ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ವಚನಯುಗ - ಲಿಂಗತ್ವ ಪರಿಕಲ್ಪನೆ

ರೇಖಾ ಹಿಮಾನಂದ್
ಲೇಖಕಿ, ಉಪನ್ಯಾಸರು, ಕಲಾ ಕಾಲೇಜು, ಬಿ.ಹೆಚ್.ರಸ್ತೆ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Published 2024-03-01

Keywords

  • ಪ್ರಮುಖ ಪದಗಳು: ಸ್ತ್ರೀ, ಲಿಂಗ, ಲಿಂಗತ್ವ, ಲೈಂಗಿಕತೆ, ವಚನ, ಹೆಣ್ಣು

How to Cite

ಹಿಮಾನಂದ್ ರ. . (2024). ವಚನಯುಗ - ಲಿಂಗತ್ವ ಪರಿಕಲ್ಪನೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 1–8. https://doi.org/10.59176/kjksp.v3i1.2331

Abstract

ಸ್ತ್ರೀ-ಪುರುಷನ ಅಸ್ತಿತ್ವವು ಲಿಂಗ ವ್ಯವಸ್ಥೆಯಿಂದ ನಿರ್ಧರಿಸಲ್ಪಡುತ್ತದೆ. ಲಿಂಗ, ಲಿಂಗತ್ವ, ಲೈಂಗಿಕತೆ ದೃಷ್ಟಿಯಿಂದ ಪುರುಷನಿಗಿಂತ ಸ್ತ್ರೀಯ ಸ್ಥಾನಮಾನಗಳು ನಗಣ್ಯವೇ ಆಗಿವೆ. ಲಿಂಗ ಎನ್ನುವುದು ಸ್ತ್ರೀ ಪುರುಷರ ನಡುವಿನ ಜೈವಿಕ ವ್ಯತ್ಯಾಸಗಳನ್ನು ತಿಳಿಸುವಂತಹ ಪರಿಕಲ್ಪನೆಯಾದರೆ, ಲಿಂಗತ್ವ ಎನ್ನುವುದು ಸಂಸ್ಕೃತಿಯಿಂದ ನಿರ್ಮಿತವಾದ ಒಂದು ಸಾಮಾಜಿಕ ಸೃಷ್ಟಿ. ಬಿನ್ನ ಜೈವಿಕತೆಯ ಕಾರಣದಿಂದಾಗಿ ಸ್ತ್ರೀ ಪುರುಷರು ಮಾಡಬಹುದಾದ ಅಥವಾ ಮಾಡಬಾರದ ಕಾರ್ಯಗಳಲ್ಲಿ ವ್ಯತ್ಯಾಸಗಳಿರಬೇಕೆನ್ನುವುದು ಸಂಸ್ಕೃತಿ ನಿರ್ಮಾಣ ಮಾಡಿ ಪೋಷಿಸಿಕೊಂಡು ಬಂದಿರುವ ಲಿಂಗತ್ವದ ಭಿನ್ನತೆಗಳೆ ಆಗಿವೆ. ಸಂಸ್ಕೃತಿ ನಿರ್ಮಿತಿಯ ಲಿಂಗಾಧಾರಿತ ವ್ಯವಸ್ಥೆಯಲ್ಲಿ ಮಹಿಳೆ ಹೊಂದಿರುವ ಜೈವಿಕ ವೈಶಿಷ್ಟ್ಯತೆಗಳಾದ ಗರ್ಭದಾರಣೆ, ತಾಯ್ತನ, ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಗಳನ್ನು ನಿಭಾಯಿಸಿಯೇ ತೀರಬೇಕೆಂಬ ನಿಭಂದನೆಯ ಹೊಣೆಗಾರಿಕೆ ಹೊತ್ತಿದ್ದಾಳೆ, ಹೀಗೆ ಸ್ತ್ರೀ ವ್ಯಕ್ತಿತ್ವವನ್ನು ದೇಹದ ನೆಲೆಯಲ್ಲಿ ವ್ಯಾಖ್ಯಾನಿಸಿ, ಸಂತಾನೋತ್ಪತ್ತಿ ಮತ್ತು ವಿಷಯ ಸುಖದ ಸಾಧನವಾಗಿಸಿಕೊಂಡಿದ್ದ ಪುರುಷನಿಷ್ಠ ವ್ಯವಸ್ಥೆಯಲ್ಲಿ ಮಹಿಳೆಯರನ್ನು 'ಮನುಷ್ಯ'ರನ್ನಾಗಿ 'ಆತ್ಮ'ವುಳ್ಳ ಅರಿವಿನ ಜೀವಿಯೆಂದು ಗೌರವಿಸಿದ್ದು ಶರಣ ಸಂಸ್ಕೃತಿ. ಸ್ತ್ರೀಪರ ಧೋರಣೆಗಳಿಂದಾಗಿ ವ್ಯವಸ್ಥೆಯ ಸ್ತ್ರೀಸಂಬಂಧಿತ ಅಮಾನವೀಯ ಆಲೋಚನಾ ಕ್ರಮದಲ್ಲಿ ಪರಿವರ್ತನೆ ಇಲ್ಲಿ ಸಾಧ್ಯವಾಯಿತು. ಸ್ತ್ರೀಯರ ಸಾಮಾಜಿಕ, ಧಾರ್ಮಿಕ ಪ್ರವೇಶವನ್ನು ನಿರ್ಬಂಧಿಸಿದ ಕಟ್ಟುಪಾಡುಗಳು ಈ ಯುಗದಲ್ಲಿ ಬಿಗಿಯನ್ನು ಕಳೆದುಕೊಂಡವು. ಜಾತಿ, ಜನನ ಮತ್ತು ದೇಹ ರಚನೆಯ ನೆಲೆಯಲ್ಲಿ ಮಹಿಳೆಯ ಅಸ್ತಿತ್ವವನ್ನು ಶೂದ್ರ ನೆಲೆಗೆ ತಳ್ಳಲು ಕಾರಣವಾಗಿದ್ದ ಭಾವಸೂತಕಗಳು ಕರಗಲಾರಂಭಿಸಿದವು. "ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ?" ಎನ್ನುವ ಆಯ್ದಕ್ಕಿ ಲಕ್ಕಮ್ಮನ ವೈಚಾರಿಕತೆ, "ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?" ಎನ್ನುವ ಗಜೇಶ ಮಸಣಯ್ಯನ ಪುಣ್ಯಸ್ತ್ರೀಯ ಪ್ರತಿಭಟನೆ, "ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ, ಕಾಸೇ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ, ಅದು ಜಗದ ಬಗೆ, ಬಲ್ಲವರ ನೀತಿಯಲ್ಲ" ಎನ್ನುವ ಸತ್ಯಕ್ಕನ ಲಿಂಗ ತಾರತಮ್ಯ ಖಂಡನೆಯ ದನಿ, “ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂದರಿಯಬಹುದಲ್ಲದೇ ಕಾಣಿಸಬಾರದು” ಎನ್ನುವ ಚಂದಿಮರಸ ಆತ್ಮದ ಸಮಾನ ನೆಲೆಯಲ್ಲಿ ಸ್ತ್ರೀ-ಪುರುಷ ತತ್ವವನ್ನು ದಾಖಲಿಸುತ್ತಾನೆ. ವಚನ ಯುಗದಲ್ಲಿ "ಮಾಯೆ", "ರಾಕ್ಷಸಿ ಎನ್ನುವ ಸ್ತ್ರೀ ಪ್ರತೀಕಗಳು ಮುರಿದುಬಿದ್ದು "ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ" (ಸಿದ್ದರಾಮ) ಎನ್ನುವ ಉನ್ನತ ಮನ್ನಣೆ ಪ್ರಾಪ್ತವಾಯಿತು ಲಿಂಗ ತರತಮತೆಯನ್ನು ಅಲ್ಲಗಳೆದು ಸರಳ ಸಹಜ ಭಾಷೆಯಲ್ಲಿ ಸ್ತ್ರೀ-ಪುರುಷ ಸಮಾನತೆಯನ್ನು ದಾಖಲಿಸುತ್ತಾ ಸಮತೆಯ ಸಮಾಜಕ್ಕೆ ಮಾದರಿಯಾಗಿದೆ ವಚನ ಯುಗ.

