ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಬೆಂಗಳೂರು ಭಾಗದ ಮೊಹರಂ ಆಚರಣೆ

ಸೈಯದ್ ಮುಯಿನ್
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2023-09-30

Keywords

  • ಮೊಹರಂ, ಪಂಜ, ಖಿಚ್ಡಾ, ಚೋಂಗೆ, ಬುತ್ತಿ, ಅಲಾವಿ, ಖಸೀದ, ಹಮ್ದ್ ಮತ್ತು ನಾತ್

How to Cite

ಮುಯಿನ್ ಸ. . (2023). ಬೆಂಗಳೂರು ಭಾಗದ ಮೊಹರಂ ಆಚರಣೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 95–103. https://doi.org/10.59176/kjksp.v2i2.2305

Abstract

ಬೆಂಗಳೂರು ಕರ್ನಾಟಕದ ಪ್ರಾಚೀನ ಊರುಗಳಲ್ಲಿ ಒಂದಾಗಿದೆ. ಇಲ್ಲಿ ಧಾರ್ಮಿಕ ಸಮನ್ವಯದ ವಾತಾವರಣವನ್ನು ಹೊಂದಿದ್ದAತಹ ನಾಡು. ಇಲ್ಲಿ ಸುಮಾರು ಶತಮಾನಗಳಿಂದ ವಾಸಿಸುತ್ತಿರುವ ಇಸ್ಲಾಂ ಧರ್ಮದ ಅನುಯಾಯಿಗಳ ಆಚರಣೆಗಳು ಸ್ಥಳೀಯ ಸಾಂಸ್ಕೃತಿಕ ಪರಿವೇಷದಲ್ಲಿ ತಳುಕು ಹಾಕಿಕೊಂಡು ಧಾರ್ಮಿಕ ಸಮನ್ವಯತೆಯನ್ನು ಮೆರೆದಿರುವುದಕ್ಕೆ ಇಂದಿಗೂ ಸಾಕ್ಷ್ಯಗಳು ದೊರೆಯುತ್ತವೆ. ಮೊಹರಂ ಆಚರಣೆ ಮತ್ತು ಕರಗ ಉತ್ಸವ ಇದಕ್ಕೆ ಉತ್ತಮ ನಿದರ್ಶನವಾಗಿದೆ. ನಗರ ಜಾನಪದವೆಂದು ಗುರುತಿಸಬಹುದಾದ ಮೊಹರಂ ಆಚರಣೆಯು ಸುಮಾರು ೨೫೦ ವರ್ಷಗಳಿಂದಲೂ ಹಳೆಯ ಬೆಂಗಳೂರಿನ ಭಾಗದಲ್ಲಿ ಸಾಂಗವಾಗಿ ನಡೆದುಕೊಂಡು ಬರುತ್ತಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದಾಗಿದೆ. ಇಲ್ಲಿ ನೆಲೆಸಿದ ಸೂಫಿ ಸಂತರ ಆಶ್ರಯದಲ್ಲಿ ಜರುಗುತ್ತಿದ್ದ ಮೊಹರಂ ಆಚರಣೆ, ಉರುಸುಗಳು ದೀರ್ಘ ಇತಿಹಾಸವನ್ನು ಹೊಂದಿದೆ. ಈ ಲೇಖನದಲ್ಲಿ ಮೊಹರಂ ಆಚರಣೆಗೆ ಚಾರಿತ್ರಿಕ ಹಿನ್ನೆಲೆ, ಬೆಂಗಳೂರಿನಲ್ಲಿ ಜರುಗುವ ಮೊಹರಂ ಆಚರಣೆಗಳ ವಿಧಾನಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಕಾಟನ್‌ಪೇಟೆ, ಚಿಕ್ಕಪೇಟೆ, ಬಳೇಪೇಟೆ, ಕಬ್ಬನ್‌ಪೇಟೆ, ಕುಂಬಾರಪೇಟೆ, ಕಾಡುಗೊಂಡನಹಳ್ಳಿ, ಮಾವಳ್ಳಿ, ಗೋರಿಪಾಳ್ಯ, ಮುನಿರೆಡ್ಡಿ ಪಾಳ್ಯ ಮೊದಲಾದ ಸ್ಥಳಗಳಲ್ಲಿ ನಡೆಯುವ ಮೊಹರಂ ಆಚರಣೆಗಳನ್ನು ಗಮನಿಸಬಹುದಾಗಿದೆ. ಮೊಹರಂ ಆಚರಣೆಯು ಅನ್ಯಾಯದ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ನಾಯಕರುಗಳ ನೆನಪಿನ ದ್ಯೋತಕದ ಶೋಕಾಚರಣೆ ಇದಾಗಿದೆ. ಐತಿಹಾಸಿಕವಾಗಿ ಜರುಗಿದ ಘಟನೆಯನ್ನು ಇಂದಿಗೂ ಸ್ಮರಿಸುವುದು, ಯುದ್ಧದಲ್ಲಿ ಹುತಾತ್ಮರಾದ ವೀರರ ಶೌರ್ಯವನ್ನು ಹೊಗಳಿ ಕೊಂಡಾದುವುದನ್ನು ಇಲ್ಲಿ ಕಾಣಬಹುದು.

Downloads

Download data is not yet available.

References

೧. ಜಾನಪದ ಹಬ್ಬಗಳು ಮತ್ತು ಉತ್ಸವಗಳು: ಹನುಮಂತರಾವ್.ಬಿ. ದೊಡ್ಡಮನಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
೨. ಕನ್ನಡ ಜಾನಪದ ನಿಘಂಟು: ಪದ ಸಂಸ್ಕೃತಿ ಕೋಶ: ಪ್ರ.ಸಂ.ಡಿ.ಬಿ. ನಾಯಕ ಸಂ.ಪ್ರೊ. ರಾಮೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ೨೦೧೭
೩. ಮೊಹರಂ ಪದಗಳು: ದಸ್ತಗೀರ್ ಅಲ್ಲೀಭಾಯಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೯
೪. ದಕ್ಷಿಣ ಭಾರತೀಯ ಜಾನಪದ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦
೫. ಜನಪದ ದರ್ಶನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು,೧೯೯೮
೬. ಜಾನಪದ ತಿಳುವಳಿಕೆ, ಚೆಕ್ಕೆರೆ ಶಿವಶಂಕರ್, ಸಾಗರ್ ಪ್ರಕಾಶನ, ಬೆಂಗಳೂರು,೨೦೦೧
೭. ಜಾನಪದ ಲೇಖನಗಳು, ಡಾ. ಮಲ್ಲಿಕಾರ್ಜುನ ಕುಂಬಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು