ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಜನಪದ ತ್ರಿಪದಿಗಳಲ್ಲಿ ‘ಗರತಿ’ ಪರಿಕಲ್ಪನೆ

ಡಾ. ರವಿಶಂಕರ್ ಎ.ಕೆ.
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2023-09-30

Keywords

  • ಪ್ರಮುಖ ಪದಗಳು : ಗರತಿ, ಹೆಣ್ಣು, ಸಂಸಾರ

How to Cite

ಎ.ಕೆ. ಡ. ರ. . (2023). ಜನಪದ ತ್ರಿಪದಿಗಳಲ್ಲಿ ‘ಗರತಿ’ ಪರಿಕಲ್ಪನೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 42–52. https://doi.org/10.59176/kjksp.v2i2.2301

Abstract

‘ಗರತಿ’ ಎಂಬ ಪದವನ್ನು ಆಧುನಿಕವಾಗಿ ಹೊಸ ಅರ್ಥಗಳೊಂದಿಗೆ ನಿರ್ವಚಿಸಿಕೊಂಡು ಅಧ್ಯಯನಮಾಡಬೇಕಿದೆ. ಭಾರತೀಯ ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡು ಬಂದಿರುವ ಪರಂಪರೆಯು ಪರಸ್ಪರ ವಿರುದ್ಧವಾಗಿದೆ. ‘ಹೆಣ್ಣು ಸಂಸಾರದ ಕಣ್ಣು’ ಎನ್ನುವಾಗಲೇ ಆಕೆಯನ್ನು ಗೌರವಿಸುವ ಮನೆದೇವತೆ, ಗೃಹಿಣಿ, ಮಹಾಲಕ್ಷ್ಮಿ ಮೊದಲಾದ ಪದಗಳು ಗೃಹದಲ್ಲೇ ಉಳಿಸುತ್ತಾ ಎಲ್ಲಾ ಜವಾಬ್ದಾರಿಯನ್ನು ಆಕೆಯ ಕರ್ತವ್ಯವೆಂಬಂತೆ ಹೊರಿಸಿದ ಅಭಿಮುಖ ಸಿದ್ಧಾಂತಗಳು ಇಂದಿನ ಪ್ರಚಲಿತ ಪ್ರಶ್ನೆಗಳಾಗಿವೆ. ಸಾಹಿತ್ಯದ ಮುಕ್ಕಾಲುಪಾಲು ಅಧ್ಯಯನಗಳು ಹೆಣ್ಣು ಮತ್ತು ದಲಿತ ಶೋಷಣೆಗಳನ್ನು ಅತ್ಯಂತ ಗಂಭೀರವಾಗಿ ಅಧ್ಯಯನಮಾಡುತ್ತಿದೆ. ಇದರ ಬೇರುಗಳನ್ನು ಸರಿಯಾಗಿ ಅಧ್ಯಯನಮಾಡದಿದ್ದರೆ ಹೊಸ ಅರ್ಥಗಳಿಗೆ ಮೌಲ್ಯವಿರುವುದಿಲ್ಲ. ಜನಭಾಷೆಯ ಎಲ್ಲಾ ಸಾಹಿತ್ಯವು ಕ್ರಿ. ಪೂ ಮಿಗಿಲಾಗಿ ನಮ್ಮ ಜನಪದ ಸಾಹಿತ್ಯದಿಂದ ಬಂದಿರುವುದು. ಈ ಜನಪದ ಸಾಹಿತ್ಯವು ವಿಶ್ವದ ಎಲ್ಲಾ ಪರಿಸರದಲ್ಲೂ ಸೃಷ್ಟಿಯಾಗಿ ಅಲ್ಲಿನ ಜನರ ಪದವನ್ನು ಪರಂಪರೆಯಾಗಿಸುವಲ್ಲಿ ಯಶಸ್ವಿಯಾಯಿತು. ಈ ಜನಪದ ಬೇರುಗಳಲ್ಲಿ ಅಂದಂದಿನ ಬದುಕು ಮಿಳಿತವಾಗುತ್ತಾ ಬಂದರೂ, ಅಲ್ಲಿ ವಿಚಾರವೂ, ಮೌಢ್ಯವೂ ಸೇರುತ್ತಾ ಸಾಗಿತು. ಅನುಭವಿಗಳು ಅದನ್ನು ತಮ್ಮ ಜ್ಞಾನಕ್ಕೆ ಅನುಗುಣವಾಗಿ ಬದಲಿಸುತ್ತಾ ಬಂದರು. ವಿಚಾರವಂತಿಕೆಯಿಲ್ಲದ ಮನುಷ್ಯರು, ಮೌಢ್ಯವನ್ನು ಒಪ್ಪಿಕೊಳ್ಳುತ್ತಾ ಮುಂದುವರೆಸಿದರು. ಈ ಹಿನ್ನಲೆಯಲ್ಲಿ ‘ಗರತಿ’ ಎಂಬ ಪದವು ಒಂದು ಸಮುದಾಯದ ಶ್ರೇಷ್ಠತೆಯನ್ನೂ, ಮೌಢ್ಯವನ್ನು ಒಟ್ಟಿಗೆ ಜೊತೆಯಾಗಿಸಿಕೊಂಡು ಬೆಳವಣಿಗೆ ಪಡೆದಿದೆ. ಈ ಎಲ್ಲಾ ಅಂಶಗಳನ್ನು ವಿವಿಧ ಅಧ್ಯಯನಗಳ ಪರಿಶೀಲನೆಯೊಂದಿಗೆ ಹೊಸ ಅರ್ಥಗಳನ್ನು ಈ ಲೇಖನದಲ್ಲಿ ಅಧ್ಯಯನಮಾಡಲಾಗಿದೆ.

Downloads

Download data is not yet available.

References

1. ಗರತಿಯ ಹಾಡು., ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು., ೧೯೩೧, ೨೦೧೨., ಸಮಾಜ ಪುಸ್ತಕಾಲಯ, ಧಾರವಾಡ.
2. ಗರತಿಯ ಬಾಳ ಸಂಹಿತೆ., ಸಿಂ.ಪಿ ಲಿಂಗಣ್ಣ., ೧೯೮೬., ಅರವಿಂದ ಪುಸ್ತಕಾಲಯ, ಚಡಚಣ
3. ಕನ್ನಡ ರತ್ನಕೋಶ., ೧೯೭೭, ೨೦೧೨., ಸಾಹಿತ್ಯ ಪರಿಷತ್ತು, ಬೆಂಗಳೂರು