ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನ ಸಂದರ್ಭ

ಡಾ. ಪ್ರಹ್ಲಾದ ಕೆ.
ಸಹಾಯಕ ಪ್ರಾಧ್ಯಾಪಕರು ಶ್ರೀ ಎಸ್. ಆರ್. ಕಂಠಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಮುಧೋಳ

Published 2023-09-30

Keywords

  • ತಂತ್ರಜ್ಞಾನ, ಅಂತರ್ಜಾಲ ಬೋಧನೆ, ಸೃಜನಶೀಲತೆ, ಮಾನವ ಸಂಪನ್ಮೂಲ

How to Cite

ಕೆ. ಡ. ಪ. (2023). ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನ ಸಂದರ್ಭ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 1–8. https://doi.org/10.59176/kjksp.v2i2.2309

Abstract

ಸಾಹಿತ್ಯವು ಮನುಷ್ಯ ಬದುಕಿನ ಪ್ರತಿಸ್ಪಂದನೆಯಾಗಿ, ಸಾರ್ಥಕ ಜೀವನದ ಸಂಕಥನ ರೂಪಕವಾಗಿ, ಭವಿಷ್ಯದ ಭರವಸೆಯ ಭಾವಸ್ಪಂದನವಾಗಿ ಕಾಲದ ಒಟ್ಟಿಗೆ ಬಂದಿರುವ ಬಹುದೊಡ್ಡ ಶಕ್ತಿಯಾಗಿದೆ. ನಾಡಿನ ಕಲೆ, ಸಂಸ್ಕೃತಿ, ಬದುಕನ್ನು ಒಳಗೊಂಡು ಶ್ರೇಷ್ಠ ಸಾಂಸ್ಕೃತಿಕ ಜಗತ್ತನ್ನು ಅಡಕಗೊಳಿಸಿಗೊಂಡಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಂಪರೆಯು ಹಲ್ಮಿಡಿ ಶಾಸನದಿಂದ ಆರಂಭವಾಗಿ ಆದಿಕವಿ ಪಂಪನನ್ನು ಒಳಗೊಂಡು ಇಂದಿನ ಯುವ ತಲೆಮಾರಿನ ಬರಹಗಾರರವರೆಗೂ ವಿಶಿಷ್ಟ ಪರಂಪರೆಯನ್ನು ನಿರ್ಮಿಸಿಕೊಂಡಿದೆ. ಮೊದಲಿನಿಂದಲೂ ವರ್ತಮಾನದ ಮಾನವನ ಬದುಕನ್ನು ಅನಾವರಣಗೊಳಿಸಿದ್ದಲ್ಲದೆ ಕನ್ನಡ ಭಾಷೆ ಹಾಗೂ ಸಾಹಿತ್ಯ ಚರಿತ್ರೆಯನ್ನು ಶ್ರೀಮಂತವಾಗಿಸುವುದರ ಜೊತೆಗೆ ಮಾನವನ ಶ್ರೇಷ್ಠ ಬದುಕಿಗೆ ಬೇಕಾದ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ ಬಂದಿದೆ. ಕಲ್ಲಿನ ಮೇಲೆ ಕೆತ್ತುವ ಪರಿಪಾಠದಿಂದ ಶುರುವಾಗಿ ಆಧುನಿಕ ಸೌಲಭ್ಯಗಳಾದ ಕಂಪ್ಯೂಟರ್ ಹಾಗೂ ಮೊಬೈಲ್‌ಗಳಲ್ಲಿ ಛಾಪಿಸುವ ಹಂತದವರೆಗೂ ಕನ್ನಡ ಭಾಷೆ, ಬರಹದ ಸ್ವರೂಪದಲ್ಲಿ ಸಾಕಷ್ಟು ಸ್ಥಿತ್ಯಂತರಗಳನ್ನು ಕಂಡುಕೊಳ್ಳುತ್ತ, ಯುಗಧರ್ಮದಲ್ಲಿ ಗಟ್ಟಿಯಾದ ಮೌಲ್ಯಗಳನ್ನು ಪ್ರತಿಪಾದಿಸುವದರ ಮೂಲಕ ತನ್ನ ಇರುವಂತಿಕೆಯನ್ನು ಸ್ಥಾಪಿಸುತ್ತ ಬಂದಿದೆ. ಸುಧಾರಿತ ತಂತ್ರಜ್ಞಾನದಿಂದಾಗಿ ಸಾಮಾಜಿಕ ಜಾಲತಾಣಗಳು ಫೋನ್, ಇಮೇಲ್, ಐಪ್ಯಾಡ್, ಫೇಸ್‌ಬುಕ್, ವಾಟ್ಸಾಪ್‌ಗಳಂತಹ ಸಂವಹನ ವೇದಿಕೆಗಳು ಇಂದು ಮುಖ್ಯವಾಹಿನಿಯಲ್ಲಿವೆ. ಇಂದು ಮಾಹಿತಿಯೇ ಜ್ಞಾನವಾಗುತ್ತಿದೆ ಆ ಜ್ಞಾನವೇ ಇಂದು ಸಾಹಿತ್ಯದ ಒಂದು ಮಜಲಾಗಿ ಬೆಳೆಯುತ್ತಿದೆ ಎನ್ನುವಂತಾಗಿದೆ. ಇಂತಹ ಸುಲಭೋಪಾಯ ಹಾಗೂ ತ್ವರಿತಗತಿಯ ತಂತ್ರಜ್ಞಾನದ ಬದುಕಿನಲ್ಲಿ ಮಾನವೀಯ ಮೌಲ್ಯಗಳ ಹುಡುಕಾಟಕ್ಕೆ ಹೆಣಗಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಪ್ರಸ್ತುತತೆ ಅಗತ್ಯವೆನಿಸುತ್ತಿದೆ. ಭಾಷೆಯು ವಿರೂಪಗೊಳ್ಳುತ್ತಿರುವ, ಜೀವನಮೌಲ್ಯಗಳು ಕುಸಿಯುತ್ತಿರುವ, ಸಂಸ್ಕೃತಿಯ ಸೊಗಡು ಕಳೆಗುಂದುತ್ತಿರುವ ಇಂತಹ ದೈನಂದಿನ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ, ಅಧ್ಯಾಪನ ಹಾಗೂ ಸೃಜನಶೀಲ ವ್ಯಕ್ತಿತ್ವ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗುವಂತಹ ವಾತಾವರಣದ ನಿರ್ಮಾಣಕ್ಕೆ ಒಂದು ಸುಭದ್ರ ಅಡಿಪಾಯನ್ನು ರೂಪಿಸಬಲ್ಲದು ಎಂಬುದು ಪ್ರಸ್ತುತ ಲೇಖನದ ಆಶಯವಾಗಿದೆ.

