ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಮುದ್ದಣ ಕನ್ನಡದ ವಿಸ್ಮಯ ಪ್ರತಿಭೆ

ರವಿಶಂಕರ್. ಎ.ಕೆ
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಕೆ. ನಾರಾಯಣಪುರ, ಬೆಂಗಳೂರು

Published 2024-03-01

Keywords

  • ಪುರಾಣ, ಜಾನಪದ, ನಾಟಕ, ಕಾವ್ಯ, ವಿಮರ್ಶೆ, ಸಹೃದಯ

How to Cite

ಎ.ಕೆ ರ. (2024). ಮುದ್ದಣ ಕನ್ನಡದ ವಿಸ್ಮಯ ಪ್ರತಿಭೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 54–66. https://doi.org/10.59176/kjksp.v3i1.2338

Abstract

ಕನ್ನಡ ಸಾಹಿತ್ಯದ ಅಧ್ಯಯನಕಾರರು ಅತ್ಯಂತ ಗಂಭೀರವಾಗಿ ಪುರಾಣದ ಹಾಗೂ ಜಾನಪದ ಸಾಹಿತ್ಯವನ್ನು ವಿವಿಧ ರೂಪಗಳಲ್ಲಿ ಅಧ್ಯಯನಮಾಡಿದ್ದಾರೆ. ನಮ್ಮ ಪೂರ್ವ ಸಾಹಿತ್ಯ ಪ್ರತಿ ರಚನೆಯೂ, ಪೂರ್ವ ಅಧ್ಯಯನಗಳ ಫಲವೇ ಆಗಿದೆ. ಆ ಅಧ್ಯಯನಗಳನ್ನು ಹೊಸ ಮಾದರಿಗಳಲ್ಲಿ ಸಂಶೋಧಿಸುವ ನೈಪುಣ್ಯತೆ, ಮರುರಚನೆಯ ಶಕ್ತಿ, ಭಾಷೆ ಹಾಗೂ ಶೈಲಿಯನ್ನು ದುಡಿಸಿಕೊಳ್ಳುವ ಜಾಣ್ಮೆ ಈ ಮೊದಲಾದ ಎಲ್ಲಾ ವಿಷಯಗಳ ಅಭಿವ್ಯಕ್ತಿಯಾಗಿ ನಮ್ಮ ಪೂರ್ವ ಸಾಹಿತ್ಯ ಕಂಡುಬರುತ್ತದೆ. ಈ ಅಧ್ಯಯನ ಸ್ವರೂಪವನ್ನು ೧೯ನೇ ಶತಮಾನದಲ್ಲಿ ಹಲವು ಹೊಸಮಾದರಿಗಳಿಗೆ ಅಳವಡಿಸಲಾಯಿತು. ಅದು ಆಂಗ್ಲ ಸಾಹಿತ್ಯ, ಪ್ರಮುಖ ಪಾದ್ರಿಗಳು ಹಾಗೂ ಸ್ಥಳೀಯ ವಿದ್ವಾಂಸರ ಸಹಕಾರವು, ಶ್ರಮವೂ ಮುಖ್ಯವಾಗಿ ಕಾಣಿಸಿತು. ಶಾಸನಗಳು, ತಾಮ್ರಪಟಗಳು, ತಾಳೆಗರಿಗಳು ಹೀಗೆ ಹಲವು ಆಯಾಮಗಳಲ್ಲಿ ಸಾಹಿತ್ಯವು ನಮಗೆ ಸಂಗ್ರಹ ಶಕ್ತಿಯ ಮೂಲಕ ಲಭಿಸಿತು. ನಮ್ಮ ಜಾನಪದ ಪರಂಪರೆಯನ್ನು ಹಾಗೂ ಶಾಸ್ತ್ರ ಕೃತಿಗಳನ್ನು ಸಮಾನ ಯುಕ್ತಿಯ ಮೂಲಕ ಸಂಪಾದಿಸಿದರು. ಈ ಬೆಳಕಿನಲ್ಲಿ ಹೊಸ ಜ್ಞಾನದ ಉದಯವೊಂದು ಕಾಣಿಸಿತು. ಅದನ್ನು ಪುನರುಜ್ಜೀವನ ಕಾಲ, ಅರುಣೋದಯವೆಂದು ನಮ್ಮ ವಿದ್ವಾಂಸರು ಗುರ್ತಿಸಿದರು. ಈ ಕಾಲದ ಮೊದಲ ಕವಿಯಾಗಿ ಪೂರ್ವಸಾಹಿತ್ಯಕ್ಕೂ ಆಧುನಿಕತೆಗೂ ಸೇತುವೆ ಬೆಸದ ಪಂಡಿತನೇ ನಮ್ಮ ಮುದ್ದಣ. ಇಂತಹ ಸಂದರ್ಭದಲ್ಲಿ ನಮ್ಮ ಭಾರತೀಯ ಸಾಹಿತ್ಯ ಅದರಲ್ಲೂ ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ, ಅದಕ್ಕೆ ಸ್ಥಳೀಯವಾದ ಕನ್ನಡದ ಚೆಲುವನ್ನು, ಕಥಾ ನೈಪುಣ್ಯತೆಯನ್ನು ಪೋಣಿಸಿ ದರ್ಶನ ಮಾಡಿಸಿದವರು ನಂದಳಿಕೆ ಲಕ್ಷ್ಮೀನಾರಾಣಪ್ಪ. ನಮಗೆ ಪರಿಚಯವಿರುವ ಹೊಸಗನ್ನಡದ ಮುಂಗೋಳಿ ಮುದ್ದಣ. ಈ ಮುದ್ದಣನು ಕನ್ನಡದ ಶ್ರೇಷ್ಟ ವಿಮರ್ಶಕ ಎಸ್. ವಿ ರಂಗಣ್ಣ ಅವರು ತಿಳಿಸುವಂತೆ ಸಾಮಾನ್ಯ ಚಿತ್ರವೇ ಹೌದು. ಆದರೆ, ಈ ಸಾಮಾನ್ಯ ಚಿತ್ರವನ್ನು ಅಸಾಮಾನ್ಯವಾಗಿ ಅಧ್ಯಯನಮಾಡಿ ಸುವರ್ಣದ ಚೌಕಟ್ಟು ನೀಡಿದ್ದು, ಮುದ್ದಣನ ಪ್ರತಿಭೆಗೆ ಸಿಕ್ಕಂತಹ ಅರ್ಥಪೂರ್ಣ ಗೌರವ ಎನ್ನಬಹುದು.

