ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ವೀರೇಶ ಚರಿತೆ

ವಾಣಿಶ್ರೀ ಬಿ. ಎಂ
ಸಹಾಯಕ ಪ್ರಾಧ್ಯಾಪಕರು ಎಮ್. ಇ. ಎಸ್. ಕಲೆ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮಲ್ಲೇಶ್ವರಂ, ಬೆಂಗಳೂರು-೫೬೦೦೦೩

Published 2024-03-01

Keywords

  • ಷಟ್ಪದಿ, ರಾಘವಾಂಕ, ಉದ್ದಂಡ ಷಟ್ಪದಿ, ದಕ್ಷಾಧ್ವರ, ದಧೀಚಿವ್ರತಿ, ಕರುಣಾಕರ ಶಿವ.

How to Cite

ಬಿ. ಎಂ ವ. (2024). ವೀರೇಶ ಚರಿತೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 28–37. https://doi.org/10.59176/kjksp.v3i1.2335

Abstract

ಶ್ರೀಮಂತ ಪರಂಪರೆ, ಸಮೃದ್ಧ ಸಾಹಿತ್ಯ ಇರುವ ಕನ್ನಡ ಭಾಷೆಯು ದ್ರಾವಿಡ ಭಾಷಾ ಪ್ರಬೇಧಕ್ಕೆ ಸೇರಿದ ಒಂದು ಭಾಷೆ. ಸುಮಾರು ೨೦೦೦ ವರ್ಷದಷ್ಟು ಪ್ರಾಚೀನವಾದ ೧೫೦೦ ವರ್ಷಗಳ ಲಿಖಿತ ಇತಿಹಾಸ ಇರುವ ಭಾಷೆ ಕನ್ನಡ.  ಭಾರತದ ಪ್ರಾಚೀನ ಭಾಷೆಗಳಲ್ಲಿ ದೀರ್ಘ ಕಾಲದಿಂದಲೂ ಸತತವಾಗಿ ಜೀವಂತವಾಗಿ ಬೆಳೆದು ಬಂದಿದೆ. ಸ್ವತಂತ್ರ ಲಿಪಿ ಹೊಂದಿ,  ಸಾಕಷ್ಟು ವಿಕಾಸ ಹೊಂದಿದ್ದು, ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಕನ್ನಡ ಸಾಹಿತ್ಯವು ವಿವಿಧ ಕಾಲಘಟ್ಟಗಳಲ್ಲಿ ಬೆಳವಣಿಗೆ ಹೊಂದಿ ಹಲವಾರು ಪ್ರಕಾರದ ಸಾಹಿತ್ಯದ ಉನ್ನತಿಯನ್ನು ಕಂಡಿದೆ.   ಕ್ರಿ, ಶ ೨೦೦ರಲ್ಲಿ ರಚಿತವಾಗಿರುವ ‘ಗಾಥಾಸಪ್ತಶತಿʼ ಯಲ್ಲಿ ಕನ್ನಡ ಪದಗಳ ಉಲ್ಲೇಖವಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.  ಇಂತಹ ಕನ್ನಡ ಭಾಷೆಯಲ್ಲಿ ಹಲವಾರು ಪ್ರತಿಭಾವಂತ ಕವಿಗಳು ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ತಳೆದ ಕನ್ನಡ ಭಾಷೆ ಮತ್ತು ಇಂದಿಗೂ ಅವ್ಯಾಹತವಾಗಿ ಬೆಳೆಯುತ್ತಲೇ ಇದೆ.  ಕವಿಗಳು ಬೆಳೆದ ಪರಿಸರ, ಅವರಿಗೆ ದೊರೆತ ರಾಜಾಶ್ರಯ ಮತ್ತು ಧರ್ಮ  ಅವರು ರಚಿಸಿರುವ ಸಾಹಿತ್ಯದ ಪ್ರೇರಕ ಸಂಗತಿಗಳಾಗಿವೆ.