Downloads

Download data is not yet available.

References

1. ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳು; ಡಾ.ಎಸ್ ಎಂ. ಹಿರೇಮಠ, ವಿದ್ಯಾನಿಧಿ ಪ್ರಕಾಶನ, ಗದಗ; ೧೯೯೩
2. ಚಂಪೂ ಕವಿಗಳು; ಪಿ.ವಿ. ನಾರಾಯಣ; ಸ್ವಪ್ನಬುಕ್‌ಹೌಸ್, ಗಾಂಧಿನಗರ, ಬೆಂಗಳೂರು; ೨೦೧೦
3. ಕನ್ನಡ ಸಾಹಿತ್ಯ ಕೋಶ: ರಾಜಪ್ಪ ದಳವಾಯಿ; ದಳವಾಯಿ ಪ್ರಕಾಶನ, ಬೆಂಗಳೂರು ವಿ.ವಿ.ಬೆಂಗಳೂರು; ೨೦೧೮
4. ಭಾಷಾ ತಂತ್ರಜ್ಞಾನ; ಸಂ.ಡಾ.ಸಾಂಬಮೂರ್ತಿ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ; ೨೦೦೯
5. ಶರಣ ಚರಿತಾಮೃತ; ಡಾ.ಸಿದ್ಧಯ್ಯ ಪುರಾಣಿಕ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು; ೨೦೧೩