ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಮಹಾಶ್ವೇತಾದೇವಿಯವರ ಸ್ತನದಾಯಿನಿ – ಒಂದು ಅವಲೋಕನ

ರಾಧಾ ನಾಡಿಗ್
ಮುಖ್ಯಸ್ಥರು, ಕನ್ನಡ ವಿಭಾಗ, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ-ಸ್ವಾಯತ್ತ ಬಸವನಗುಡಿ, ಬೆಂಗಳೂರು

Published 2024-03-01

Keywords

  • ಸ್ತ್ರೀವಾದ, ಕಥನ, ಕಂಗಾಲೀಚರಣ, ಪ್ರಭುತ್ವ, ಅಧಿಕಾರ

How to Cite

ನಾಡಿಗ್ ರ. (2024). ಮಹಾಶ್ವೇತಾದೇವಿಯವರ ಸ್ತನದಾಯಿನಿ – ಒಂದು ಅವಲೋಕನ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 46–53. https://doi.org/10.59176/kjksp.v3i1.2337

Abstract

ಭಾರತೀಯ ಸಂದರ್ಭದಲ್ಲಿ ಬಹುಚರ್ಚಿತ ಹಾಗೂ ಮಹತ್ವದ ಲೇಖಕಿಯಾದ ಮಹಾಶ್ವೇತಾದೇವಿ ಅವರು ಈ ದೇಶ ಕಂಡ ಅಪರೂಪದ ಚಿಂತಕಿ, ಈಶಾನ್ಯ ಭಾರತದ ಆತ್ಮಸಾಕ್ಷಿಪ್ರಜ್ಞೆ, ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಪ್ರಖರ ನೆಲೆವೀಡಾದ ಬಂಗಾಳದ ಪ್ರತಿಭೆ. ಅವರು ರಾಷ್ಟ್ರೀಯತೆಯ ಸಂಕಥನವನ್ನು ನಿರಚನೆ ಮಾಡುವ ಕಥನಗಳನ್ನು ಸೃಷ್ಟಿಸಿದ್ದು ಇತಿಹಾಸ. ಇಂತಹ ಇತಿಹಾಸದಲ್ಲಿ ಪ್ರವೇಶವನ್ನೇ ಪಡೆಯದಿದ್ದ ಅದೆಷ್ಟೋ ಸಮುದಾಯಗಳನ್ನು ತಮ್ಮ ಸಾಹಿತ್ಯ ಪ್ರಪಂಚದೊಳಗೆ ತಂದವರು. ಮೌಖಿಕ ಇತಿಹಾಸ, ಜನಕಥೆ, ಜಾನಪದ ಜ್ಞಾನದಲ್ಲಿ ಅಪಾರ ನಂಬಿಕೆ ಹೊಂದಿದ್ದ ಮಹಾಶ್ವೇತಾದೇವಿ ಇವೆಲ್ಲವನ್ನೂ ತಮ್ಮ ಬರಹದಲ್ಲಿ ರೂಢಿಸಿಕೊಂಡಿದ್ದರು. ದೇಶದ ಅತ್ಯುನ್ನತ ಸಾಹಸಿ ಮಹಿಳೆಯರಲ್ಲೊಬ್ಬರಾದ ಝಾನ್ಸಿರಾಣಿ ಕುರಿತ ಅವರ ಚಿತ್ರಣ, ಜನರ ಜತೆಗಿನ ಸಂವಾದದಿAದಲೇ ಸ್ಪೂರ್ತಿ ಪಡೆದಂತಹದ್ದು. ಇಂತಹ ಪರ್ಯಾಯ ಇತಿಹಾಸದ ಪ್ರಯತ್ನಕ್ಕೆ ಕೈ ಹಾಕಿದ ಅಪರೂಪದ ಹಾಗೂ ಮೊಟ್ಟ ಮೊದಲ ಲೇಖಕಿ ಹಾಗೂ ಹೋರಾಟಗಾರ್ತಿ.

         ʻಸ್ತ್ರೀʼ ಎಂಬ ಪರಿಕಲ್ಪನೆಯನ್ನು ಪುರುಷ ಸಮಾಜ ತನ್ನ ಗ್ರಹಿಕೆಗೆ ತಕ್ಕಂತೆ ವ್ಯಾಖ್ಯಾನಿಸುತ್ತದೆ. ಸಂಸ್ಕೃತಿ ಮತ್ತು ಪ್ರಕೃತಿಗಳ ದ್ವಂದ್ವಾತ್ಮಕ ವರ್ಗೀಕರಣ ಇರುವುದು ಸತ್ಯವಾದರೂ ಮಕ್ಕಳ ಲಾಲನೆ-ಪಾಲನೆ ಮಹಿಳೆಯರಿಗೆ ಪ್ರಾಥಮಿಕ ಕೆಲಸವೆಂಬಂತೆ ಹೊರಿಸುವ ಪುರುಷ ಸಮಾಜ ಸ್ತ್ರೀಯನ್ನು ಪ್ರಕೃತಿಯೊಂದಿಗೆ ಸಮೀಕರಿಸಿದೆ. ಹೀಗೆ ಸ್ತ್ರೀ ಪ್ರಕೃತಿಯ ಸಹವರ್ತಿ ಅಥವಾ ಆಕೆಯೇ ಪ್ರಕೃತಿಯೆಂದು ಕರೆಯುತ್ತಾ, ಮಾನವನ ಸ್ವಭಾವಗುಣಕ್ಕೆ ಹೊರತಾದ ಪ್ರಕೃತಿಯ ಗುಣವನ್ನು ಸ್ತ್ರೀಗೆ ಹೋಲಿಸಿ; ಆ ಗುಣವೇ ಸ್ತ್ರೀ ಸ್ವಭಾವದ ಅಂಗವಾಗಿದೆ ಎಂದು ಪರಿಗಣಿಸಲಾಗುತ್ತಿದೆ.

Downloads

Download data is not yet available.

References

1. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ., ತೇಜಸ್ವಿನಿ ನಿರಂಜನ., 2014., ಅಭಿನವ ಪ್ರಕಾಶನ., ಬೆಂಗಳೂರು
2. ಶ್ರೀಮತಿ ಎಚ್. ಎಸ್. ಮಹಾಶ್ವೇತಾದೇವಿ ಅವರ ಕಥಾಸಾಹಿತ್ಯ ಭಾಗ-೨, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು, 2011
3. ಕ್ರಿಯೆ ಪ್ರತಿಕ್ರಿಯೆ., ಕೆ. ಕೇಶವ ಶರ್ಮ., 1992., ಅನ್ವೇಷಣೆ ಪ್ರಕಾಶನ, ಬೆಂಗಳೂರು