ಸಂಶೋಧನಾ ಲೇಖನದ ಸ್ವರೂಪ

 

ಲೇಖನದ ಶೀರ್ಷಿಕೆ

ಲೇಖಕರ ಹೆಸರು

ಪೂರ್ಣ ವಿಳಾಸ

ಇ-ಅಂಚೆ

ಸಾರಲೇಖ

ಲೇಖನದ ಮುಖ್ಯ ವಿಷಯ, ಉದ್ದೇಶ, ಸ್ವರೂಪ ಹಾಗೂ ವ್ಯಾಪ್ತಿಯನ್ನು ಕೆಲವೇ ಪದಗಳಲ್ಲಿ ಮುಖ್ಯಾಂಶಗಳಾಗಿ ತಿಳಿಸುವುದು. ಸಾರಲೇಖವು 200 ಪದಗಳಲ್ಲಿ ಸಂಕ್ಷಿಪ್ತಗೊಳಿಸುವುದು. ಅಕ್ಷರಗಳ ಗಾತ್ರ 12 ಇರಲಿ, ನುಡಿ(Nudi web 01 e) ಫಾಂಟ್‍ನ್ನು ಬಳಸಿ. ಸಾಲುಗಳ ನಡುವಿನ ಅಂತರವು 1.5 ಆಗಿರಲಿ. ಪೂರ್ಣ ಪತ್ರಿಕೆಯ ಗರಿಷ್ಠ 3000 ಪದಗಳು ಅಥವಾ ಗರಿಷ್ಠ 10 ಪುಟಗಳು ಮೀರದಂತಿರಲಿ.

ಪ್ರಮುಖ ಪದಗಳು: ಪರಿಕಲ್ಪನೆಗಳು, ಮುಖ್ಯವಾಗಿ ಕೇಂದ್ರೀಕರಿಸಿದ ಮೂಲಾಂಶದ ಪದಗಳು

ಪೀಠಿಕೆ

ಸಂಶೋಧನಾ ಪ್ರಬಂಧದ ಮೂಲ ಸ್ವರೂಪವನ್ನು ರಚಿಸುವುದು. ವಿಶಾಲವಾದ ತಾತ್ವಿಕ ಅರ್ಥದ ಮೂಲಕ ಪ್ರಬಂಧಕ್ಕೆ ಬೇಕಾದ ಪ್ರವೇಶಿಕೆಯನ್ನು ತರುವುದು. ನಿರ್ದಿಷ್ಠ ಕ್ಷೇತ್ರವನ್ನು ಸ್ಪಷ್ಟಪಡಿಸುವುದು ಹಾಗೂ ಆ ಕ್ಷೇತ್ರದ ಸೂಕ್ಷ್ಮ ಪರಿಚಯ ಮಾಡುವುದು.

ಉದ್ದೇಶಗಳು

ಪ್ರಬಂಧದ ಉದ್ದೇಶವನ್ನು ಸ್ಪಷ್ಠಪಡಿಸುವುದು. ಪ್ರಮುಖ ಅಂಶಗಳ ಮೂಲಕ ವರ್ತಮಾನದ ಚಿಂತನೆಗಳಿಗೆ ಅನುಗುಣವಾಗಿ ಉದ್ದೇಶಗಳು ರಚನೆಗೊಂಡಿರಬೇಕು.

ಸ್ವರೂಪ

ಸಂಶೋಧನೆಯೆಂಬುದು ಒಂದು ಕ್ಷೇತ್ರದ ಸಮಸ್ಯೆಗಳ ಮೂಲಕ ಪ್ರವೇಶ ಪಡೆದು ಪರಿಹಾರದ ಹಾದಿಯಲ್ಲಿ ತಾತ್ವಿಕತೆಗೆ ಒಳಪಡಿಸುವುದು, ಪ್ರಶ್ನೆಗಳು, ಚಿಂತನೆಗಳು, ಅಂಕಿಅಂಶಗಳು, ದಾಖಲೆಗಳು ಮೊದಲಾದ ವಿಚಾರಗಳ ಮೂಲಕ ಪ್ರಬಂಧದ ಸ್ವರೂಪವನ್ನು ವಿಷಯ ವಿಶ್ಲೇಷಣೆಯ ಮೂಲಕವೇ ಸ್ಪಷ್ಟಪಡಿಸುವುದು.

ವ್ಯಾಪ್ತಿ

ಸಂಶೋಧನಾ ಪ್ರಬಂಧವು ನಿರ್ದಿಷ್ಟ ವ್ಯಾಪ್ತಿಯನ್ನು ಹೊಂದಿರಬೇಕು. ಈ ವ್ಯಾಪ್ತಿಯ ನಿರ್ಧಿಷ್ಟತೆಯನ್ನು ಪೀಠಿಕೆಯಲ್ಲಿ ಸ್ಪಷ್ಟಪಡಿಸುವುದು. ವ್ಯಾಪ್ತಿಯು ಒಂದು ಕ್ಷೇತ್ರ, ವಿಷಯ ಹಾಗೂ ಅಂಶಗಳ ನಿರ್ದಿಷ್ಟ ಆಯ್ಕೆಯನ್ನು ಸೂಚಿಸುತ್ತದೆ.