ಆದಿಕವಿ ಪಂಪನಿಂದ ಪ್ರಾರಂಭವಾದ ಕವಿ ಪರಂಪರೆ ಇಂದಿಗೂ ಉಳಿದು ಬಂದಿದೆ.  ನಿತ್ಯನೂತನವಾಗಿ ಕನ್ನಡ ಸಾಹಿತ್ಯ ವಾಹಿನಿ ಪ್ರವಹಿಸುತ್ತಿದೆ. ಸಂಸ್ಕೃತ ಸಾಹಿತ್ಯದ ಪ್ರಾಬಲ್ಯವಿದ್ದ ಕಾಲದಲ್ಲಿ ಜನ ಸಾಮಾನ್ಯರಿಗಾಗಿ ದೇಸೀ ಭಾಷೆಯಲ್ಲಿ ಕವಿಗಳು ಕೃತಿ ರಚನೆ ಮಾಡಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕವಿಗಳು ತಮ್ಮದೇ ಆದ ಹೊಸ ಪರಂಪರೆ ಹುಟ್ಟುಹಾಕಿ ಮಾರ್ಗ ಪ್ರವರ್ತಕರಾಗಿದ್ದಾರೆ. ತ್ರಿಪದಿಗೆ ಸರ್ವಜ್ಞ, ರಗಳೆಗೆ ಹರಿಹರ, ಷಟ್ಪದಿಗೆ ರಾಘವಾಂಕ ಹೀಗೆ ಕವಿಗಳು ಆಯಾ ಪರಂಪರೆಗೆ ಹೆಸರಾಗಿದ್ದಾರೆ.

ರಾಘವಾಂಕ ಕವಿ ಚಕ್ರವರ್ತಿ ಹರಿಹರನ ಶಿಷ್ಯನೂ, ಸೋದರಳಿಯನೂ ಆಗಿದ್ದಾನೆ. ಷಟ್ಪದಿಯ ಬ್ರಹ್ಮ ಎಂದು ಹೆಸರಾದ ಈತನು ವಾರ್ಧಕ ಷಟ್ಪದಿಯನ್ನು ವ್ಯಾಪಕವಾಗಿ ಬಳಸಿದ್ದಾನೆ. ಇವನಿಂದ ಪ್ರೇರಿತರಾದ ನಂತರದ ಕವಿಗಳು ಷಟ್ಪದಿ ಕಾವ್ಯಗಳನ್ನು ರಚಿಸಿದ್ದಾರೆ. ರಾಘವಾಂಕನ ಮತ್ತೊಂದು ವೈಶಿಷ್ಟ್ಯವೆಂದರೆ, ಅದುವರೆವಿಗೂ ಯಾರೂ ಬಳಸಿರದ ಉದ್ದಂಡ ಷಟ್ಪದಿ ಯನ್ನು ಬಳಸಿ ಕಾವ್ಯ ರಚಿಸಿರುವುದು.  ವೀರಭದ್ರನು ದಕ್ಷ ಯಜ್ಷವನ್ನು ಧ್ವಂಸಗೊಳಿಸಿದ ಕಥೆಯನ್ನು ವೀರೇಶ ಚರಿತೆ ಕಾವ್ಯದಲ್ಲಿ ಹೇಳಿದ್ದಾನೆ. ರಾಘವಾಂಕ ಮತ್ತು ಚಿಕ್ಕನಂಜಾರ್ಯ ಇವರಿಬ್ಬರನ್ನು ಹೊರತುಪಡಿಸಿ ಇನ್ನಾರೂ ಉದ್ದಂಡ ಷಟ್ಪದಿಯನ್ನು ಬಳಸಿಲ್ಲ. ವೀರೇಶ ಚರಿತೆ ಹಾಗೂ ಉದ್ದಂಡ ಷಟ್ಪದಿಯ ಅಧ್ಯಯನ ಮಾಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Downloads

Download data is not yet available.

References

1. ಚೆನ್ನಬಸವ ಪುರಾಣ ವಿರೂಪಾಕ್ಷ ಪಂಡಿತ ಕನ್ನಡ ಸಾಹಿತ್ಯ ಪರಿಷತ್ತು., 1977
2. ಹರಿಶ್ಚಂದ್ರ ಕಾವ್ಯ ಸಂಗ್ರಹ ಟಿ. ಎಸ್. ವೆಂಕಣ್ಣಯ್ಯ, ಎ ಆರ್ ಕೃಷ್ಣಶಾಸ್ತ್ರಿ., ಮೈಸೂರು ವಿಶ್ವವಿದ್ಯಾಲಯ., ಮೈಸೂರು., 1972
3. ಹರಿಶ್ಚಂದ್ರ ಕಾವ್ಯ ಸಂಗ್ರಹ., ಮೈಸೂರು ವಿಶ್ವವಿದ್ಯಾಲಯ., ಮೈಸೂರು., 1972
4. ವೀರೇಶ ಚರಿತೆ, ಬಿ. ಶಿವಮೂರ್ತಿಶಾಸ್ತ್ರಿ, ಶರಣ ಸಾಹಿತ್ಯ ಗ್ರಂಥಮಾಲಾ ಮುರುಘಾ ಮಠ̈, ೧೯೬೬