Downloads

Download data is not yet available.

References

೧. ಮುದ್ದಣ ಭಂಡಾರ., ಸಂಪುಟ: ೧., ಸಂಪುಟ:೨., ಜಿ. ವೆಂಕಟಸುಬ್ಬಯ್ಯ., ಕನ್ನಡ ಸಂಸ್ಕೃತಿ ನಿರ್ದೇಶನಾಲಯ., ಬೆಂಗಳೂರು, ೧೯೮೭
೨. ಮುದ್ದಣ., ತ.ಸು. ಶಾಮರಾಯ., ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೪೩
೩. ಮುದ್ದಣನ ಶ್ರೀರಾಮಾಶ್ವಮೇಧಂ., ಟಿಪ್ಪಣಿ ಸಾರ ಸಮೇತ., ಸಂ. ತೆಕ್ಕಂಜೆ ಗೋಪಾಲಕೃಷ್ಣ ಭಟ್ಟ., ಮಂಗಳೂರು, ೧೯೭೨
೪. ಹೊಸಗನ್ನಡ ಅಧ್ಭುತ ರಾಮಾಯಣ., ಶಂಕರನಾರಾಯಣಭಟ್ಟ., ಉಷಾ ಸಾಹಿತ್ಯ ಮಾಲೆ., ಮೈಸೂರು., ೧೯೭೩