ಪತ್ರಿಕೆಯ ಸ್ವರೂಪ

ಮುಖ್ಯ ಶೀರ್ಷಿಕೆ: ಗಾತ್ರ 16 ಇರಲಿ

ಉಪಶೀರ್ಷಿಕೆ: ಗಾತ್ರ 14 ಇರಲಿ

ಟಿಪ್ಪಣಿಗಳು :

ಕೊನೆ ಟಿಪ್ಪಣಿ: ಲೇಖನದ ಕೊನೆಯಲ್ಲಿ ಕೃತಿಯ ಹೆಸರು, ಪ್ರಕಟವರ್ಷ, ಪುಟಸಂಖ್ಯೆ ನೀಡುವುದು.

ಆಕರಗಳು: ಲೇಖನದಲ್ಲಿ ಬಳಸಿದ ಗ್ರಂಥಗಳ ಸೂಚಿ

ಇಲ್ಲಿ ಕೃತಿಗಳ ಮಾದರಿಯಲ್ಲಿ ವಿಂಗಡಿಸಬಹುದು

ಪತ್ರಿಕೆಗಳು

ಮಾನಪ್ಪ ನಾಯಕ, ‘ಚೆನ್ನಬಸಪ್ಪ ಕೋ’, “ಗಾಂಧೀಜಿಗೆ ಸಲ್ಲಬೇಕಾದ ನಿಜವಾದ ನ್ಯಾಯ”, ಪ್ರಬುದ್ಧ ಕರ್ಣಾಟಕ., ಸಂಪುಟ 51, ಸಂಚಿಕೆ 4, (1970) ಪುಟ ಸಂಖ್ಯೆ 53-64.

ಸಂಶೋಧನಾ ಕೃತಿಗಳು

ರಾಘವೇಂದ್ರರಾವ್ ಎಚ್. ಎಸ್, “ಹಾಡೆ ಹಾದಿಯ ತೋರಿತು ಬೇಂದ್ರೆ ಕುವೆಂಪು ಪುತಿನ ಕವಿತೆಗಳ ವಿಶಿಷ್ಟತೆಯ ಅಧ್ಯಯನ”, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು,(1995), ಪುಟ ಸಂಖ್ಯೆ 20-22

ಸಂಪಾದನಾ ಕೃತಿಗಳು

ಡಾ.ಸರ್ವೇಶ್ ಬಿ.ಎಸ್, ಚಂದ್ರಶೇಖರ್ ಎನ್., ಸೈಯದ್ ಮುಯಿನ್ ಹಾಗೂ ರವಿಶಂಕರ್ ಎ.ಕೆ., ಕನ್ನಡ ಸಾಹಿತ್ಯ : ನಾಟಕ, ರಂಗಭೂಮಿ ಮತ್ತು ಸಿನಿಮಾ, ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು, (2020)

ಮೂಲ ಕೃತಿಗಳು

ಕಲಬುರ್ಗಿ ಎಂ. ಎಂ, “ಕನ್ನಡ ಗ್ರಂಥ ಸಂಪಾದನ ಶಾಸ್ತ್ರ”, ಸಪ್ನ ಬುಕ್ ಹೌಸ್, ಬೆಂಗಳೂರು,(1972, 2012) ಪುಟ ಸಂಖ್ಯೆ 31

ಪರಾಮರ್ಶನ ಗ್ರಂಥಗಳು: ಲೇಖನ ರಚನೆಗಾಗಿ ಬಳಸಿದ ಅಧ್ಯಯನ ಕೃತಿಗಳ ಸೂಚಿ

ಸಾಲೆತ್ತೊರೆ ಬಿ.ಎ ಹಾಗೂ ದೇಸಾಯಿ ಪಾಂಡುರಂಗರಾಯರು, “ಕನ್ನಡ ನಾಡಿನ ಚರಿತ್ರೆ ಭಾಗ 1”, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (2009).

ರಾಜಪುರೋಹಿತ ಬಿ. ಬಿ, “ಭಾಷಾವಿಜ್ಞಾನ ತತ್ವ ಇತಿಹಾಸ ಮತ್ತು ಅನುಷ್ಠಾನ”, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (2012).

ಹಕ್ಕುಗಳು: ಲೇಖನದ ವಿಚಾರಗಳು ಆಯಾ ಲೇಖಕರಿಗೆ ಸಂಬಂಧಿಸಿರುತ್ತವೆ. ಲೇಖನದ ಪೂರ್ಣ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು ಅರ್ಜಿಯನ್ನು ತುಂಬಿ ಕಾಲೇಜಿಗೆ ಕಡ್ಡಾಯವಾಗಿ ಸಲ್ಲಿಸುವುದು. ಈ ಅರ್ಜಿಯು ನಮ್ಮ ಕಾಲೇಜಿನ ನಿಯತಕಾಲಿಕೆಯ ವೆಬ್ ಪುಟದಲ್ಲಿ ಲಭ್ಯವಿರುತ್ತದೆ.

ಈ ಅರ್ಜಿಯನ್ನು ತುಂಬಿ kjksp@kristujayanti.com ಈ ವಿಳಾಸಕ್ಕೆ ಇ-ಮೇಲ್ ಮಾಡುವುದು.

ಲೇಖಕರು ತಮ್ಮ ಹೆಸರು, ಪೂರ್ಣವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಲೇಖನದ ಜೊತೆಗೆ ಅಗತ್ಯವಾಗಿ ನಮೂದಿಸಿರಬೇಕು.

ಆಯ್ಕೆಯಾದ ಪತ್ರಿಕೆಯನ್ನು ಸಮಿತಿಯು ಪರಿಶೀಲಿಸಿ ಅದರ ಸ್ವಂತಿಕೆಯ ಕುರಿತಾಗಿ ಮೌಲ್ಯಮಾಪನ ಮಾಡಿ ಪರಿಗಣಿಸಲಾಗುವುದು.