ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಕವಿರಾಜ ಮಾರ್ಗ ಪೂರ್ವಯುಗದ ಶಾಸನಗಳಲ್ಲಿ ಕನ್ನಡ ಸಾಹಿತ್ಯ

ಲಕ್ಷ್ಮೀದೇವಿ ಎನ್
ಸಹಾಯಕ ಪ್ರಾಧ್ಯಾಪಕರು ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಚಿಕ್ಕಬಳ್ಳಾಪುರ

Published 2024-03-01

Keywords

  • ಶಾಸನಶಾಸ್ತ್ರ, ಬಹುಶಿಸ್ತೀಯ ಅಧ್ಯಯನ, ಅಂತರ್ ಶಿಸ್ತೀಯ ಅಧ್ಯಯನ

How to Cite

ಎನ್ ಲ. (2024). ಕವಿರಾಜ ಮಾರ್ಗ ಪೂರ್ವಯುಗದ ಶಾಸನಗಳಲ್ಲಿ ಕನ್ನಡ ಸಾಹಿತ್ಯ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 81–91. https://doi.org/10.59176/kjksp.v3i1.2341

Abstract

ಕರ್ನಾಟಕವು ಭವ್ಯವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಂಪರೆಗಳಂತೆಯೇ ಸಾಹಿತ್ಯಿಕ ಪರಂಪರೆಯನ್ನು ಹೊಂದಿದ ನಾಡಗಿದೆ. ಕನ್ನಡ ಭಾಷೆಗೆ ೨೦೦೦ ಹಾಗೂ ಲಿಪಿಗೆ ೧೬೦೦ವರ್ಷಗಳ ಇತಿಹಾಸವಿದೆ. ಕನ್ನಡ ನಾಡನ್ನು ಆಳಿದ ಅರಸು ಮನೆತನಗಳು ಕದಂಬರು, ಗಂಗರು, ರಾಷ್ಟçಕೂಟರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಅರಸರು ಮುಂತಾದ ರಾಜಮನೆತನಗಳು ಅವರವರ ಕಾಲದಲ್ಲಿ ಬರೆಯಿಸಿದ ಶಾಸನಗಳು ಕನ್ನಡ ಸಾಹಿತ್ಯದ ಬಗೆಗಿನ ಅಧ್ಯಯನಕ್ಕೆ ಆಧಾರವಾಗಿದೆ. ಹೀಗೆ ಶಾಸನಗಳು ಸಾಹಿತ್ಯಿಕ ಪರಂಪರೆಗೆ ಬುನಾದಿಯಾಗಿದೆ. ಕನ್ನಡ ಸಾಹಿತ್ಯದ ಕಾವ್ಯ ಮೀಮಾಂಸೆ, ಕನ್ನಡ ಛಂದಸ್ಸು, ಕನ್ನಡ ವಿಮರ್ಶೆ, ಕನ್ನಡ ವ್ಯಾಕರಗಣಗಳು ಇರುವ ಹಾಗೆ ಕನ್ನಡ ಶಾಸನ ಸಾಹಿತ್ಯ ಎಂಬುದು ಒಂದು ಇದೆಯೇ? ನಮ್ಮ ಈ ದಶಕದ ಸಾಹಿತ್ಯ ಸಂಶೋಧನೆಗಳು ಹಲವು ಧಾರೆಗಳಲ್ಲಿ ಮುಂದುವರೆದಿರುವುದರಿಂದ, ಅವುಗಳಲ್ಲಿ ಶಾಸನಶಾಸ್ತ್ರವು ಒಂದು. ಆದರೆ ಶಾಸನ ಒಂದೇ ಕನ್ನಡ ಸಾಹಿತ್ಯದ ನೆಲೆಗಟ್ಟು. ಇದರಿಂದಲೆ ಕನ್ನಡ ಸಾಹಿತ್ಯದ ಉಗಮ ಎಂಬ ಚೌಕಟ್ಟಿಗೆ ತುರುಕಲು ಆಗುವುದಿಲ್ಲ. ವಿಜ್ಞಾನ, ಕಲೆ, ಸಾಹಿತ್ಯ, ವಾಜ್ಮೀಯತೆ, ಶಾಸ್ತ್ರ, ಶಾಸನ ಇತ್ಯಾದಿಗಳೆಲ್ಲಾ ಸಂಶೋಧನ ವಲಯಗಳೇ ಆಗಿವೆ. ನಂತರದಲ್ಲಿ ಜಾನಪದ, ರಾಜಕೀಯ, ಆರ್ಥಿಕತೆ ಎಂಬ ಉನ್ನತ ಅಧ್ಯಯನದಲ್ಲೂ ಸಂಶೋಧನೆಗಳು ಬರುತ್ತದೆ. ಈ ವಿಚಾರಗಳನ್ನು ಗಮನಿಸಿದಾಗ ಶಾಸನಶಾಸ್ತ್ರ ಎಂಬುದು ಬಹುಶಿಸ್ತೀಯ ಹಾಗೂ ಅಂತರ್ ಶಿಸ್ತೀಯವಾಗುತ್ತದೆ.