Downloads

Download data is not yet available.

References

1. ವಚನ ಸಾಹಿತ್ಯ (ಸಂಪುಟ-೫), ಎಮ್.ಚಿದಾನಂದಮೂರ್ತಿ, ೧೯೭೫, ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು.
2. ಶಿವಶರಣರ ವಚನಾ ಸಂಪುಟ-೫, (ಸಂ) ವೀರಣ್ಣ ರಾಜೂರ, ೨೦೦೧, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
3. ಬಸವಯುಗದ ಶಿವಶರಣೆಯರು, ಲಲ್ಲೇಶ್ವರಿ ಶಂ.ಮೂಗಿ, ೧೯೮೧, ಐಬಿಹೆಚ್ ಪ್ರಕಾಶನ, ಬೆಂಗಳೂರು.
4. ಕರ್ನಾಟಕ ನಂಸ್ಕೃತಿ ಸಮೀಕ್ಷೆ, ಡಾ.ಎಚ್.ತಿಪ್ಪೇರುದ್ರಸ್ವಾಮಿ, ೨೦೦೩, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.
5. ಶರಣತತ್ವ ವಿವೇಚನೆ (ಭಾಗ-೩), ಸಂ, ಪ್ರೊ.ಬಿ.ವಿರೂಪಾಕ್ಷಪ್ಪ, ೨೦೦೬, ಸ್ನೇಹ ಪ್ರಿಂಟರ್ಸ್, ಬೆಂಗಳೂರು.
6. ಶರಣ ಚರಿತಾಮೃತ, ಡಾ.ಸಿದ್ದಯ್ಯ ಪುರಾಣಿಕ, ೨೦೧೦, ಮೆ|| ಪ್ರಿಂಟ್ ಪಾರ್ಕ್, ಬೆಂಗಳೂರು.