ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಪಂಪನ ಕಾವ್ಯಗಳಲ್ಲಿ ಅನುಸಂಧಾನದ ನೆಲೆಗಳು

ದೀಪಿಕ. ಬಿ.
ಕನ್ನಡ ಸಹಾಯಕ ಪ್ರಾಧ್ಯಾಪಕರು ಶ್ರೀ ಎಸ್ ಕರಿಯಪ್ಪ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಕೇಂದ್ರ ಕನಕಪುರ ರಾಮನಗರ 562117

Published 2024-03-01

Keywords

  • ಧರ್ಮ, ರಾಜ ಪ್ರಭುತ್ವ, ಮೋಕ್ಷ, ಕಾವ್ಯ, ದೇಸಿ, ಮರುಓದು

How to Cite

ಬಿ. ದ. (2024). ಪಂಪನ ಕಾವ್ಯಗಳಲ್ಲಿ ಅನುಸಂಧಾನದ ನೆಲೆಗಳು . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 9–16. https://doi.org/10.59176/kjksp.v3i1.2332

Abstract

10ನೇ ಶತಮಾನದ ಕನ್ನಡದ ಕಾವ್ಯ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಎರಡು ಪಠ್ಯಗಳು ವರ್ತಮಾನದಲ್ಲಿಯೂ ಕೂಡ ಬಹಳ ಮುಖ್ಯ ಎನಿಸಿಕೊಳ್ಳುತ್ತವೆ. ಪಂಪ ಮನುಷ್ಯನ ಬದುಕಿನ ಬಗೆಗೆ ಎತ್ತಿದ ಅನೇಕ ಪ್ರಶ್ನೆಗಳು ಇವತ್ತಿನ ಸಮಾಜವನ್ನು ಕೂಡ ಕಾಡುತ್ತಿವೆ. ಮನುಷ್ಯನ ಕೆಡುಕುಗಳು, ಪ್ರಭುತ್ವದ ಆಕ್ರಮಣಶೀಲತೆ, ರಾಜಪ್ರಭುತ್ವದ ಸಾಮ್ರಾಜ್ಯ ವಿಸ್ತರಣೆಯ ಪರಿಣಾಮಗಳು ಸಾಮಾನ್ಯ ಜನರ ಅಸಹಾಯಕತೆ ಈ ಬಗೆಯ ತಾಕಲಾಟಗಳಿಗೆ ವರ್ತಮಾನದಲ್ಲಿಯೂ ಕೂಡ ಪರಿಹಾರ ದೊರಕುತ್ತಿಲ್ಲ ಪ್ರಭುತ್ವವನ್ನು ಮುರಿದು ಕಟ್ಟುವ ಪ್ರಯತ್ನ ಮಾಡಿರುವ ಪಂಪ ಇವತ್ತಿಗೂ ಮರುಓದಿಗೆ ಅರ್ಹನಾಗಿದ್ದಾನೆ. ಜೈನ ಧರ್ಮವನ್ನು ಸ್ವೀಕರಿಸಿದ್ದು ಮತ್ತೊಂದೆಡೆ ಪ್ರಭುತ್ವದ ಅದೀನದಲ್ಲಿದ್ದು ಧರ್ಮತೀತವಾಗಿ ಜಾತ್ಯಾತೀತವಾಗಿ ಮನುಷ್ಯಪರ ನೆಲೆಯಲ್ಲಿ ಇವನ ಎರಡು ಕಾವ್ಯಗಳು ಮುಖ್ಯವಾಗುತ್ತವೆ.  ಕಾವ್ಯದಲ್ಲಿ ಬಳಸಿರುವ ದೇಸಿಪರಂಪರೆ, ಕನ್ನಡ ನಾಡಿನ ಬಗೆಗಿನ ಅಭಿಮಾನ, ಕರ್ಣನ ಉದಾರತೆಯನ್ನು  ಹೊಗಳುವ ಸನ್ನಿವೇಶ ಅವನನ್ನು ಉತ್ತುಂಗಕ್ಕೆ ಕರೆದೊಯ್ಯುತ್ತವೆ. ಹಾಗಾಗಿ ಈ ಎರಡು ಕಾವ್ಯಗಳು ಪ್ರಧಾನವಾಗಿ ಚಿಂತಿಸುವ ಸಂಧಾನದ ಭಾಗ ಓದುಗನನ್ನು ಕಾಡುತ್ತವೆ. ಭರತ ಬಾಹುಬಲಿಯ ಯುದ್ಧವಾಗಲಿ, ಕರ್ಣನನ್ನು ಕುಗ್ಗಿಸುವ ಜನ್ಮವೃತ್ತಾಂತವಾಗಲಿ ಈ ಭಾಗದಲ್ಲಿಯೇ ಬರುವುದರಿಂದ ಪ್ರಸ್ತುತ ಲೇಖನ ಸಂಧಾನದ ಸಾದಕ ಭಾದಕಗಳನ್ನು ಗ್ರಹಿಸುವ ಪ್ರಯತ್ನ ಮಾಡಿದೆ.

Downloads

Download data is not yet available.

References

1. ಆದಿಪುರಾಣ - ಎಲ್ ಗುಂಡಪ್ಪ, 2016, ಪ್ರಸಾರಂಗ ಮೈಸೂರು.
2. ಪಂಪ ಭಾರತ - ಎನ್ ಅನಂತ ರಂಗಾಚಾರ್, 2005 ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
3. ಕನ್ನಡ ಸಾಹಿತ್ಯ ಚರಿತ್ರೆ- ರಂ ಶ್ರೀ ಮುಗಳಿ, 2011 ಗೀತ ಬುಕ್ಸ್ ಹೌಸ್, ಮೈಸೂರು.
4. ಚಂಪು ಕವಿಗಳು - ಪಿ ವಿ ನಾರಾಯಣ, 2008 ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ.
5. ತೆರೆದ ಪಠ್ಯ - ನಟರಾಜ್ ಹುಳಿಯಾರ್, 2012 ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.