ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಗಡಿನಾಡ ಜನಪದ ಕಲೆಗಳು

ಡಾ. ಗೋವಿಂದರಾಯ ಎಂ.
ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್ ತುಮಕೂರು ಜಿಲ್ಲೆ, ಕರ್ನಾಟಕ

Published 2023-09-30

Keywords

  • ಕಲೆಗಳು, ಭಜನೆ, ಕೋಲಾಟ, ಸಾಮಾಜಿಕ ಶ್ರೇಣಿಗಳು

How to Cite

ಎಂ. ಡ. ಗ. . (2023). ಗಡಿನಾಡ ಜನಪದ ಕಲೆಗಳು. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 53–63. https://doi.org/10.59176/kjksp.v2i2.2302

Abstract

‘ಕಲೆಗಳು’ ಮನುಷ್ಯ ಜೀವನದ ಮನರಂಜನಾ ಸಾಧನಗಳು. ಪ್ರಾಚೀನ ಮಾನವನ ಬದುಕನ್ನು ಬದುಕಿನ ಜಂಜಡದಿಂದ ಬಿಡುಗಡೆ ನೀಡಲು ಇವು ನೀಡಿರುವ ಸಂತೋಷ ಅಷ್ಟಿಷ್ಟಲ್ಲ. ಆಧುನಿಕ ಸಮೂಹ ಮಾಧ್ಯಗಳಿಲ್ಲದಿದ್ದ ಸಮಯದಲ್ಲಿ ಧರ್ಮಾಚರಣೆ, ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಅನೇಕ ಜನಪದ ಕಲೆಗಳು ಹುಟ್ಟಿಕೊಂಡಿವೆ ಎಂದು ಹೇಳಬಹುದಾಗಿದೆ. ಜನಪದರ ಬಹಳಷ್ಟು ಕಲೆಗಳು ಧರ್ಮಾಚರಣೆಯ ಮೂಲದಿಂದ ಪ್ರೇರಣೆಯಿಂದ ಹುಟ್ಟಿ ಬಂದಿದ್ದರೂ ಎಲ್ಲ ಕಲೆಗಳಿಗೂ ಈ ಮಾತು ಅನ್ವಯಿಸಲಾರದು. ಆಚರಣೆಯ ಧೋರಣೆ ಹೊಂದಿದ್ದರೂ ನಿಧಾನವಾಗಿ ತಮಗರಿವಿಲ್ಲದಂತೆ ಮನರಂಜನೆಯತ್ತ ವಾಲಿದ ಮತ್ತು ಮನರಂಜನೆಗಾಗಿಯೇ ಹುಟ್ಟಿಕೊಂಡ ಕಲೆಗಳ ಪ್ರಮಾಣ ಹೆಚ್ಚಿನದು. ಅವರವರ ಜೀವನ ಶೈಲಿಗಳು, ಭೌಗೋಳಿಕ ಪರಿಸರಗಳು, ಸಾಮಾಜಿಕ ಶ್ರೇಣಿಗಳು ಜನಪದರ ಕಲೆಗಳನ್ನು ರೂಪಿಸಿವೆ. ಅವುಗಳ ವೈವಿಧ್ಯತೆ ಅಗಾಧವಾದುದು. ಇಲ್ಲಿ ಮುಖ್ಯವಾಗಿ ಕೋಲಾಟ, ಭಜನೆಯೆಂಬ ಕಲೆಗಳನ್ನು ಸಾಹಿತ್ಯದ ಹಿನ್ನಲೆಯಲ್ಲಿ ಸಂಶೋಧನೆ ನಡೆಸಲಾಗಿದೆ.

Downloads

Download data is not yet available.

References

1. ಬಸವರಾಜ ಮಲಶೆಟ್ಟಿ.,ಕರ್ನಾಟಕದ ಜನಪದ ಕಲೆಗಳು., ‘ಕರ್ನಾಟಕ ಸಂಗಾತಿ.,ಕನ್ನಡ ಅಭಿವೃದ್ಧಿ ಪ್ರಾಧಿಕಾರ, -ಬೆಂಗಳೂರು ; ೨೦೦೨ ಪುಟ ೧೦೯.
2. ಮಿಕ್ಕಿಲಿನೇನಿ ರಾಧಾ ಕೃಷ್ಣ ಮೂರ್ತಿ.,ತೆಲುಗುವಾರಿ ಜಾನಪದ ಕಳಾ ರೂಪಾಲು.,ತೆಲುಗು ವಿಶ್ವ ವಿದ್ಯಾಲಯಂ ಹೈದಾರಬಾದ್ ಪುಟ ಸಂಖ್ಯೆ -೬೩೮, ೬೩೯ ಕನ್ನಡಕ್ಕೆ ಕೆ. ಜಗನ್ನಾಥ್. ೧೯೯೨.