ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಚಿತ್ರದುರ್ಗ ಪರಿಸರದ ಚಕ್ಕೆ ಭಜನೆ: ವೈಶಿಷ್ಟ್ಯತೆಗಳು

ರುಜುವಾನ್. ಕೆ.
ಸಂಶೋಧನಾ ವಿದ್ಯಾರ್ಥಿ ಡಾ. ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ

Published 2024-03-01

Keywords

  • ಶ್ರೀ ರಾಮ ಚಕ್ಕೆಭಜನೆ, ಶ್ರೀ ರಾಮನ ನಾಮಾವಳಿ, ಗೆಜ್ಜೆಪೂಜೆ, ಪದ್ಮವ್ಯೂಹಂ

How to Cite

ಕೆ. ರ. (2024). ಚಿತ್ರದುರ್ಗ ಪರಿಸರದ ಚಕ್ಕೆ ಭಜನೆ: ವೈಶಿಷ್ಟ್ಯತೆಗಳು . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 67–73. https://doi.org/10.59176/kjksp.v3i1.2339

Abstract

ಜಾನಪದ ಎನ್ನುವುದು ಕೇವಲ ಹಾಡಲ್ಲ. ಅದರಲ್ಲಿ ದೈವದ ಮೇಲಿನ ಭಕ್ತಿ-ಧ್ಯಾನ, ಚಿಂತನೆಯಷ್ಟೆ ಇರುವುದಿಲ್ಲ. ಅದರೊಡಲಲ್ಲಿ ಧಾರ್ಮಿಕ ಆಚರಣೆ, ಸಾಮಾಜಿಕ ಪ್ರಜ್ಞೆ, ಕಲೆ, ನಡೆ-ನುಡಿ, ಮೊದಲಾದವುಗಳನ್ನೆಲ್ಲಾ ಒಳಗೊಂಡಿರುತ್ತದೆ. ಜನಪದರ ಒಡಲಾಳದಲ್ಲಿ ಹುಟ್ಟಿಕೊಂಡAತಹ ಕಲೆಗಳು, ನಾಗರೀಕತೆಗಳ ಯುಗಮಾನಗಳಷ್ಟೇ ಪುರಾತನವಾದವುಗಳು. ಮನುಷ್ಯನಿಗೆ ಗಾಳಿ, ಬೆಳಕು, ನೀರು, ಆಹಾರಗಳಷ್ಟೇ ಕಲೆಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಕಂಡುಬAದಿರಬೇಕು. ಅಂತೆಯೇ ಅನಾದಿಕಾಲದಿಂದಲೂ ಇಂದಿನವರೆಗೂ ಜನಪದಕಲೆಗಳು ಜನಪದರ ಉಸಿರಾಗಿ ಜೀವಂತವಾಗಿ ಉಳಿದುಬಂದಿದೆ. ಈ ದೃಷ್ಟಿಯಿಂದ ಮಾನವನ ಚರಿತ್ರೆಯೆಂದರೆ ಒಂದರ್ಥದಲ್ಲಿ ಅವನು ಉಳಿಸಿ ಬೆಳೆಸಿಕೊಂಡು ಬಂದಿರುವ ಮೌಲಿಕವಾದ ಈ ನಾಡಿನ ಸಾಹಿತ್ಯ, ಸಂಸ್ಕೃತಿ ಕಲೆಗಳ ಇತಿಹಾಸವೇ ಆಗಿದೆ ಎನ್ನಬೇಕು. ಜನಪದ ಕಲೆಗಳು ಒಂದು ನಾಡಿನ ಇಲ್ಲವೆ ಒಂದು ಪ್ರದೇಶದ ಭವ್ಯ ಪರಂಪರೆಯ ಅಪೂರ್ವ ಸಂಪತ್ತು. ಒಂದು ಕಾಲಘಟ್ಟದ ಜನಜೀವನದ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಲು ಜನಪದಕಲೆಗಳಿಗೆ ಮೊರೆ ಹೋಗಬೇಕಾಗಿರುವುದು ಅನಿವಾರ್ಯ. ಅವು ಜನರ ಬದುಕಿನ ಇತಿಹಾಸವನ್ನು ದರ್ಶಿಸುತ್ತವೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಪರಿಸರದ ಚಕ್ಕೆಭಜನೆ ಕಲೆಯು ಅತ್ಯಂತ ಪುರಾತನಕಲೆಯಾಗಿದ್ದು, ಆ ಕಲೆಯ ಹಿನ್ನೆಲೆ, ಪ್ರದರ್ಶನಗೊಳ್ಳುವ ಬಗೆ ಮತ್ತು ಅದರ ವೈಶಿಷ್ಟ್ಯತೆಗಳ ಕುರಿತು ಈ ಲೇಖನದಲ್ಲಿ ಸಾದರಪಡಿಸಲಾಗಿದೆ.

