ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

‘ಸಂಸ್ಕೃತಿ’ ಮತ್ತು ‘ಪುನರ್ಮೌಲ್ಯೀಕರಣ’ ಪರಿಕಲ್ಪನೆಗಳ ವಿವೇಚನೆ

ಡಾ. ಹೇಮಲತ ಪಿ. ಎನ್.
ಇ/ಮ ಶ್ರೀ ನಾಗರಾಜು ಪಿ. ಎಚ್. ನಂ.೧೧೫೬, ೪/೧೦ನೇ ಮುಖ್ಯರಸ್ತೆ ಇ ಮತ್ತು ಎಫ್ ಬ್ಲಾಕ್, ೨ನೇ ಹಂತ ರಾಮಕೃಷ್ಣನಗರ, ಮೈಸೂರು-೫೭೦೦೨೨

Published 2023-09-30

Keywords

  • ಸಂಸ್ಕೃತಿ, ಪುನರ್‌ಮೌಲ್ಯೀಕರಣ, ಸಾಂಸ್ಕೃತಿಕ ಪುನರ್‌ಮೌಲ್ಯೀಕರಣ, ಡಾರ್ವಿನ್‌ನ ವಿಕಾಸವಾದ, ನ್ಯಾಯ, ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ, ಡಿ.ಡಿ.ಕೊಸಾಂಬಿ, ಎಚ್.ಎಸ್.ಮುಕ್ತಾಯಕ್ಕ, ಡಿ.ಆರ್.ನಾಗರಾಜ್, ವೇದವಾಙ್ಮಯ, ವೇದಾಂತ, ಕಲ್ಪ, ವ್ಯಾಕರಣ, ನಿರುಕ್ತ

How to Cite

ಪಿ. ಎನ್. ಡ. ಹ. . (2023). ‘ಸಂಸ್ಕೃತಿ’ ಮತ್ತು ‘ಪುನರ್ಮೌಲ್ಯೀಕರಣ’ ಪರಿಕಲ್ಪನೆಗಳ ವಿವೇಚನೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 114–123. https://doi.org/10.59176/kjksp.v2i2.2307

Abstract

ಸಂಸ್ಕೃತಿ ಮತ್ತು ಪುನರ್‌ಮೌಲ್ಯೀಕರಣ ಈ ಎರಡೂ ಪದಗಳನ್ನು ಸಂಯೋಜಿಸುವ ಸಾಧ್ಯತೆಯನ್ನು ವರ್ತಮಾನದ ತಲ್ಲಣಗಳ ಒತ್ತಾಸೆಯಿಂದ ಏರ್ಪಡಿಸಿ ನೋಡಿದಾಗ, ‘ಸಾಂಸ್ಕೃತಿಕ ಪುನರ್‌ಮೌಲ್ಯೀಕರಣವು - ಸಾಂಸ್ಕೃತಿಕ ವ್ಯವಸ್ಥೆಯೊಂದರ ಪರಂಪರಾಗತ ಹಾಗೂ ವರ್ತಮಾನದ ನಡೆ-ನುಡಿಗಳನ್ನು ವಿವಿಧ ಕಾರಣಗಳಿಂದಾಗಿ ಮರುಮೌಲ್ಯಮಾಪನಕ್ಕೆ ಒಳಪಡಿಸುವ ಪ್ರಕ್ರಿಯೆಯಾಗುತ್ತದೆ. ೨೧ನೇ ಶತಮಾನದ ಬಹುದೊಡ್ಡ ಪ್ರಶ್ನೆಗಳಾದ ಕೌಟುಂಬಿಕ ನ್ಯಾಯ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ, ಶೈಕ್ಷಣಿಕ ನ್ಯಾಯಗಳಿಂದ ಈಗಾಗಲೇ ಕಟ್ಟಿಕೊಂಡಿದ್ದ, ಪಾಲಿಸುತ್ತಿದ್ದ ಸಾಂಸ್ಕೃತಿಕ ಚಹರೆಗಳನ್ನು ಮುಖಾಮುಖಿಯಾಗಿ ಮೌಲ್ಯೀಕರಿಸಲಾಯಿತು. ಕಾಲಕಾಲಕ್ಕೆ ಮೂಡುತ್ತಿದ್ದ ಹೊಸ ಅರಿವು, ಹೊಸ ಶೋಧ, ಹೊಸ ಸಂಬಂಧ, ಹೊಸ ಸಂಪರ್ಕಗಳ ಕಾರಣಗಳಿಂದ ಸಾಂಸ್ಕೃತಿಕ ಪುನರ್‌ಮೌಲ್ಯೀಕರಣದ ಪ್ರಕ್ರಿಯೆ ತೀವ್ರವಾಗುತ್ತಾ ಹೋಗುತ್ತದೆ.

Downloads

Download data is not yet available.

References

೧. ಉದ್ಧೃತ: ಸಂಸ್ಕೃತಿ ವಿಕಾಸ; ನಂ. ತಪಸ್ವೀಕುಮಾರ್; ಚೇತನ ಬುಕ್ ಹೌಸ್, ಮೈಸೂರು; ೨೦೦೦; ಪುಟ ೨೨.
೨. ಡಿ.ವಿ. ಜಿ; ಸಂಸ್ಕೃತಿ; ಕಾವ್ಯಾಲಯ ಪ್ರಕಾಶನ, ಮೈಸೂರು; ೧೯೮೫ (ನಾಲ್ಕನೇ ಮುದ್ರಣ); ಪುಟ ೧೪.
೩. ಜಾತಿವ್ಯವಸ್ಥೆ-ಉಗಮ, ವಿಕಾಸ, ವಿನಾಶ; ಮೂಲ: ಡಾ. ಬಿ. ಆರ್. ಅಂಬೇಡ್ಕರ್; ಅನುವಾದ-ರಾಹು; ಸುಮೇಧ ಪ್ರಕಾಶನ, ಗುಲಬರ್ಗಾ; ೨೦೧೦; ಪುಟ ೨೧.
೪. ಭಾರತ ದರ್ಶನ; ಮೂಲ: ಜವಾಹರಲಾಲ್ ನೆಹರೂ; ಅನುವಾದ: ಎಸ್.ವಿ. ಕೃಷ್ಣಮೂರ್ತಿರಾವ್; ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು; ೨೦೦೭; ಪುಟ ೩೭೬.
೫. ಡಿ.ಡಿ. ಕೊಸಾಂಬಿ(ಮೂಲ); ಅನುವಾದ-ವೇಣುಗೋಪಾಲ್.ಟಿ. ಎಸ್., ಶೈಲಜಾ; ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ - ಚಾರಿತ್ರಿಕ ರೂಪುರೇಷೆ; ಚಿಂತನ ಪುಸ್ತಕ, ಬೆಂಗಳೂರು; ೨೦೧೧; ಪುಟ ೪೯ ೫೦.
೬. ಡಿ. ಆರ್. ನಾಗರಾಜ್; ಸಾಹಿತ್ಯ ಕಥನ; ಅಕ್ಷರ ಪ್ರಕಾಶನ, ಹೆಗ್ಗೋಡು-ಸಾಗರ, ಶಿವಮೊಗ್ಗ; ಪುಟ ೨೦೧.