ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಮಹಿಳಾ ತತ್ವಪದಕಾರ್ತಿಯರ ಅನುಭಾವದ ನೆಲೆ

ಸಂತೋಷ ಹೆಚ್. ಎಸ್.
ಸಂಶೋಧನಾ ವಿದ್ಯಾರ್ಥಿ, ಎಫ್. ಎಂ. ಕೆ. ಎಂ. ಸಿ ಕಾಲೇಜು, ಮಡಿಕೇರಿ ೫೭೧೨೦೧ ಮಂಗಳೂರು ವಿಶ್ವವಿದ್ಯಾನಿಲಯ

Published 2023-09-30

Keywords

  • ಅನುಭವ, ಅನುಭಾವ, ಪರಮಾತ್ಮ, ಆತ್ಮಶುದ್ಧಿ, ಸಂಸ್ಕೃತಿ, ಸಂಪ್ರದಾಯ, ಸಂಕೋಲೆ, ವಚನ, ತತ್ವಪದ, ವಚನಕಾರ್ತಿಯರು, ತತ್ವಪದಕಾರ್ತಿಯರು, ತತ್ವಪದಕಾರರು, ಗುರುಭಕ್ತಿ, ಮುಕ್ತಿ, ತಲಾಖ್[ವಿಚ್ಛೇದನ], ಲೌಖಿಕ, ಆಧ್ಯಾತ್ಮಿಕತೆ, ಅನುರಕ್ತ, ಜಾರತನ, ಮುಂತಾದವು.

How to Cite

ಹೆಚ್. ಎಸ್. ಸ. . (2023). ಮಹಿಳಾ ತತ್ವಪದಕಾರ್ತಿಯರ ಅನುಭಾವದ ನೆಲೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 124–131. https://doi.org/10.59176/kjksp.v2i2.2308

Abstract

ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟ ಪಾತ್ರ ಮಹಿಳೆಯ ಪಾತ್ರ ಮಹಿಳೆಯರ ಬಗೆಗೆ ಶತ ಶತಮಾನಗಳಿಂದಲೂ ಪ್ರಾಚೀನ ಕನ್ನಡ ಸಾಹಿತ್ಯಗಳಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗೂ ವಿಭಿನ್ನ ನೆಲೆಯಲ್ಲಿ ಚರ್ಚೆ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ, ಸ್ವರವಚನ, ಕೀರ್ತನೆ, ತತ್ವಪದಗಳು ವಿಭಿನ್ನ ಆಶಯಗಳೊಂದಿಗೆ ಬೆಳೆದು ಬಂದಿದೆ. ಅದರಲ್ಲೂ ಸಾಹಿತ್ಯವೇ ಸೃಷ್ಟಿಯಾಗಿಲ್ಲ ಎಂಬ ಕಾಲದಲ್ಲಿ ಹದಿನಾರರಿಂದ ಇಪ್ಪತ್ತನೇಯ ಶತಮಾನದ ಅವಧಿಯಲ್ಲಿ ತತ್ವಪದ ಸಾಹಿತ್ಯವು ಹುಟ್ಟಿ ಸಮಾಜದ ಜನಮಾನಸದಲ್ಲಿ ಆಳವಾಗಿ ಬೇರೂರಿತು. ವಚನಗಳ ಸಮಾಜಮುಖಿಯ ಆಯಾಮ, ಕೀರ್ತನೆಗಳ ಭಕ್ತಿಯ ಆಯಾಮ, ಸ್ವರ ವಚನಗಳ ಅನುಭಾವಿಕ ಆಯಾಮಗಳ ಪ್ರಭಾವ ಪ್ರೇರಣೆಯಿಂದ ತತ್ವಪದ ಸಾಹಿತ್ಯವು ಹುಟ್ಟಿತು.

