ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಚಿತ್ರದುರ್ಗ ಜಿಲ್ಲೆಯ ತತ್ವಪದಗಳಲ್ಲಿನ ಸಾಮಾಜಿಕ ಮೌಲ್ಯಗಳು

ತಿಪ್ಪೇಸ್ವಾಮಿ. ಎಂ.
ಸಂಶೋಧನಾ ವಿದ್ಯಾರ್ಥಿ ಡಾ.ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

Published 2024-03-01

Keywords

  • ತತ್ವಪದಗಳು, ಅವಧೂತರು, ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರ

How to Cite

ಎಂ. ತ. (2024). ಚಿತ್ರದುರ್ಗ ಜಿಲ್ಲೆಯ ತತ್ವಪದಗಳಲ್ಲಿನ ಸಾಮಾಜಿಕ ಮೌಲ್ಯಗಳು . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 22–27. https://doi.org/10.59176/kjksp.v3i1.2334

Abstract

ತತ್ವಪದಗಳ ಮುಖ್ಯ ಉದ್ದೇಶ ಸಮಾಜದಲ್ಲಿ ಬದಲಾವಣೆಯನ್ನು ತರುವುದಾಗಿದೆ. ಸಮಾಜದಲ್ಲಿ ಸಮಾನತೆ, ಸಹಕಾರ, ಸಹಬಾಳ್ವೆಯ ಜೊತೆಗೆ ಸಮಾಜದ ಮನುಜರು ಅರಿವಿನ ಹಾದಿ ಹಿಡಿದು ಬದುಕುವುದರಿಂದ ಸಮಾಜಕ್ಕು ಕ್ಷೇಮ ಎಂಬುದನ್ನು ಅರಿತಿದ್ದರಿಂದಲೆ ಶರಣರು, ಹರಿದಾಸರು, ತತ್ವಪದಕಾರರೆಲ್ಲರೂ ತಮ್ಮ ವಚನಗಳ ಮೂಲಕ, ಕೀರ್ತನೆಗಳ ಮೂಲಕ, ತತ್ವಪದಗಳ ಮೂಲಕ ಸಮಾಜಕ್ಕೆ ತಿಳಿಸುವಂತಹ ಪ್ರಯತ್ನ ಪಟ್ಟರು. ಆಧ್ಯಾತ್ಮಿಕ ಅನುಸಂಧಾನದ ಜೊತೆಜೊತೆಗೆ ಸಮಾಜವನ್ನು ಎಚ್ಚರಿಸುವುದರೊಂದಿಗೆ ಶುದ್ಧೀಕರಿಸುವ ಕಾರ್ಯವನ್ನು ತತ್ವಪದಕಾರರು ನಿರಂತರವಾಗಿ ಮಾಡಿಕೊಂಡು ಬಂದಿರುವುದನ್ನು ಗಮನಿಸಬಹುದು. ಈ ಭಾಗದ ತತ್ವಪದಕಾರರು ಬಯಲು ಸೀಮೆಯ, ಬರದ ನಾಡಿನ ಜನರ ಕಷ್ಟದ ಬದುಕನ್ನು ಕಂಡಿದ್ದರಿAದ ತಮ್ಮ ತತ್ವಪದಗಳಲ್ಲಿ ಸಮಾಜವನ್ನು ತಿದ್ಧುವಂತಹ, ಬದಲಾವಣೆಯನ್ನು ತರುವಂತಹ, ಹಣತೆಯನ್ನು ಹಚ್ಚಿದ್ದಾರೆ.

ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ತತ್ವಪದಗಳಲ್ಲಿನ ಸಾಮಾಜಿಕ ಮೌಲ್ಯಗಳು ಎಂಬ ಲೇಖನದಲ್ಲಿ ಈ ಭಾಗದ ತತ್ವಪದಕಾರರಾದ ತುರುವನೂರು ಲಿಂಗಾರ್ಯ, ಹೊನ್ನೇನಹಳ್ಳಿ ದಾಸಗಿರಿಯಪ್ಪ, ಸಕ್ರಪ್ಪತಾತ, ಅನುಭಾವಿಗಳಾದ ತುರುವನೂರು ಶಿವಲಿಂಗಪ್ಪ, ಖಂಡೇನಹಳ್ಳಿ ಜಿ. ಪರಂಧಾಮಯ್ಯ, ಅವಧೂತರಾದ ಕೊಳಹಾಳ ಕೆಂಚವಧೂತರು, ರಂಗವಧೂತರು, ಶಾಂತವಧೂತರು, ವೀರಪ್ಪತಾತ, ಪಾರಪ್ಪಜ್ಜ, ನರಹರಿಗಳು ಮೊದಲಾದ ಅವಧೂತರನ್ನು ಕಾಣಬಹುದು. ಇವರ ತತ್ವಪದಗಳಲ್ಲಿ ಲೋಕದ ವಿವೇಚನೆಯ ಜೊತೆಗೆ, ಸಾಮಾಜಿಕ ಚಿಂತನೆ, ಸಾಮಾಜಿಕ ವಿಡಂಬನೆ, ವೈಚಾರಿಕತೆಯ ಅಂಶಗಳು ಮಾನವೀಯ ಮೌಲ್ಯಗಳು, ಹುಟ್ಟು-ಸಾವಿನ ಬಗ್ಗೆ, ಬದುಕು-ಬವಣೆಗಳ ಬಗ್ಗೆ, ಸಂಸಾರದ ಜಂಜಾಟವನ್ನು, ಕಾಯಕದ ಮಹತ್ವವನ್ನು, ಕಾಯದ ಪ್ರಾಮುಖ್ಯತೆಯನ್ನು ಹೇಳಲು, ಪ್ರಾಣಿ ಪಕ್ಷಿಗಳ ರೂಪಕಗಳನ್ನು ಬಳಸಿಕೊಂಡು ಪದಗಳನ್ನು ಕಟ್ಟಿ ಹಾಡುವ ಮೂಲಕ ಅವುಗಳನ್ನು ಸಾಮಾಜಿಕ ಚಿಂತನೆಗೆ ಒಳಪಡಿಸಿರುವುದನ್ನು ಇವರ ತತ್ವಪದಗಳು ಸಾರಿ ಹೇಳುತ್ತಿವೆ.

ಇದುವರೆಗೂ ನಾಡಿನಾದ್ಯಂತ ಕಂಡುಬರುವ ತತ್ವಪದಕಾರರ ಕುರಿತಾಗಿ ಚರ್ಚೆಗಳು ನಡೆದಿದ್ದು, ಚಿತ್ರದುರ್ಗದ ಭಾಗದಲ್ಲಿರುವ ತತ್ವಪದಕಾರರನ್ನು ಗುರುತಿಸುವ ಮತ್ತು ಅವರ ತತ್ವಪದಗಳ ಕುರಿತಾಗಿ Z್ಪರ್ಚಿಸುವ ಕಾರ್ಯಗಳು ಅಷ್ಟಾಗಿ ನಡೆದಿರುವುದಿಲ್ಲ. ಆದ್ದರಿಂದ ಈ ಭಾಗದ ತತ್ವಪದಕಾರರ ಮತ್ತು ಅವರ ತತ್ವಪದಗಳಲ್ಲಿನ ಸಾಮಾಜಿಕ ಮೌಲ್ಯಗಳ ಕುರಿತಾಗಿ ಆ ಕೊರತೆಯನ್ನು ನೀಗಿಸುವ ಒಂದು ಸಣ್ಣ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಿರುತ್ತೇವೆ.

Downloads

Download data is not yet available.

References

1. ಹೊನ್ನೆನಹಳ್ಳಿ ದಾಸಗಿರಿಯಪ್ಪ ಸಕ್ರಪ್ಪತಾತ ಮತ್ತು ಇತರರ ತತ್ವಪದಗಳು., (ಸಂ) - ಜೆ. ಕರಿಯಪ್ಪ ಮಾಳಿಗಿ, ಕನ್ನಡ ಪುಸ್ತಕ. ಪ್ರಾಧಿಕಾರ. ಬೆಂಗಳೂರು. ೨೦೧೭.
2. ಶಾಂತಾತ್ಮ ಬೋಧೆ - ಪರಂಧಾಮ ಜಿ., ಸದ್ಗುರು ಪ್ರಕಾಶನ್ ಖಂಡೇನಹಳ್ಳಿ, ೨೦೨೦.
3. ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ-೧., (ಸಂ). ನಟರಾಜ ಬೂದಾಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೧೭
4. ತತ್ವಪದ ಸಾಹಿತ್ಯ - ಡಾ. ಸುರೇಶ ಹನಗಂಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೨೨.
5. ಕನ್ನಡ ಸಂತರ ಪರಮಾರ್ಥ ಪಥ - ರಾನಡೆ ಗುರುದೇವ, ಗುರುದೇವ ರಾನಡೆ ಮಂದಿರ, ಬೆಳಗಾವಿ, ೨೦೧೦.