ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಅಲ್ಲಿದೆ ನಮ್ಮನೆ ..... ಇಲ್ಲಿ ಬಂದೆ ಸುಮ್ಮನೆ !!

ಸೈಯದ್ ಮುಯಿನ್
ಕನ್ನಡ ಸಹಾಯಕ ಪ್ರಾಧ್ಯಾಪಕ ಕ್ರಿಸ್ತು ಜಯಂತಿ ಕಾಲೇಜು, ಸ್ವಾಯತ್ತ, ಬೆಂಗಳೂರು

Published 2024-03-01

Keywords

  • ಕಾವ್ಯ ಪ್ರಯೋಜನ, ಮನೆ, ಸಾವು

How to Cite

ಮುಯಿನ್ ಸ. (2024). ಅಲ್ಲಿದೆ ನಮ್ಮನೆ . ಇಲ್ಲಿ ಬಂದೆ ಸುಮ್ಮನೆ !! . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 74–80. https://doi.org/10.59176/kjksp.v3i1.2340

Abstract

ಪ್ರಸ್ತುತ ಲೇಖನವು ಕೆ. ಎಸ್. ನರಸಿಂಹಸ್ವಾಮಿ ಅವರ ಮನೆಯಿಂದ ಮನೆಗೆ ಕವನದ ವಿಶ್ಲೇಷಣೆಯಾಗಿದೆ. ಸಾವು ಮುಕ್ತಿಯ ಸಂಕೇತ, ಬದುಕಿನ ಜಂಜಾಟಗಳಿAದ, ನೋವು, ಪರದಾಟಗಳಿಂದ ಮುಕ್ತನಾಗುವ ಕ್ರಿಯೆ, ಸುಖ, ದುಖಗಳು ಶಾಶ್ವತವಲ್ಲ ಆದರೆ ಸಾವು ಶಾಶ್ವತವಾದುದು, ಸಾವು ಲೌಕಿಕ ಜಗತ್ತಿಗೆ ವಿದಾಯ ಮತ್ತು ಹೊಸ ಜಗತ್ತಿನಲ್ಲಿ ಹೊಸ ಜೀವನಕ್ಕೆ ಸ್ವಾಗತವನ್ನು ಒಳಗೊಂಡಿರುತ್ತದೆ. ಈ ಸತ್ಯದ ಕುರಿತಾಗಿ ಕವನ ಚರ್ಚೆ ಮಾಡುವುದು ಸೂಚ್ಯಾರ್ಥದ ಮೂಲಕ. ‘ಹೆಸರಿರದ ಇನ್ನೊಂದು ಮನೆಗೆ ಹೊಸತು ಹಳೆಯದು ಎಲ್ಲ ಯಾತ್ರೆ ಹೊರಟಿದ್ದೇವೆ’ ಎನ್ನುವ ಮಾತು ಆಧ್ಯಾತ್ಮಿಕ ಹುಟುಕಾಟವನ್ನು ಸೂಚಿಸುವಂತಹದ್ದಾಗಿದೆ. ಜೀವನದ ಕೊನೆಯಲ್ಲಿ ಹೊಸಬರು ಮತ್ತು ಹಳಬರು ಎಂಬ ಯಾವುದೇ ಭೇದ ಭಾವವಲ್ಲದೆ ಎಲ್ಲಾ ಜೀವರಾಶಿಗಳೂ ಆದರವಿರದ, ಹೆಸರಿರದ, ಕದವಿರದ ಇನ್ನೊಂದು ಮನೆಗೆ ಹೋಗಲೇಬೇಕಾಗುತ್ತದೆ. ಅದೇ ಕಡೆಯ ಮನೆಯಾಗಿದೆ. ತನ್ನ ಜೀವಿತ ಕಾಲದಲ್ಲಿ ಜೀವರಾಶಿಗಳು ಎಲ್ಲಿಯೇ ಹೊರಟರು ಕೊನೆಗೆ ಒಂದು ಶಾಶ್ವತ ಮನೆಯನ್ನು ಮುಟ್ಟಬೇಕಾಗುತ್ತದೆ ಎಂಬ ಜೀವನ ಸತ್ಯವನ್ನು ತಿಳಿಸಲು ಕವನ ಪ್ರಯತ್ನಿಸಿದೆ. ಕವನದ ನೈಜ ಸತ್ಯದ ಹುಡುಕಾಟ ಮಾಡಲು ಈ ಲೇಖನ ಪ್ರಯತ್ನಿಸಿದೆ.

Downloads

Download data is not yet available.

References

೧.ಮೈಸೂರು ಮಲ್ಲಿಗೆ : ಕೆ.ಎಸ್.ನರಸಿಂಹಸ್ವಾಮಿ, ಸ್ಟಾಂಡರ್ಡ್ ಬುಕ್ ಕಂಪನಿ, ಬೆಂಗಳೂರು, ೨೦೧೪
೨. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು:ವಿವಿಧ ಸಂಪಾದಕರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೧೫
೩. ಕನ್ನಡ ಸಾಹಿತ್ಯ ಚರಿತ್ರೆ: ಡಾ.ಎಸ್.ಎನ್.ಲಕ್ಷ್ಮೀನಾರಾಯಣ ಭಟ್ಟ, ಅಂಕಿತ ಪುಸ್ತಕ, ಬೆಂಗಳೂರು, ೨೦೧೫