ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಬೇಂದ್ರೆಯವರ ‘ಕನ್ನಡ ಮೇಘದೂತ’ ಕಾವ್ಯದಲ್ಲಿ ಸ್ಥಳಪುರಾಣ, ಇತಿಹಾಸ, ಮತ್ತು ಪ್ರಕೃತಿ ವರ್ಣನೆ

ರಮೇಶ್ ಮಣ್ಣೆ
ಸಹಾಯಕ ಪ್ರಾಧ್ಯಾಪಕರು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು

Published 2024-03-01

Keywords

  • ದಾಂಪತ್ಯ, ವಿರಹ,

How to Cite

ಮಣ್ಣೆ ರ. (2024). ಬೇಂದ್ರೆಯವರ ‘ಕನ್ನಡ ಮೇಘದೂತ’ ಕಾವ್ಯದಲ್ಲಿ ಸ್ಥಳಪುರಾಣ, ಇತಿಹಾಸ, ಮತ್ತು ಪ್ರಕೃತಿ ವರ್ಣನೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 38–45. https://doi.org/10.59176/kjksp.v3i1.2336

Abstract

ಭಾರತೀಯ ಪ್ರಾಚೀನ ಸಾಹಿತ್ಯ ಸಂದರ್ಭದಲ್ಲಿ ಮಹಾಕವಿ ಕಾಳಿದಾಸ ತನ್ನದೇ ಆದ ಛಾಪನ್ನು ಮೂಡಿಸಿದವನು. ಇಂತಹ ಮಹಾಕವಿಯ ‘ಮೇಘದೂತ' ಕಾವ್ಯವನ್ನು ವರಕವಿ ಬೇಂದ್ರೆಯವರು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ.  ಅದು ಕಾಳಿದಾಸನೇ ಕನ್ನಡದಲ್ಲಿ ಬರೆದಿದ್ದರೂ ಬೇಂದ್ರೆಯವರಂತೆ ಬರೆಯುತ್ತಿದ್ದನೋ ಇಲ್ಲವೋ ಎಂಬ ಮಾತುಗಳಿವೆ.  ಕಾಳಿದಾಸನ ದಿವ್ಯವಾದ ಒಂದು ಪ್ರೇಮಗೀತೆಯನ್ನು ಬೇಂದ್ರೆಯವರು ತಮ್ಮ ಭಾಷೆಯ ಧಾರಣಶಕ್ತಿಯ ಸಾಮರ್ಥ್ಯದಲ್ಲಿ ಕನ್ನಡಕ್ಕೆ ಇಳಿಸಿದ್ದಾರೆ, ಹಾಗೂ ಹೆಚ್ಚು ಸಹೃದಯ ಓದುಗರನ್ನು ಕೃತಿ ಆಕರ್ಷಿಸಿತು ಎಂಬುದು ಸಾಹಿತ್ಯ ಚರಿತ್ರೆ ಸೇರಿಕೊಂಡಿದೆ.