          ಕನ್ನಡ ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವಾಗ ನಾವು ಕನ್ನಡ ನಾಡಿನ ಶಿಲಾಶಾಸನಗಳ ಮೊರೆ ಹೋಗಬೇಕಾಗುತ್ತದೆ. ಏಕೆಂದರೆ ಕಲ್ಲಿನ ಮತ್ತು ತಾಮ್ರ ಪಟಗಳ ಮೇಲೆ ಕೊರೆದ ಕನ್ನಡದ ಬರವಣಿಗೆಯೇ ನಮ್ಮ ಕನ್ನಡ ಸಾಹಿತ್ಯ ಪರಂಪರೆಯ ಪ್ರಾಚೀನತೆಗೆ ದೊರಕುವ ಮೊದಲ ಸಾಕ್ಷಿ. ಆಕರ ಸಾಮಾಗ್ರಿಗಳು ಶಾಸನಗಳು ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ ಇತಿಹಾಸವನ್ನು ಕರಾರುವಕ್ಕಾಗಿ ನಾವು ತಿಳಿದುಕೊಳ್ಳಲು ಅನುವಾಗುತ್ತದೆ. ನಮ್ಮಲ್ಲಿ ಶಾಸನ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಅದನ್ನು ಜಾನಪದ ದೃಷ್ಟಿಯಿಂದ, ಸಮಾಜ ಶಾಸ್ತ್ರೀಯ ದೃಷ್ಟಿಯಿಂದ, ಜನಾಂಗೀಯ ದೃಷ್ಟಿಯಿಂದ, ಚಾರಿತ್ರಿಕ ದೃಷ್ಟಿಯಿಂದ, ಸಾಹಿತ್ಯಿಕ ದೃಷ್ಟಿಯಿಂದ ಅಧ್ಯಯನ ಮಾಡಬೇಕಾಗುತ್ತದೆ.

Downloads

Download data is not yet available.

References

೧. ಪ್ರಜಾವಾಣಿ., ೧೨ ಜನವರಿ ೨೦೧೭
೨. ಮಧುಚ್ಛಂದ., ಕಪ್ಪೆ ಅರಭಟ್ಟನ ಮತ್ತೊಂದು ಶಾಸನ ಶೋಧ., ಬಾಲ ಸುಬ್ರಮಣ್ಯ ಜಿ. ೨೦೧೧
೩. ಕರ್ನಾಟಕ ವೈಭವ., ನೀಲಾ ಮಂಜುನಾಥ್., ೨೦೧೨., ಕನ್ನಡ ಮತ್ತು ಸಂಸ್ಕೃತಿ ಇಲಾಖೆ., ಕರ್ನಾಟಕ ಸರ್ಕಾರ.
೪. ಪ್ರಜಾಮಾಣಿ ಪತ್ರಿಕೆ., ೦೩ ಫೆಬ್ರವರಿ ೨೦೧೧