ಪರಮಾತ್ಮನ ಬಗೆಗಿನ ಅನುಭವ ಈ ಪದ್ಯಗಳಲ್ಲಿ ವ್ಯಕ್ತ ಗೊಂಡಿರುವುದರಿಂದ ಇವಕ್ಕೆ ಅನುಭವ ಪದಗಳೆಂದು, ಇವನ್ನು ಏಕತಾರಿಯಂತಹ ವಾದ್ಯಗಳೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದು, ಅಂತರಂಗದ ಅರಿವಿನ ಮೂಲಭೂತ ತತ್ವಗಳನ್ನು ಆಧ್ಯಾತ್ಮಿಕ ತತ್ವಗಳನ್ನು ಇವು ಒಳಗೊಂಡಿರುವುದರಿಂದ ಇವುಗಳಿಗೆ ತತ್ವಪದಗಳೆಂದು, ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಹಾಡುಗಳೆಂದು ಕರೆದಿದ್ದಾರೆ.  ತತ್ವಪದ ಸಾಹಿತ್ಯದಲ್ಲಿ ಅನೇಕ ಮಹಿಳಾ ತತ್ವಪದಗಾರ್ತಿಯರು ತತ್ವಪದಗಳನ್ನು ರಚಿಸಿ ಸಮಾಜದಲ್ಲಿ ಗೋಚರಿಸಿದ ಸತ್ಯಾಂಶಗಳನ್ನು ತಮ್ಮ ತತ್ವಪದಗಳಲ್ಲಿ ಕಟ್ಟಿ ಹಾಡಿದ್ದಾರೆ ಸಾಹಿತ್ಯ ಕ್ಷೇತ್ರದಲ್ಲಿ ವಚನಕಾರ್ತಿಯರಾದ ಅಕ್ಕಮಹಾದೇವಿ ನೀಲಾಂಬಿಕೆ ಅಮುಗೆರಾಯಮ್ಮ ಮುಂತಾದ ಮಹಿಳಾ ಪಾತ್ರಗಳ ಪರಿಚಯ ಸಾಹಿತ್ಯ ಓದುಗರಗಿದೆ ಆದರೆ ಜನತ ಸಾಹಿತ್ಯದಂತ ತತ್ವಪದ ಸಾಹಿತ್ಯವು ಕಣ್ಮರೆಯಾಗಿದ್ದು ಆಧುನಿಕ ಸಂದರ್ಭದಲ್ಲಿ ಹೆಚ್ಚು ಓದುಗರ ಮನ ಸೆಳೆಯುವ ಸಾಹಿತ್ಯವಾಗಿ ತತ್ವಪದ ಸಾಹಿತ್ಯವು ಬೆಳೆಯುತ್ತಿದೆ ಆದುದರಿಂದ ಪ್ರಮುಖ ತತ್ವಪದಕಾರ್ತಿಯರ ಮತ್ತು ಅವರ ತತ್ವಪದಗಳನ್ನು ಸಾಹಿತ್ಯ ಸಹೃದಯರಿಗೆ ತಿಳಿಸುವ ಸಣ್ಣ ಪ್ರಯತ್ನ ಈ ಲೇಖನದ್ದು, ತತ್ವಪದ ಕಾರ್ತಿಯರ ಪರಿಚಯ ಹಾಗೂ ಅವರ ತತ್ವಪದಗಳಲ್ಲಿ ಅನುಭಾವಿಕ ಅಂಶಗಳು ಮತ್ತು ಪ್ರಸ್ತುತತೆಗೆ ಅವರ ತತ್ವಪದಗಳ ಪ್ರಾಮುಖ್ಯತೆ ಬಗೆಗೆ ವಿಶ್ಲೇಷಿಸುತ್ತೇನೆ. ಬಿದನೂರಿನ ಗಂಗಮ್ಮ, ಜತ್ತ ಶಿವಲಿಂಗವ್ವ, ತಾವರೆಕೆರೆ ವೀರ ದಾಸಮ್ಮ, ರಾಯಚೂರಿನ ಹನುಮಂತವ್ವ, ಫೈಮುದ ಫಾತಿಮಾ ಐದು ತತ್ವಪದಕಾರ್ತಿಯರ ತತ್ವಪದಗಳನ್ನು ಅನುಲಕ್ಷಿಸಿ ಪ್ರಸ್ತುತ “ಮಹಿಳಾ ತತ್ವಪದಕಾರ್ತಿಯರ ಅನುಭಾವದ ನೆಲೆ” ಎಂಬ ಶ್ರೀರ್ಷಿಕೆಗೆ ಅನುಗುಣವಾಗಿ ಇವರ ಪದಗಳಲ್ಲಿ ಬಿಂಬಿತವಾದ ಅನುಭಾವವನ್ನು ತಾರ್ಕಿಕ ನಿಲುವನ್ನು ನನ್ನ ಲೇಖನದಲ್ಲಿ ಚರ್ಚಿಸುತ್ತೇನೆ.

Downloads

Download data is not yet available.

References

1. ನುಡಿವ ಬೆಡಗು, ಅಮರೇಶ ನುಗಡೋಣಿ, ೧೯೯೯, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ
2. ಅನುಭಾವಿ ಮಹಿಳೆಯರು, ಡಾ. ವಿಜಯದೇವಿ, ೨೦೧೩, ಪ್ರಸಾರಾಂಗ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಾಪುರ
3. ಶಿವಶರಣೆಯರ ವಚನಗಳ ವಿಭಿನ್ನ ನೆಲೆಗಳು, ಡಾ. ವೀರಣ್ಣ ಕಾಜೂರ, ೨೦೦೩, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
4. ಮಹಿಳಾ ಸಶಕ್ತೀಕರಣ ; ಒಂದು ಪರಿಕಲ್ಪನೆ, ಹೇಮಲತಾ ಎಚ್. ಎಂ, ೨೦೧೬, ಕುವೆಂಪು ಭಾಷಾ ಭಾರತಿ ಪ್ರಾದಿಕಾರ, ಬೆಂಗಳೂರು.