         ದಾಂಪತ್ಯ ಹಾಗೂ ವಿರಹಿಗಳ ಪ್ರೇಮ ವಿಲಾಪವನ್ನು ವಿಶದಪಡಿಸುವ ಕಾವ್ಯದ ಚಲನೆಯಲ್ಲಿ ಶೃಂಗಾರದ ರಹಸ್ಯವನ್ನು ಅಡಗಿಸಿಕೊಂಡು, ಬೇಂದ್ರೆಯವರು ಸೌಂದರ್ಯದ ವ್ಯಾಖ್ಯಾನವನ್ನು ಮಾಡಿದ್ದಾರೆ.  ಈ ಕೃತಿ ಕೇವಲ ಭಾಷಾಂತರವಲ್ಲ ಭಾವಾನುವಾದವೂ ಅಲ್ಲ, ಆದರೆ ಇಬ್ಬರು ಮಹಾಕವಿಗಳ ಶೃಂಗಾರ ದರ್ಶನ, ಅದರೊಂದಿಗೆ ಸ್ಥಳಪುರಾಣ, ಇತಿಹಾಸ ಮತ್ತು ಪ್ರಕೃತಿ ವರ್ಣನೆಗಳ ಸಮ್ಮಿಳಿತವಿದೆ.  ಇದೊಂದು ಇತಿಹಾಸ ಕಥನದಂತೆ ಓದುಗರಿಗೆ ಮೇಲ್ನೋಟಕ್ಕೆ ಕಾಣಿಸಿದರೂ, ಕಾವ್ಯದಲ್ಲಿನ ನದಿ, ಪರಿಸರ, ಭೂ ವಿಜ್ಞಾನ, ವರುಣನ ಆರ್ಭಟ, ಜಾನಪದ ನಂಬಿಕೆಗಳು, ಸ್ನೇಹ ಮತ್ತು ಅದರ ಮಹತ್ವ, ಮರ್ತ್ಯಲೋಕ ದೇವಲೋಕಗಳ ಜನರ ವ್ಯವಹಾರಗಳು, ದೈವಭಕ್ತಿ, ದೇವಾಲಯ, ಪಕ್ಷಿಗಳು, ಪ್ರಾಣಿಗಳು, ಫಲ, ಪುಷ್ಪ, ವೃಕ್ಷಗಳು ಹೀಗೆ ಪ್ರಕೃತಿಯ ಅನನ್ಯ ವಿಸ್ತಾರವನ್ನು, ವಿಹಂಗಮ ನೋಟವನ್ನು ಚೆಲ್ಲುತ್ತದೆ.  ಅಲ್ಲದೆ ಋತುವಿಲಾಸ, ಗಾಳಿಯ ಚಲನೆ, ಕಾಡು-ನಾಡುಗಳ, ಬೆಳೆಗಳ, ನಗರ ಜೀವನದ, ಗ್ರಾಮ ಜೀವನದ, ಆದಿವಾಸಿಗಳ ನಾಗರೀಕರ ವರ್ಣನೆಗಳಿಂದಾಗಿ ಈ ಕಾವ್ಯವೊಂದು ಸಂಕ್ಷಿಪ್ತ ವಿಶ್ವಕೋಶದಂತೆ ಭಾಸವಾಗುತ್ತದೆ.

Downloads

Download data is not yet available.

References

1. ಮೇಘದೂತ., ಅ.ರಾ. ಮಿತ್ರ., ವಸಂತ ಪ್ರಕಾಶನ, ಬೆಂಗಳೂರು, 2012
2. ಮೇಘದೂತ., ನಾರಾಯಣ ಘಟ್ಟ., ಗಾರ್ಗಿ ಪ್ರಕಾಶನ, ಬೆಂಗಳೂರು, 2012
3. ಕನ್ನಡ ಮೇಘದೂತ., ಜಿ. ಕೃಷ್ಣಪ್ಪ., ವಂಶಿ ಪಬ್ಲಿಕೇಷನ್ಸ್‌, ನೆಲಮಂಗಲ, ಬೆಂಗಳೂರು, 2021
4. ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು., ಶೈಲಜಾ ಹೆಗಡೆ., ಅಭಿಜಿತ್ ಪ್ರಕಾಶನ, ಮುಲುಂದ (ಪಶ್ಚಿಮ) ಮುಂಬೈ, 2017
5. ಭುವನದ ಭಾಗ್ಯ, ಜಿ.ಎಸ್ ಆಮೂರ., ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, 1991
6. ಹಾಡೆ ಹಾದಿಯ ತೋರಿತು, ಎಚ್.ಎಸ್ ರಾಘವೇಂದ್ರರಾವ್., ಕನ್ನಡ ಸಂಘ, ಕ್ರೈಸ್ತ ವಿಶ್ವವಿದ್ಯಾಲಯ, ಬೆಂಗಳೂರು, 1995
7. ಅಂಬಿಕಾತನದತ್ತರ ಮೇಘದೂತ., ದ.ರಾ. ಬೇಂದ್ರೆ., ಶ್ರೀಮಾತಾ ಪ್ರಕಾಶನ,ಸಾಧನಕೇರಿ, ಧಾರವಾಡ, 2011