಾರ್ಟ್ಮೆಂಟ್, ಮೈಸೂರು.
೩. ಬಿ.ಎಲ್.ರೈಸ್ (ಸಂ) : ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-೯, ಬೆಂಗಳೂರು ಡಿಸ್ಟ್ರಿಕ್ಟಿನಲ್ಲಿರುವ ಶಾಸನಗಳು, ಮೈಸೂರು ಗೌರ್ನಮೆಂಟ್ ಸೆಂಟ್ರಲ್ ಪ್ರೆಸ್, ಬೆಂಗಳೂರು, ೧೯೦೫.
೪. ಡಾ.ಎಂ.ಎA.ಕಲಬುರ್ಗಿ : ಸಮಾಧಿ-ಬಲಿದಾನ-ವೀರ ಮರಣ ಸ್ಮಾರಕಗಳು, ಐಬಿಎಚ್ ಪ್ರಕಾಶನ, ಬೆಂಗಳೂರು, ೧೯೮೦.
೫. ಡಾ.ಎಂ.ಚಿದಾನAದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸ್ವಪ್ನ ಬುಕ್ ಹೌಸ್, ಬೆಂಗಳೂರು, ೨೦೦೮.
೬. ಡಾ. ಚೆನ್ನಕ್ಕ ಪಾವಟೆ : ಕರ್ನಾಟಕ ಶಾಸನೋಕ್ತ ಮಹಿಳೆ ಸಮೀಕ್ಷೆ-ಸಂಸ್ಕೃತಿ, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೮.
೭. ಡಾ.ಎಂ.ಕೆ.ಮAಜುನಾಥ : ಶಾಸನ ಪರಿವೀಕ್ಷಣೆ, ಎಸ್.ಎಲ್.ಎನ್.ಪಬ್ಲೀಕೇಷನ್, ಬೆಂಗಳೂರು, ೨೦೧೫.
೮. ಡಾ.ಎಂ.ಜಿ.ನಾಗರಾಜ್, ಡಾ.ಪಿ.ವಿ.ಕೃಷ್ಣಮೂರ್ತಿ(ಸಂ) : ಇತಿಹಾಸ ದರ್ಶನ, ಸಂಪುಟ-೨೦, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ೨೦೧೧