ಪ್ರಸ್ತುತ ಚಿತ್ರದುರ್ಗ ಪರಿಸರದ ಚಕ್ಕೆ ಭಜನೆ: ವೈಶಿಷ್ಟ್ಯತೆಗಳು ಎಂಬ ಲೇಖನದಲ್ಲಿ, ಈ ಭಾಗದ ಚಕ್ಕೆ ಭಜನೆ ಕಲೆಯ ಮೇಲೆ ಸ್ವಲ್ಪ ಮಟ್ಟಿಗೆ ಬೆಳಕು ಚೆಲ್ಲುವಂತಹ ಒಂದು ಪ್ರಯತ್ನವನ್ನು ಮಾಡವುದು ಇದರ ಉದ್ದೇಶವಾಗಿದೆ. ಅಲ್ಲದೆ ಈ ಕಲೆಯ ಹುಟ್ಟು ಮತ್ತು ಬೆಳವಣಿಗೆ, ಕಲೆಯ ಶಿಕ್ಷಣ, ಅದನ್ನು ನಿರ್ವಹಿಸುವ ಬಗೆ ಇನ್ನೂ ಮುಂತಾದ ವಿಶಿಷ್ಟತೆಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ. ಇದರಿಂದಾಗಿ ಜನಪದರ ಮೂಲನೆಲೆಯಾದ ಪ್ರದರ್ಶನಾತ್ಮಕ ಕಲೆಗಳ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ ಇಲ್ಲಿನ ಸಂಸ್ಕೃತಿಯ ತೀವ್ರತೆಯನ್ನು ಅರಿಯಬಹುದು ಎಂಬ ಉದ್ದೇಶದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. ಹಾಗೆಯೇ ಇಲ್ಲಿಯ ಜನಪದ ಕುಣಿತವಾದ ಚಕ್ಕೆಭಜನೆಯ ವೈಶಿಷ್ಟ್ಯತೆಗಳ ಮಹತ್ವವನ್ನು ನಾಡಿಗೆ ಪರಿಚಯಿಸುವ ಮತ್ತು ಇಲ್ಲಿನ ಸಂಸ್ಕೃತಿಯನ್ನು ಪಸರಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ.

ಇದುವರೆಗೂ ನಾಡಿನಾದ್ಯಂತ ಈ ರೀತಿಯ ಹಲವು ಕಲೆಗಳ ಬಗ್ಗೆ ಅಧ್ಯಯನಗಳು ನಡೆದಿದ್ದು, ಚಕ್ಕೆಭಜನೆಯ ಕಲೆಯ ಕುರಿತಾಗಿ ಅಧ್ಯಯನಗಳು ನಡೆದಿರುವುದು ಬಹಳಷ್ಟು ವಿರಳ. ದಕ್ಷಿಣ ಭಾರತೀಯ ಜಾನಪದಕೋಶ, ಸಂಪುಟ-೧ರಲ್ಲಿ ಚಕ್ಕೆಭಜನೆ ಕಲೆಯ ಪ್ರಸ್ತಾಪವಾಗಿದ್ದರೂ, ವಿಸ್ತೃತ ಅಧ್ಯಯನವಾಗಿರುವುದಿಲ್ಲ.

ಅದರಲ್ಲೂ ಚಿತ್ರದುರ್ಗದ ಪರಿಸರದಲ್ಲಿ ಪ್ರದರ್ಶನದಲ್ಲಿರುವ ಚಕ್ಕೆಭಜನೆಯ ಕಲೆಯ ಬಗ್ಗೆ ಇದುವರೆಗೂ ಯಾವುದೇ ರೀತಿಯ ಅಧ್ಯಯನಗಳು ನಡೆದಿರುವುದಿಲ್ಲ. ಆದ್ದರಿಂದ ಚಿತ್ರದುರ್ಗ ಪರಿಸರದ ಪ್ರದರ್ಶನಾತ್ಮಕ ಕಲೆಗಳಲ್ಲೊಂದಾದ ಚಕ್ಕೆಭಜನೆಯ ಸಾಂಸ್ಕೃತಿಕ ಅಧ್ಯಯನವನ್ನು ಕೈಗೊಂಡು ಇನ್ನೂ ಆಗಬೇಕಾಗಿರುವ ಸಂಶೋಧನಾ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗುವುದು.

Downloads

Download data is not yet available.

References

೧. ಕನ್ನಡ ವಿಷಯ ವಿಶ್ವಕೋಶ, ಜಾನಪದ., (ಪ್ರ.ಸಂ) ಡಾ. ಅರವಿಂದ ಮಾಲಗತ್ತಿ, (ಸಂ) ಡಾ. ಡಿ. ಕೆ. ರಾಜೇಂದ್ರ, ೨೦೦೬. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
೨. ಕರ್ನಾಟಕ ಸಂಶೋಧನಾ ಜಾನಪದ., (ಪ್ರ.ಸಂ) ಪ್ರೊ. ಅಂಬಳಿಕೆ ಹಿರಿಯಣ್ಣ, (ಸಂ) ಪ್ರೊ. ಎಂ. ವಿ. ನಾವಡ, ೨೦೧೪, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ.
೩. ಕರ್ನಾಟಕ ಜನಪದ ಕಲೆಗಳ ಕೋಶ., (ಸಂ) ಡಾ. ಹಿ. ಚಿ ಬೋರಲಿಂಗಯ್ಯ, ೨೦೧೫, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ.
೪. ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ-೧., (ಪ್ರ.ಸಂ) ಡಾ. ಎ. ಮುರಿಗೆಪ್ಪ, (ಸಂ) ಡಾ. ಸ. ಚಿ. ರಮೇಶ, ೨೦೨೨, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ.
೫. ದೇಸಿ ಕನ್ನಡ ಪರಂಪರೆ., ಡಾ. ಹಿ. ಚಿ. ಬೋರಲಿಂಗಯ್ಯ, ೨೦೧೬, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ.